ವೀರಾಜಪೇಟೆ, ಫೆ. ೨೯: ಕೇಂದ್ರ ಸರಕಾರ ಹತ್ತು ವರ್ಷದಲ್ಲಿ ಬಡವರಿಗೆ, ರೈತರಿಗೆ, ಮಹಿಳೆಯರಿಗೆ, ಯುವಕರೂ ಸೇರಿದಂತೆ ಎಲ್ಲಾ ಜನರಿಗೂ ರೂಪಿಸಿರುವ ಯೋಜನೆಯ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಕರ್ತರು ಜನರ ಮನೆ ಮನೆಗೆ ತಲುಪಿಸುವÀ ಕೆಲಸ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ, ಮೈಸೂರು ಕೊಡಗು ಸಂಸದ ಕ್ಷೇತ್ರದ ಬಿಜೆಪಿ ಪಕ್ಷದ ಉಸ್ತುವಾರಿ ಡಾ. ಅಶ್ವತ್ ನಾರಾಯಣ ಕರೆ ನೀಡಿದರು.

ಬಿಜೆಪಿ ಪಕ್ಷದ ವೀರಾಜಪೇಟೆ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಶ್ವಥ್ ನಾರಾಯಣ, ಕೇಂದ್ರ ಸರಕಾರದ ಅಭಿವೃದ್ಧಿ ಕೆಲಸಗಳ ಬಗ್ಗೆ ಕಾರ್ಯಕರ್ತರು ನಿರ್ಣಯ ಮಾಡುತ್ತಾರೆ. ಆದರೆ ಹಾದಿ ಬೀದಿ ಯಲ್ಲಿ ಚರ್ಚೆ ಬೇಡ. ವಿರೋಧಿಗಳಿಗೆ ಅವಕಾಶ ನೀಡದೆ ಪಕ್ಷಕ್ಕೂ ಧಕ್ಕೆಯಾಗ ದಂತೆ ನೋಡಿಕೊಳ್ಳಬೇಕು ಎಂದರು.

ಕೇAದ್ರದ ಮೋದಿ ಸರಕಾರ ಉತ್ತಮ ಅಭಿವೃದ್ಧಿ ಹಾಗೂ ಜನಪರ ಕೆಲಸ ಮಾಡಿದ್ದು, ದೇಶವನ್ನು ವಿಶ್ವ ಗುರುವಾಗಿಸುವ ಗುರಿ ಇಟ್ಟುಕೊಂಡಿದೆ. ಕಾರ್ಯಕರ್ತರು ಮನೆ ಮನೆಗಳನ್ನು ತಲುಪಿ ಕೇಂದ್ರ ಸರಕಾರದ ಅಭಿವೃದ್ಧಿ ಯೋಜನೆಯ ಬಗ್ಗೆ ಜನರಿಗೆ ವಿಚಾರ ಮುಟ್ಟಿಸುವ ಕೆಲಸ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ಯಾವುದೇ ರೀತಿ ಅಭ್ಯರ್ಥಿ ಬಗ್ಗೆ ಗೊಂದಲ ಬೇಡ ಅದು ಪಕ್ಷದ ವರಿಷ್ಠರ ತೀರ್ಮಾನವಾಗಿರುತ್ತದೆ. ಇಲ್ಲಿನ ಸಂಸದರು ಹತ್ತು ವರ್ಷದಲ್ಲಿ ಉತ್ತಮ ಜನಪರ ಕೆಲಸ ಮಾಡಿರುವುದಾಗಿ ಹೇಳಿದರು.

ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡಿ ಕೊಡಗಿನಲ್ಲಿ ವೈದ್ಯಕೀಯ ಕಾಲೇಜು ಸೇರಿದಂತೆ

