ಸುಂಟಿಕೊಪ್ಪ, ಫೆ. ೨೯: ಸುಂಟಿಕೊಪ್ಪ ಗ್ರಾಮ ದೇವರ ೫ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ಸುಂಟಿಕೊಪ್ಪ ವ್ಯಾಪ್ತಿಯ ವಿವಿಧ ದೇವಸ್ಥಾನ ಸಮಿತಿಗಳ ಸಹಭಾಗಿತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊAದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಗ್ರಾಮ ದೇವರ ವಾರ್ಷಿಕ ಪೂಜೋತ್ಸವದ ಅಂಗವಾಗಿ ತಳಿರು ತೋರಣ ವಿವಿಧ ಬಗೆಯ ಬಣ್ಣ ಹೂಗಳಿಂದ ಸಿಂಗರಿಸಲಾಗಿತ್ತು.
ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ, ಶ್ರೀ ರಾಮ ಸೇವಾ ಸಮಿತಿ, ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಸಮಿತಿ, ಶ್ರೀ ಗೌರಿಗಣೇಶೋತ್ಸವ ಸಮಿತಿ, ಶ್ರೀ ಮಸಣಿಕಮ್ಮ ದೇವಸ್ಥಾನ ಸಮಿತಿ, ವೃಕ್ಷೆÆÃದ್ಭವ ಶ್ರೀ ಮಹಾಗಣಪತಿ ದೇವಾಲಯ ಸಮಿತಿ ಮಧುರಮ್ಮ ಬಡಾವಣೆ, ಟಿಸಿಎಲ್ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ, ಶ್ರೀದೇವಿಯ ಶ್ರೀ ಅಣ್ಣಪ್ಪ ದೇವಸ್ಥಾನ ಸಮಿತಿ, ಬಾಳೆಕಾಡು ಶ್ರೀ ಮುತ್ತಪ್ಪ ದೇವಸ್ಥಾನ, ಗದ್ದೆಹಳ್ಳ ಶ್ರೀ ಕೊಡಂಗಲ್ಲೂರು ಶ್ರೀ ಕುರುಂಬ ಭಗವತಿ ದೇವಾಲಯ, ಮದುರಮ್ಮ ಬಡಾವಣೆ ಶ್ರೀ ನಾಗದೇವತೆ, ಶ್ರೀ ಮಳೂರು ಬೆಳ್ಳಾರಿಕಮ್ಮ ದೇವಾಲಯ ಸಮಿತಿ, ಗದ್ದೆಹಳ್ಳದ ಬಸವೇಶ್ವರ ದೇವಾಲಯ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮ ದೇವರ ಬನದಲ್ಲಿ ಪೂಜಾ ಕಾರ್ಯಕ್ರಮ ಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನದ ಆರ್ಚಕ ಮಂಜುನಾಥ್ ಉಡುಪ ಅವರಿಂದ ಸ್ಥಳ ಶುದ್ಧಿ ಕಲಶದೊಂದಿಗೆ ಪೂಜಾ ವಿಧಿವಿಧಾನಗಳು ನಡೆದವು. ಕುಂಕುಮ ಪೂಜೆ, ಅಲಂಕಾರ ಪೂಜೆಯ ನಂತರ ೧೦.೩೦ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಬೆಳಿಗ್ಗೆ ೧೦.೩೦ ಗಂಟೆಯ ನಂತರ ಗ್ರಾಮ ದೇವರಿಗೆ ಹರಕೆ ಸಮರ್ಪಣೆ ನಡೆಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಗ್ರಾಮ ದೇವತೆಗೆ ಹರಕೆ ಒಪ್ಪಿಸಿ ಸಂತೃಪ್ತರಾದರು. ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಎ. ಶ್ರೀಧರ್ ಕುಮಾರ್, ದಿನು ದೇವಯ್ಯ, ಸುರೇಶ್ ಗೋಪಿ, ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಬಿ.ಕೆ. ಪ್ರಶಾಂತ್, ಶ್ರೀಧರನ್, ಶಿವಕುಮಾರ್, ಎ. ಲೋಕೇಶ್ ಕುಮಾರ್, ಬಿ.ಬಿ. ಭಾರತೀಶ್, ಶಾಂತರಾಮ್ ಕಾಮತ್, ಧನು ಕಾವೇರಪ್ಪ, ವಿಜಯನ್, ಎಂ.ಎಸ್. ಸುನಿಲ್, ಬಿ.ಎಂ. ಸುರೇಶ್ (ಪುಟ್ಟ), ಸುರೇಶ್ ಚಂದು, ಪಿ. ಲೋಕೇಶ್, ಎಸ್. ರವಿ, ಶ್ರೀರಾಮ ಸೇವಾ ಸಮಿತಿಯ ಕಾರ್ಯದರ್ಶಿ ಅಶೋಕ್ ಶೇಟ್, ಖಜಾಂಚಿ ಕೆ.ಪಿ. ಜಗನ್ನಾಥ್, ವಿವಿಧ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.