ಕೂಡಿಗೆ, ಫೆ. ೨೯: ಹಾರಂಗಿ ಅಣೆಕಟ್ಟೆಯ ಸಮೀಪದಿಂದ ಮುಖ್ಯ ನಾಲೆಯ ೬ ತೂಬಿನವರೆಗೆ ನಡೆಯುತ್ತಿರುವ ರೂ. ೪೯ ಕೋಟಿ ವೆಚ್ಚದ ಮುಖ್ಯ ನಾಲೆಯ ದುರಸ್ತಿ, ನಾಲೆಯ ಎರಡೂ ಕಡೆಗಳಲ್ಲಿ ಕಾಂಕ್ರೀಟಿಕರಣ, ಕಿರು ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮೈಸೂರು ವಿಭಾಗದ ನೀರಾವರಿ ಇಲಾಖೆಯ ಕಾಮಗಾರಿಗಳ ಗುಣಮಟ್ಟದ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿತು.
ಈ ಸಂದರ್ಭ ಮೈಸೂರು ವಿಭಾಗದ ಹಿರಿಯ ಅಭಿಯಂತರ ಸತೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಗೋವರ್ಧನ, ಕಾಮಗಾರಿ ಗುಣಮಟ್ಟದ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ನರೇಂದ್ರ ಬಾಬು, ಹಾರಂಗಿ ವಿಭಾಗದ ಸಹಾಯಕ ಇಂಜಿನಿಯರ್ಗಳಾದ ಕವಿ ಪ್ರಸಾದ್, ಹರೀಶ್ ಸೇರಿದಂತೆ ಹಾರಂಗಿ ನೀರಾವರಿ ಇಲಾಖೆಯ ಇಂಜಿನಿಯರ್ಗಳಾದ ಕಿರಣ್, ಸೌಮ್ಯ, ಗುತ್ತಿಗೆ ಪಡೆದ ಸಂಸ್ಥೆಯ ಮುಖ್ಯಸ್ಥ ಬಾಬು, ಇಂಜಿನಿಯರ್ ರಾಜಣ್ಣ ಮತ್ತಿತರರು ಹಾಜರಿದ್ದರು.