ಮಡಿಕೇರಿ, ಫೆ. ೨೮: ಅರಣ್ಯ ಪದವೀಧರ ವಿದ್ಯಾರ್ಥಿಗಳು ಬೆಂಗಳೂರಿನ ಪ್ರಿüಡಂ ಪಾರ್ಕ್ನಲ್ಲಿ ಮುಷ್ಕರ ನಡೆಸುತ್ತಿರುವ ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿದ್ದರು.
ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು, ನಿಮ್ಮ ಬೇಡಿಕೆಗಳಾದ ಉಪವಲಯ ಅರಣ್ಯಾಧಿಕಾರಿಗಳಲ್ಲಿ ಶೇ. ೫೦ ¥್ರÀತಿಶತ ಅರಣ್ಯ ಪದವೀಧರರಿಗೆ
ಮೀಸಲು ಇರಿಸಲಾಗಿತ್ತು. ಆಡಳಿತ ಸಮಿತಿಯ ವರದಿಯಲ್ಲಿ ೧೦೦% ಮುಂಬಡ್ತಿ ಮುಖಾಂತರ ತುಂಬಲು ಶಿಫಾರಸ್ಸು ಮಾಡಿದ್ದಾರೆ. ಅದೇ ರೀತಿ ಒಪ್ಪಿಕೊಂಡರೆ ಅರಣ್ಯ ಪದವೀಧರರಿಗೆ ನೌಕರಿ ಅವಕಾಶ ಇಲ್ಲದಂತಾಗುತ್ತದೆ.
ಆದ್ದರಿAದ ನಮ್ಮ ಸರ್ಕಾರ ಆಡಳಿತ ಸುಧಾರಣಾ ವರದಿಯನ್ನು ಜಾರಿಗೆ ತರುವುದಿಲ್ಲ. ವಲಯ ಅರಣ್ಯಾಧಿಕಾರಿ ಸೇರಿದಂತೆ ಉಳಿದ ಬೇಡಿಕೆಗಳಿಗೆ ತಜ್ಞರ ಸಮಿತಿಯನ್ನು ರಚಿಸಿ ಬೇರೆ ಬೇರೆ ರಾಜ್ಯಗಳಿಂದ ವರದಿಗಳನ್ನು ತರಿಸಿ ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು.
ಆದ್ದರಿಂದ ಮುಷ್ಕರ ಕೈಬಿಡುವಂತೆ ಮನವಿ ಮಾಡಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ ಆಡಳಿತಾತ್ಮಕ ಸುಧಾರಣಾ ಸಮಿತಿಯು ನೀಡಿದ ವರದಿಯನ್ನು ಖಂಡಿತವಾಗಿ ಪರಿಶೀಲನೆ ಮಾಡಬೇಕಾಗಿದೆ. ಅದನ್ನು ಮಾಡುತ್ತೇನೆ. ೨೦೨೨ ರಲ್ಲಿ ಆಗಿರುವ ತಿದ್ದುಪಡಿ ಮತ್ತು ಕಡ್ಡಾಯ ಮೀಸಲಾತಿ ಯಾವತ್ತು ಇರಲಿಲ್ಲ. ಆದರೂ ನೀವು ಕೇಳುತ್ತಿರುವುದು ತಾಂತ್ರಿಕವಾಗಿ ಸರಿ ಇದೆಯೆ ಎಂದು ಪರಿಶೀಲನೆ ಮಾಡಬೇಕಾಗಿದೆ ಎಂದರು. ಈ ಸಂದರ್ಭ ಶಾಸಕರಾದ ರಂಗನಾಥ, ರಾಜುಗೌಡ, ರವಿಶಂಕರ ಹಾಜರಿದ್ದರು.