ಶನಿವಾರಸಂತೆ, ಫೆ. ೨೯: ಊರಿನಲ್ಲಿ ಮಠಗಳು, ವಿದ್ಯಾಮಂದಿರ ಗಳಿದ್ದರೆ ಆ ಊರು ಅಭಿವೃದ್ಧಿ ಹೊಂದಿ ಉದ್ಧಾರವಾಗುತ್ತದೆ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಕೊಡ್ಲಿಪೇಟೆಯ ಶ್ರೀಕ್ಷೇತ್ರ ಕಲ್ಲಳ್ಳಿಮಠ ಹಾಗೂ ವೀರಶೈವ ಮಂಡಳಿ ವತಿಯಿಂದ ಮಠದ ಆವರಣದಲ್ಲಿ ನಡೆದ ಶ್ರೀ ಗುರುಪೀಠ ಕಲ್ಲಳ್ಳಿಮಠದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೈಕೋರ್ಟ್ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಎಸ್. ಚಂದ್ರಮೌಳಿ ಮಾತನಾಡಿ, ಇಂದು ಸಂಸ್ಕಾರ-ಸAಪ್ರದಾಯಗಳು ನಶಿಸಿ ಹೋಗುತ್ತಿದ್ದು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಠಗಳು-ಸ್ವಾಮೀಜಿಗಳು ತಮ್ಮದೇ ಆದ ಕೊಡುಗೆಗಳನ್ನು ಸಲ್ಲಿಸಬೇಕು. ದೈನಂದಿನ ಬದುಕಿನಲ್ಲಿ ಮಠ ಮಂದಿರಗಳ ಪಾತ್ರ ಮಹತ್ತರವಾದದ್ದು ಎಂದರು.

ಕಲ್ಲಳ್ಳಿ ಮಠಾಧೀಶರಾದ ರುದ್ರಮುನಿ ಸ್ವಾಮೀಜಿ ಮಾತನಾಡಿ ದೇವರ ಪ್ರಾರ್ಥನೆಯಿಂದ ಅಂತರAಗ -ಬಹಿರಂಗ ಶುದ್ಧವಾಗಿರಲು ಸಾಧ್ಯ. ಭಕ್ತಿ, ಶ್ರದ್ಧೆ ಇದ್ದರೇ ಮಠ ಮಾನ್ಯಗಳು ಬೆಳೆಯುತ್ತವೆ ಎಂದರು.

ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮಠ ಮಾನ್ಯಗಳ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು, ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮುದಾಯವನ್ನು ಜಾಗೃತಗೊಳಿಸಬೇಕು ಎಂದರು.

ಸಮಾರAಭದಲ್ಲಿ ಸಾನಿಧ್ಯ ವಹಿಸಿ ನೂತನ ಕಟ್ಟಡವನ್ನು ನೊಣವಿನಕೆರೆ ಕಾಡುಸಿದ್ಧೇಶ್ವರ ಮಠಾಧೀಶ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಉದ್ಘಾಟಿಸಿದರು. ಕಲ್ಲುಮಠದ ಮಹಾಂತ ಸ್ವಾಮೀಜಿ, ಮಾದ್ರೆ ಗ್ರಾಮದ ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತಪೋವನ ಕ್ಷೇತ್ರ ಮನೆಹಳ್ಳಿಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ನಿರಂಜನ ಸ್ವಾಮೀಜಿ, ಕೆಸತ್ತೂರು ಮಠಾಧೀಶ ಬಸವರಾಜೇಂದ್ರ ಸ್ವಾಮೀಜಿ, ಚಂಗಡಹಳ್ಳಿ ಮಠಾಧೀಶ ಬಸವ ರಾಜೇಂದ್ರ ಸ್ವಾಮೀಜಿ ಹಾಗೂ ಅರಕಲಗೂಡು ದೊಡ್ಡಮಠದ ಸ್ವಾಮೀಜಿ ಆಶೀರ್ವಚನ ನೀಡಿದರು.

ಅರಕಲಗೂಡು ದಾನಿ ಕ್ರಷರ್ ಸುರೇಶ್ ರುದ್ರಮುನಿ ಮಾತನಾಡಿದರು. ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ವರಪ್ರಸಾದ್ ವಹಿಸಿದ್ದರು. ಗಂಗಾ ವೀರಶೈವ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗದಗಿನ ಕಲಾವಿದ ಮಾಹಾಂತೇಶ್ ಮತ್ತು ತಂಡದವರು ಧಾರ್ಮಿಕ ಪ್ರವಚನ ನೀಡಿದರು.

ದಾನಿಗಳಾದ ಯು.ಎಸ್.ಎ.ಯ ವಿಜಯಕುಮಾರ್, ನಂಜಮ್ಮ, ಕಾವ್ಯ, ಬಿ.ಕೆ. ಯತೀಶ್, ಕೆ.ಎಂ. ನಾಗೇಶ್, ಎಚ್.ಸಿ. ಯತೀಶ್ ಕುಮಾರ್, ಯು.ಪಿ. ನಾಗೇಶ್, ಡಿ.ವಿ. ದಿನೇಶ್, ಸಿ.ಟಿ. ನಾಗರಾಜ್, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ಜಿಲ್ಲಾ ವೀರಶೈವ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಬಿ. ಹಾಲಪ್ಪ, ಕೊಡ್ಲಿಪೇಟೆ ವೀರಶೈವ ಸಮಾಜದ ಉಪಾಧ್ಯಕ್ಷ ಎಚ್.ಸಿ. ಯತೀಶ್ ಕುಮಾರ್, ಕಾರ್ಯದರ್ಶಿ ಲಿಂಗರಾಜ್, ನಿರ್ದೇಶಕರು, ಅರ್ಚಕರ ಸಂಘದ ಕಾರ್ಯದರ್ಶಿ ಸೋಮಶೇಖರ್ ಶಾಸ್ತಿçÃ, ಮತ್ತಿತರರು ಪ್ರಮುಖರು ಉಪಸ್ಥಿತರಿದ್ದರು.

ಗಂಗಾ ವೀರಶೈವ ಮಹಿಳಾ ಸಮಾಜದ ಸದಸ್ಯೆಯರು ಪ್ರಾರ್ಥಿಸಿದರು. ವೀರಶೈವ ಮಂಡಳಿ ಉಪಾಧ್ಯಕ್ಷ ಎಚ್.ಸಿ. ಯತೀಶ್ ಕುಮಾರ್ ಸ್ವಾಗತಿಸಿದರು. ವೀಣಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.