ಕೂಡಿಗೆ, ಮಾ. ೧: ಕೂಡಿಗೆಯಲ್ಲಿರುವ ಅಂಜೆಲಾ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ವತಿಯಿಂದ ಅಂಜಲ ನರ್ಸರಿ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಅಂಜೆಲಾ ವಿದ್ಯಾನಿಕೇತನ ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ರೇಖಾ ಫರ್ನಾಂಡೀಸ್ ನೆರವೇರಿಸಿದರು. ನಂತರ ಮಾತನಾಡಿ, ಮಕ್ಕಳಿಗೆ ಕಲಿಕೆಗೆ ಪೂರಕವಾದ ಅಂಶಗಳನ್ನು ಶಾಲೆಯ ಜೊತೆಗೆ ಪೋಷಕರ ಸಹಭಾಗಿತ್ವ ಬಹು ಮುಖ್ಯ, ಅದರೊಡನೆ ಸಾಗಿದರೆ ವಿದ್ಯಾಸಂಸ್ಥೆಗಳ ಪ್ರಗತಿ ಸಾಧ್ಯ ಎಂದರು.
ಈ ಸಂದರ್ಭ ಶಾಲಾ ಸಂಚಾಲಕಿ ಸಿಸ್ಟರ್ ಲೀನಾ ಫರ್ನಾಂಡೀಸ್, ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೀಣಾ ವಿಜಯ ಸೇರಿದಂತೆ ಶಾಲಾ ಶಿಕ್ಷಕರ ವೃಂದ, ಪೋಷಕರು ಭಾಗವಹಿಸಿದ್ದರು. ನಂತರ ಶಾಲಾ ವಿದ್ಯಾರ್ಥಿಗಳು ಅತ್ಯಾಕರ್ಷಕ ಉಡುಗೆ ತೊಡುಗೆ ತೊಟ್ಟು ನೃತ್ಯ ಪ್ರದರ್ಶನ ನೀಡಿದರು.