ಮಡಿಕೇರಿ, ಫೆ. ೨೯: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಮಡಿಕೇರಿ ಘಟಕದಿಂದ ‘ಭಗವದ್ಗೀತೆ ಸಂತೋಷಕರ ಜೀವನಕ್ಕೆ ದಾರಿ ದೀಪ' ಎಂಬ ವಿಷಯದ ಕುರಿತು ಅಧ್ಯಾತ್ಮ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿಷಯದ ಕುರಿತು ಅಧ್ಯಾತ್ಮ ಗುರು ಶ್ರೀ ಎಂ ಎಂದು ಪ್ರಸಿದ್ಧರಾಗಿರುವ ಪದ್ಮಶ್ರೀ ಪುರಸ್ಕೃತ ಮಮತಾಜ್ ಆಲಿ ಅವರು ಉಪನ್ಯಾಸ ನೀಡಲಿದ್ದಾರೆ. ತಾ.೩ ರಂದು ಸಂಜೆ ೪ ಗಂಟೆಗೆ ಮಡಿಕೇರಿ ಬ್ರಾಹ್ಮಣರ ಬೀದಿಯಲ್ಲಿರುವ ಲಕ್ಷಿö್ಮ ನರಸಿಂಹ ಕಲ್ಯಾಣ ಮಂಟಪದಲ್ಲಿ ಉಪನ್ಯಾಸ ನಡೆಯಲಿದೆ.