(ಮೊದಲ ಪುಟದಿಂದ) ಮಂಡಳಿಯ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಇದರಲ್ಲಿ ಕೊಡಗಿನ ಮಾಯಮುಡಿ ಗ್ರಾಮದ ಮಾಚಿಮಾಡ ವಿದ್ವತ್ ಕಾವೇರಪ್ಪ ಅವರು ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಎ+ ಶ್ರೇಣಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪಿçÃತ್ ಬೂಮ್ರ ಹಾಗೂ ರವೀಂದ್ರ ಜಡೇಜ ಅವರುಗಳು ಸ್ಥಾನ ಗಿಟ್ಟಿಸಿಕೊಂಡಿದ್ದು, ಬಿ.ಸಿ.ಸಿ.ಐ ಮೂಲಕ ಅತಿ ಹೆಚ್ಚಿನ ವಾರ್ಷಿಕ ವೇತನ ಪಡೆಯಲಿದ್ದಾರೆ. ಇದೇ ರೀತಿ ಎ, ಬಿ, ಸಿ ಶ್ರೇಣಿಯಲ್ಲಿ ವಿವಿಧ ಆಟಗಾರರು ಆಯ್ಕೆಯಾಗಿದ್ದು, ಶ್ರೇಣಿ ಆಧಾರದಲ್ಲಿ ವೇತನ ಪಡೆಯಲಿದ್ದಾರೆ. ನೂತನ ಫಾಸ್ಟ್ ಬೌಲಿಂಗ್ ಶ್ರೇಣಿಯಡಿಯಲ್ಲಿ ಉಮ್ರನ್ ಮಲ್ಲಿಕ್, ವಿಜಯಕುಮಾರ್ ವೈಶಾಕ್, ಆಕಾಶ್ ದೀಪ್, ಯಶ್ ದಯಾಳ್‌ರೊಂದಿಗೆ ವಿದ್ವತ್ ಅವರು ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಕಳೆದೆರಡು ವರ್ಷಗಳಿಂದ ರಾಷ್ಟಿçÃಯ ಮಟ್ಟದ ಕ್ರಿಕೆಟ್ ಪಂದ್ಯಗಳಾದ ರಣಜಿ, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ವಿದ್ವತ್ ಕಳೆದ ಸಾಲಿನ ಐ.ಪಿ.ಎಲ್ ನಲ್ಲಿಯೂ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. ವಿದ್ವತ್ ಅವರು ಮೂಲತಃ ಮಾಯಮುಡಿ ಗ್ರಾಮದ ಮಾಚಿಮಾಡ ದೇವಾನಂದ ಹಾಗೂ ದಿ. ಬೀನಾ ದಂಪತಿಯ ಪುತ್ರ.