(ಮೊದಲ ಪುಟದಿಂದ) ಹಲವಾರು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಕೊಡವ ಹಾಕಿ, ಕೊಡವ ಒಕ್ಕೂಟ, ದಸರಾ ಸೇರಿದಂತೆ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಅನುದಾನ ನೀಡುವ ಮೂಲಕ ಉತ್ತಮ ಕೆಲಸಗಳನ್ನು ಮಾಡಿರುವುದಾಗಿ ತಿಳಿಸಿದರು. ಮೈಸೂರು ಕುಶಾಲನಗರ ನಾಲ್ಕು ಪಥದ ರಸ್ತೆ ಕೆಲಸ ೧೫ ತಿಂಗಳಲ್ಲಿ ಮುಗಿಯುತ್ತದೆ, ಪಕ್ಷದ ಕಾರ್ಯಕರ್ತರು ಪಕ್ಷದ ಅಭಿವೃದ್ಧಿ ಕೆಲಸವನ್ನು ಜನರಿಗೆ ಮುಟ್ಟಿಸುವಂತಾಗಬೇಕು ಎಂದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೆ ಬಾರಿಯೂ ಪ್ರಧಾನಿಯಾಗಬೇಕೆಂಬ ಮಹತ್ವದ ಜವಾಬ್ದಾರಿಯಾಗಿದೆ. ಈಗ ನಾವು ಯುದ್ಧಕ್ಕೆ ಹೊರಟಿದ್ದೇವೆ. ಗೆಲ್ಲಬೇಕು ಎನ್ನುವ ಛಲದಿಂದ ಹೋರಾಟ ಮಾಡಬೇಕಾಗಿದೆ. ಅತಿಯಾದ ಆತ್ಮ ವಿಶ್ವಾಸ ಬೇಡ, ಮೂಲಭೂತ ಸೌಕರ್ಯದ ಜೊತೆಗೆ ದೇಶದ ಹಿತಾಶಕ್ತಿ ಮುಖ್ಯವಾಗಿರುತ್ತದೆ. ದೇಶದ ಏಕತೆ ಅಖಂಡತೆಯನ್ನು ಕಾಪಾಡಬೇಕು. ಇಲ್ಲವಾದರೆ ನಾವು ನಮ್ಮ ಪವಿತ್ರ ದೇಗುಲ ವಿಧಾನ ಸೌಧದಲ್ಲಿ ಪಾಕಿಸ್ತಾನ ಘೋಷಣೆಯಂತ ಘಟನೆಯನ್ನು ಕಾಣಬೇಕಾದೀತು. ಕೊಡಗೂ ಸೂಕ್ಷö್ಮ ಪ್ರದೇಶ ಇಲ್ಲಿ ಯಾವುದೇ ಆಂತರಿಕ ವ್ಯತ್ಯಾಸವಾದರೆ ಗಂಭೀರ ಪರಿಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವೀರಾಜಪೇಟೆ ಬಿಜೆಪಿ ಮಂಡಲದ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ವಹಿಸಿ ಮಾತನಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ವೀರಾಜಪೇಟೆ ಮಂಡಲದ ಪ್ರಧಾನ ಕಾರ್ಯದರ್ಶಿ ಅಜಿತ್ ಕರುಂಬಯ್ಯ, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲಿರ ಚಲನ್ ಕುಮಾರ್, ವಿ.ಕೆ ಲೋಕೇಶ್, ಮಹೇಶ್ ಜೈನಿ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷ ಮಡಿಕೇರಿ ನಗರ ಸಭಾಧ್ಯಕ್ಷೆ ಅನಿತಾ ಪೂವಯ್ಯ, ಬೀನಾ ಬೊಳ್ಳಮ್ಮ ಯಮುನ ಚಂಗಪ್ಪ, ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಪೂಣಚ್ಚ, ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷ ಪರಮೇಶ್ವರ, ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಅಪ್ರು ರವೀಂದ್ರ, ರಾಜ್ಯ ಶಿಸ್ತು ಸಮಿತಿ ಸದಸ್ಯೆ ರೀನಾ ಪ್ರಕಾಶ್, ವೀರಾಜಪೆಟೆ ನಗರ ಬಿಜೆಪಿ ಅಧ್ಯಕ್ಷ ಟಿ.ಪಿ. ಕೃಷ್ಣ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷರುಗಳಾದ ಪಳೇಯಂಡ ರಾಬೀನ್ ದೇವಯ್ಯ ಹಾಗೂ ಭಾರತೀಶ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷರುಗಳಾದ ಗುಮ್ಮಟ್ಟಿರ ದಿಲನ್ ಗಣಪತಿ, ಕುಞಂಡ ಅರುಣ್ ಭೀಮಯ್ಯ, ಕಾಂಗೀರ ಅಶ್ವಿನ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಈ ಸಂದರ್ಭ ವೇದಿಕೆಯಲ್ಲಿ ಪುಷ್ಪೇಶ್ ಬರೆದ ೧೦ ವರ್ಷದ ಮೈಸೂರು ಕೇಂದ್ರ‍್ರ ಕಾರಾಗೃಹ ವಾಸ ಕುರಿತ ಪುಸ್ತಕವನ್ನು ಸಂಸದ ಪ್ರತಾಪ್ ಸಿಂಹ ಬಿಡುಗಡೆ ಮಾಡಿದರು.