ಮಡಿಕೇರಿ, ಫೆ. ೨೯: ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಸಂಘದ ಕ್ರೀಡೋತ್ಸವ ವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ ಭಟ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಕ್ರೀಡೋತ್ಸವವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅಧ್ಯಕ್ಷೆ ಸವಿತಾ ಭಟ್ ಅವರು, ಮಹಿಳೆಯರು ಸದಾ ತಮ್ಮ ಸಂಸಾರ, ಮನೆ, ಮಕ್ಕಳು ಎಂದು ಜೀವನ ನಡೆಸುತ್ತಿರುತ್ತಾರೆ. ಕ್ರೀಡೋತ್ಸವದಂತಹ ಕಾರ್ಯಕ್ರಮಗಳು ಇವರಲ್ಲಿ ಲವಲವಿಕೆಯನ್ನು, ಉತ್ಸಾಹವನ್ನು ತುಂಬುತ್ತದೆ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಲೂ ಸಹಕರಿಸುತ್ತದೆ ಎಂದರು.
ಸAಘದ ಸದಸ್ಯೆಯರಿಗೆ ಕೇರಂ, ಚೆನ್ನೆಮಣೆ, ಚೌಕಾಬಾರ ಹಾಗೂ ವಿವಿಧ ಒಳಾಂಗಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕೇರಂನಲ್ಲಿ ವಸಂತಿ ಪೂಣಚ್ಚ ಪ್ರಥಮ, ಗೀತಾ ಮಧುಕರ್ ದ್ವಿತೀಯ ಹಾಗೂ ಶಾಂತಿ ಅಚ್ಚಯ್ಯ ತೃತೀಯ ಸ್ಥಾನ ಗಳಿಸಿದರು.
ಚೆನ್ನೆಮಣೆಯಲ್ಲಿ ಶೋಭಾ ಎ.ಎಸ್. ಪ್ರಥಮ, ಮಲರ್ ಮಣಿ ದ್ವಿತೀಯ ಹಾಗೂ ರೂಪಾ ಸುಮಂತ್ ತೃತೀಯ ಸ್ಥಾನ ಗಳಿಸಿದರು. ಚೌಕಾಬಾರದಲ್ಲಿ ರೂಪಾ ಸುಮಂತ್ ಪ್ರಥಮ, ಗಂಗಮ್ಮ ಟಿ.ಎಸ್. ದ್ವಿತೀಯ ಹಾಗೂ ನಿರ್ಮಲಾ ದಿವಾಕರ್ ತೃತೀಯ ಸ್ಥಾನ ಗಳಿಸಿದರು. ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ದೀಕ್ಷಾ ಸಂತೋಷ್ ಪ್ರಥಮ, ಸ್ವರ್ಣಲತಾ ಭಟ್ ದ್ವಿತೀಯ ಸ್ಥಾನ ಗಳಿಸಿದರು. ಬಕೆಟ್ಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ದಿವ್ಯಾ ರಂಗನಾಥ್ ಪ್ರಥಮ ಹಾಗೂ ಸುಶೀಲಾ ಕುಶಾಲಪ್ಪ ದ್ವಿತೀಯ ಸ್ಥಾನ ಗಳಿಸಿದರು. ಗುರಿ ಎಸೆತ ಸ್ಪರ್ಧೆಯಲ್ಲಿ ಕುಂತಿ ಬೋಪಯ್ಯ ಪ್ರಥಮ, ಮೇಘನಾ ದ್ವಿತೀಯ ಸ್ಥಾನ ಗಳಿಸಿದರು. ಬುಕ್ ಬ್ಯಾಲೆನ್ಸಿಂಗ್ ಸ್ಪರ್ಧೆಯಲ್ಲಿ ೭೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಗಂಗಮ್ಮ ಪ್ರಥಮ, ಜಯಶೀಲಾ ದ್ವಿತೀಯ ಸ್ಥಾನ ಗಳಿಸಿದರು. ೬೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮೀನಾಕುಮಾರಿ ಪ್ರಥಮ, ವಸಂತಿ ಪೂಣಚ್ಚ ದ್ವಿತೀಯ ಸ್ಥಾನ ಗಳಿಸಿದರು. ೬೦ ವರ್ಷ ಕೆಳಗಿನ ವಿಭಾಗದಲ್ಲಿ ರಾಜೇಶ್ವರಿ ಪ್ರಥಮ, ವಸಂತಿ ಪೂಣಚ್ಚ ದ್ವಿತೀಯ ಸ್ಥಾನ ಗಳಿಸಿದರು. ಬಾಂಬ್ ಇನ್ ದ ಸಿಟಿ ಆಟದಲ್ಲಿ ಮೈನಾವತಿ ಪ್ರಥಮ, ಮಲರ್ ಮಣಿ ದ್ವಿತೀಯ ಸ್ಥಾನ ಗಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಶ್ಯಾಮಲಾ ದಿನೇಶ್, ನಿರ್ದೇಶಕರುಗಳಾದ ಶೈಲಾ ಮಂಜುನಾಥ್, ಉಮಾ ಈಶ್ವರ್, ವಸುಂಧರಾ ಪ್ರಸನ್ನ, ಕಮಲಾ ಸುಬ್ಬಯ್ಯ, ಪ್ರೇಮಾ ರಾಘವಯ್ಯ, ವಸಂತಿ ಪೂಣಚ್ಚ, ಭಾರತಿ ರಮೇಶ್, ಆಯುಷಾ ಹಮೀದ್, ಜಯಶೀಲಾ ಪ್ರಕಾಶ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕಾರ್ಯಕ್ರಮದ ಮೊದಲು ಸಂಘದ ಸದಸ್ಯರಾದ ಪ್ರೇಮ ರಾಘವಯ್ಯ ಅವರು ಪ್ರಾರ್ಥಿಸಿದರು.