ಮಡಿಕೇರಿ, ಫೆ. ೨೮: ಕೊಯನಾಡು ಮಸೀದಿಯ ೨೬ನೇ ಸ್ವಲಾತ್ ವಾರ್ಷಿಕೋತ್ಸವದ ಬೃಹತ್ ಮಜ್ಲಿಸ್ ಮಸೀದಿ ವಠಾರದಲ್ಲಿ ವಿಜೃಂಭಣೆಯಿAದ ನಡೆಯಿತು.
ಅಹ್ಲ್ ಬೈತ್ ಕಣ್ಮಣಿ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್ ಮುತ್ತನ್ನೂರ್ ತಂಙಳ್ ಪ್ರಾರ್ಥನೆಗೈದರು. ಮುಖ್ಯ ಪ್ರಭಾಷಣಕಾರರಾಗಿ ಜೂನಿಯರ್ ಕಬೀರ್ ಬಾಖವಿ ಅಬ್ದುಲ್ ರಝಾಕ್ ಅಬ್ರಾರಿ ಉಸ್ತಾದರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಮಸೀದಿ ಖತೀಬರಾದ ಹಮೀದ್ ಅಮ್ಜದಿ, ದೇವರಕೊಲ್ಲಿ ಇಮಾಂ ಜಲೀಲ್ ಸಖಾಫಿ ಇದ್ದರು. ಮಸೀದಿ ಅಧ್ಯಕ್ಷ ಅಬ್ದುಲ್ ರಜಾಕ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ನಝೀರ್ ಮಾಡಶೇರಿ, ಸಲಹಾ ಸಮಿತಿ ಸದಸ್ಯ ಹನೀಫ್ ಎಸ್.ಪಿ., ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಎಸ್.ಪಿ., ಕೆ.ಜೆ.ಎಂ.ಆರ್.ಸಿ.ಸಿ. ಅಧ್ಯಕ್ಷ ಅಲವಿ ಕುಟ್ಟಿ, ಮೊಹಿದಿನ್ ಕುಂಞ, ಸೇವ್ ದಿ ಡ್ರೀಮ್ಸ್ ಡೈರೆಕ್ಟರ್ ಜಾಬಿರ್ ನಿಝಾಮಿ, ಯುವ ಉದ್ಯಮಿಯಾದ ಹಮೀದ್ ಕುತ್ತಮೊಟ್ಟೆ, ಅಶ್ರಫ್ ಬಾಲೆಂಬಿ, ನುಸ್ರತುಲ್ ಇಸ್ಲಾಂ ಕಾರ್ಯದರ್ಶಿ ಜುಹೈಲ್, ಗೂನಡ್ಕ, ಪೇರಡ್ಕ, ಸಂಪಾಜೆ, ಕಲ್ಲುಗುಂಡಿ ಭಾಗದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸರ್ವ ಜಮಾಅತರು, ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಯಶಸ್ವಿನೊಂದಿಗೆ ಸಮಾಪ್ತಿಗೊಂಡಿತು.