ನಾಪೋಕ್ಲು, ಫೆ. ೨೯: ಕನ್ನಡ ನಾಡಿನ ಹಾಗೂ ಕೊಡಗಿನ ಕಾವೇರಿ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ. ಕಾವೇರಿ ನದಿಯ ಒಡಲು ತುಂಬಿದರೆ ಮಾತ್ರ ಇತರ ಜಲಮೂಲಗಳಿಗೆ ಆಸರೆ. ಆದರೆ, ಕಾವೇರಿ ನದಿಯಲ್ಲಿಯೇ ನೀರಿಲ್ಲ ಎಂದಾದರೆ ಬೇರೆಲ್ಲಿಯೂ ನೀರಿರಲು ಸಾಧ್ಯ ಎನ್ನುವುದು ಜನರ ಮಾತು. ಮಳೆ ವಿಳಂಬವಾದರೆ ಅಥವಾ ಒಂದೆರಡು ಮಳೆ ಮಾತ್ರ ಸುರಿದರೆ ಜನರು ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಕೂಡ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಬಹುದು ಎನ್ನುವುದು ಹಿರಿಯರ, ಅನುಭವಿಗಳ ಮಾತು.

ಭಾಗಮಂಡಲದಿAದ ಬಲ್ಲಮಾವಟಿ ಗ್ರಾಮದವರೆಗೆ ಕಾವೇರಿ ಸಣ್ಣ ಪ್ರಮಾಣದಲ್ಲಿ ಹರಿಯುತ್ತಾಳೆ. ಬಲ್ಲಮಾವಟಿಯ ಬಳಿ ಎರಡು ಹೊಳೆಗಳು ಸಂಗಮವಾದ ನಂತರ ಕಾವೇರಿ ನೀರಿನ ಹರಿವು ವಿಸ್ತಾರವಾಗುತ್ತದೆ. ನಾಪೋಕ್ಲು ಬಳಿ ಕಕ್ಕಬ್ಬೆ ಹೊಳೆಯ ಸಂಗಮದೊAದಿಗೆ ಕಾವೇರಿ ನದಿ ತುಂಬಿ ತುಳುಕುತ್ತದೆ. ಬಲಮುರಿ, ಭೇತ್ರಿಗಳಲ್ಲಿ ಬೃಹದ್ಧಾಕಾರವಾಗಿ ಹರಿಯುತ್ತದೆ. ಆದರೆ, ಈ ವರ್ಷದ ಬಿಸಿಲ ಧಗೆಗೆ ನಾಪೋಕ್ಲುವಿನಲ್ಲಿಯೇ ನದಿಯಲ್ಲಿ ನೀರಿಲ್ಲದಂತಾಗಿದೆ. ಮುಂದೆ ಸಾಗಿದಂತೆ ಬಲಮುರಿ, ಬೇತ್ರಿಗಳಲ್ಲಿ ಕಾವೇರಿ ನದಿಯಲ್ಲಿ ನೀರಿಗಿಂತ ಕಲ್ಲುಗಳನ್ನು ಹೆಚ್ಚಾಗಿ ಕಾಣುವ ಪರಿಸ್ಥಿತಿ ಎದುರಾಗಿದೆ.

ಪಿಂಡ ಪ್ರದಾನಕ್ಕೂ ತೊಂದರೆ: ಭಾಗಮಂಡಲದ ನಂತರ ಜಿಲ್ಲೆಯ ಎರಡನೆಯ ಪಿಂಡ ಪ್ರದಾನದ ಪವಿತ್ರ ಸ್ಥಳ ಬಲಮುರಿ. ಇಲ್ಲಿಯೂ ಕಾವೇರಿ ನದಿಯ ನೀರಿನ ಹರಿಯುವಿಕೆ ಕಡಿಮೆಯಾಗಿದೆ. ಪ್ರತೀ ವರ್ಷ ಮೇ ತಿಂಗಳಲ್ಲಿ ಕಂಡು ಬರುತ್ತಿರುವ ನೀರಿನ ಪ್ರಮಾಣ ಈಗ ಕಾಣುತ್ತಿದೆ. ಈಗಲೇ ಅಗಸ್ತೆö್ಯÃಶ್ವರ ದೇವಳದಿಂದ ಕಾಲ್ನಡಿಗೆಯಲ್ಲಿ ನದಿ ದಾಟಿ ಪಕ್ಕದ ಕಣ್ವಮುನೀಶ್ವರ ದೇವಳಕ್ಕೆ ಹೋಗಬಹುದಾಗಿದೆ. ಬಿಸಿಲಿನ ಬೇಗೆ ಇದೇ ರೀತಿ ಮುಂದುವರಿದರೆ, ಭಕ್ತರಿಗೆ ಪಿಂಡ ಪ್ರದಾನಕ್ಕೂ ನೀರಿನ ಸಮಸ್ಯೆ ಎದುರಾದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಶ್ರೀ ಅಗಸ್ತೆö್ಯÃಶ್ವರ ದೇವಳದ ಅರ್ಚಕ ಡಾ. ಮಹಬಲೇಶ್ವರ ಭಟ್.

- ಪಿ.ವಿ. ಪ್ರಭಾಕರ್