ಕಡಂಗ, ಫೆ. ೨೮: ಜ್ಞಾನ, ವಿನಯ, ಸೇವೆ ಎಂಬ ವಾಕ್ಯದಡಿ ಕಾರ್ಯಾ ಚರಿಸುವ ಸಮಸ್ತ ಕೇರಳ ಜಂಯುತಲ್ ಉಲಮದ ಅಧೀನ ದಲ್ಲಿರುವ ಸಂಘಟನೆಯಾದ ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲೆಯ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಸುಹೈಬ್ ಫೈಝಿ ಕೊಳಕೇರಿಯವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಬಾಕವಿ ಕೊಡಗರಹಳ್ಳಿ, ಕೋಶಾಧಿಕಾರಿಯಾಗಿ ಬಾಸಿತ್ ಹಾಜಿ ಕೊಡ್ಲಿಪೇಟೆ, ವರ್ಕಿಂಗ್ ಸೆಕ್ರೆಟರಿ ಹುಸೈನ್ ಮಾಪಿಳ್ಳೆತೋಡು ಅವರನ್ನು ಸಿದ್ದಾಪುರ ವರಕ್ಕಲ್ ಸ್ಮಾರಕ ಸೌಧದಲ್ಲಿ ಆಯ್ಕೆ ಮಾಡಲಾಯಿತು.