ಮಡಿಕೇರಿ, ಫೆ. ೨೮: ಮೈಸೂರು ಭವಿಷ್ಯ ನಿಧಿ ಪ್ರಾದೇಶಿಕ ಕೇಂದ್ರದಿAದ ‘ನಿಧಿ ಆಪ್ಕೆ ನಿಕಟ್’ (ಭವಿಷ್ಯ ನಿಧಿ ನಿಮ್ಮ ಹತ್ತಿರ) ೨.೦ ರ ಅಡಿಯಲ್ಲಿ ಭವಿಷ್ಯ ನಿಧಿಯ ಬಗ್ಗೆ ಜಿಲ್ಲಾ ವ್ಯಾಪ್ತಿಯ ಮಾಹಿತಿ ಕಾರ್ಯಕ್ರಮವು ಕುಶಾಲನಗರ ಭಾರತ್ ಮಾತಾ ಪದವಿ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಫಾದರ್ ಅಬೀನ್ ಅವರು ಭಾಗವಹಿಸಿದ್ದರು.

ಪ್ರವರ್ತನ ಅಧಿಕಾರಿ ಸೌರಭ್, ಎಸ್.ಎಸ್.ಎ ಪಿ.ಎಂ ಸ್ವಸ್ತಿಕ್ ಹಾಗೂ ರವೀಶ್ ಕೆ, ಇ.ಎಸ್.ಐ.ಸಿ ವಿಭಾಗದ ವ್ಯವಸ್ಥಾಪಕ ರವಿನಂದನ್ ಹೆಚ್. ಎಸ್. ಅವರುಗಳು ಪಿಂಚಣಿದಾರರಿಗೆ ಮಾಹಿತಿ ನೀಡಿದರು.ಉದ್ಯೋಗದಾತರು, ಉದ್ಯೋಗಿಗಳು ಮತ್ತು ಪಿಂಚಣಿದಾರರು ಕುಂದುಕೊರತೆಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಾಹಿತಿ ಪಡೆದುಕೊಂಡರು. ಪಿಂಚಣಿದಾರರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹರಿಸಲಾಯಿತು.