ಪೆರಾಜೆ, ಫೆ. ೨೯: ಇಲ್ಲಿಯ ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲದ ಸಹಕಾರದಲ್ಲಿ ಕಾಫಿ ಕೃಷಿಯ ಬಗ್ಗೆ ಸಮಗ್ರ ಮಾಹಿತಿ ಹಾಗೂ ಮಣ್ಣು ಪರೀಕ್ಷೆ ಕಾರ್ಯಾಗಾರವನ್ನು ಮಡಿಕೇರಿಯ ಕಾಫಿ ಬೋರ್ಡ್ ವತಿಯಿಂದ ನಡೆಸಲಾಯಿತು.
ಈ ಸಂದರ್ಭ ಮಣ್ಣು ವಿಜ್ಞಾನಿ ಡಾ. ನಡಾಪ್ ಅವರು ಮಣ್ಣಿನ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಕಾಫಿ ಗಿಡಗಳ ಆರೈಕೆ, ರಸಗೊಬ್ಬರಗಳು, ಗಿಡಗಳ ಸವರುವಿಕೆ ಬಗ್ಗೆ ಮಾಹಿತಿಯನ್ನು ಕಾಫಿ ಬೋರ್ಡ್ನ ಸಿಬ್ಬಂದಿಗಳಾದ ಸನೀಸ್, ಪದ್ಮಭೂಷಣ್ ನೀಡಿದರು.
ಗ್ರಾಮದ ರೈತರು ತಮ್ಮ ತೋಟಗಳಿಂದ ತಂದ ಮಣ್ಣಿನ ಮಾದರಿಯನ್ನು ಕಾರ್ಯಕ್ರಮದಲ್ಲಿ ಪರೀಕ್ಷಿಸಿ ಫಲಿತಾಂಶ ಪಡೆದುಕೊಂಡರು. ಮಣ್ಣಿನಲ್ಲಿ ಇರುವ ಸಮಸ್ಯೆಗಳನ್ನು ರೈತರಿಗೆ ತಿಳಿಸಿ ಇದನ್ನು ಸರಿಪಡಿಸಲು ಕೆಲವೊಂದು ಗೊಬ್ಬರಗಳನ್ನು ಶಿಫಾರಸು ಮಾಡಲಾಯಿತು.
ಈ ಸಂದರ್ಭ ಕಾಫಿ ಬೋರ್ಡ್ ಮಡಿಕೇರಿ ಸಿಬ್ಬಂದಿಗಳಾದ ಸುಚಿತ್ರ, ಮದು, ಚಿಗುರು ಯುವಕ ಮಂಡಲದ ಅಧ್ಯಕ್ಷ ಭುವನ್ ಕುಂಬಳಚೇರಿ, ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕ ಜಯರಾಮ್ ನಿಡ್ಯಮಲೆ, ಬೆಳೆಗಾರ ಚಿದಾನಂದ ಮಜಿಕೋಡಿ ಸೇರಿದಂತೆ ಚಿಗುರು ಯುವಕ ಮಂಡಲದ ಸದಸ್ಯರು, ಜನಪ್ರತಿನಿಧಿಗಳು, ವಿವಿಧ ಸಂಘ-ಸAಸ್ಥೆಯ ಸದಸ್ಯರು, ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.