ಮಡಿಕೇರಿ, ಮಾ. ೧: ಜಿಲ್ಲೆಯ ೧೯ ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಪ್ರಸಕ್ತ ಶೈಕ್ಷಣಿಕ ಸಾಲಿನ ಮೊದಲ ಪರೀಕ್ಷೆಯನ್ನು ಉತ್ಸಾಹದಿಂದ ೪೩೫೧ ವಿದ್ಯಾರ್ಥಿಗಳು ಎದುರಿಸಿದರು.
ಒಟ್ಟು ೪೪೩೯ ವಿದ್ಯಾರ್ಥಿಗಳ ಪೈಕಿ ೪೩೫೧ ವಿದ್ಯಾರ್ಥಿಗಳು ಹಾಜರಾದರು. ೮೮ ವಿದ್ಯಾರ್ಥಿಗಳು ಗೈರಾದರು. ಈ ಮೂಲಕ ಶೇ. ೯೮.೦೭ ಗುರಿ ಸಾಧಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಮೂರ್ನಾಡು ಪಿಯು ಕಾಲೇಜು, ಗೋಣಿಕೊಪ್ಪ ಕಾವೇರಿ ಪಿಯು ಕಾಲೇಜು, ನಾಪೋಕ್ಲು ಜಿಪಿಯುಸಿ, ಪೊನ್ನಂಪೇಟೆ ಜಿಪಿಯುಸಿ, ಸೋಮವಾರಪೇಟೆ ಜಿಪಿಯುಸಿ, ವೀರಾಜಪೇಟೆ ಜಿಪಿಯುಸಿ, ಮಡಿಕೇರಿ ಜಿಪಿಯುಸಿ, ಕುಶಾಲನಗರ ಜಿಪಿಯುಸಿ, ಅರುಣ ಪಿಯು ಕಾಲೇಜು, ಕೊಡ್ಲಿಪೇಟೆ ಪಿಯು ಕಾಲೇಜು, ಶ್ರೀಮಂಗಲ ಪಿಯು ಕಾಲೇಜು, ಶನಿವಾರಸಂತೆ ಪಿಯು ಕಾಲೇಜು, ಮಡಿಕೇರಿ ಸಂತ ಮೈಕಲರ ಕಾಲೇಜು, ಜಿಪಿಯುಸಿ ನೆಲ್ಯಹುದಿಕೇರಿ, ಕೂಡಿಗೆ ಜಿಪಿಯುಸಿ, ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು, ಕುಶಾಲನಗರ ಕನ್ನಡ ಭಾರತಿ ಪಿಯು ಕಾಲೇಜು, ಸುಂಟಿಕೊಪ್ಪ ಜಿಪಿಯುಸಿ, ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜುಗಳಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಯಿತು.