ಕೂಡಿಗೆ, ಫೆ. ೨೮: ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.
ತೊರೆನೂರು ಗ್ರಾಮದಲ್ಲಿ ನಡೆದ ಸಂಕ್ರಾAತಿ ರೈತರ ಕನ್ನಡಸಿರಿ ಸಂಕ್ರಾAತಿ ಸುಗ್ಗಿ ಹಬ್ಬದ ಸಮಾರೋಪ ಸಮಾರಂಭದ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಬಿ. ಜಗದೀಶ್ ವಹಿಸಿದ್ದರು. ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ಮತ್ತು ರಾಸುಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲಾ ರಾಸುಗಳ ಮಾಲೀಕರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಕಾವೇರಿ ಮಾತಾ ರೈತ ಕೂಟದ ಅಧ್ಯಕ್ಷ ಟಿ.ಎಸ್. ಪ್ರಕಾಶ್, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಉದಯ್ ಕುಮಾರ್, ಸಂಘದ ನಿರ್ದೇಶಕರಾದ ಕೆ.ಎಸ್. ಕೃಷ್ಣಗೌಡ, ಹೆಚ್.ಬಿ. ಚಂದ್ರಪ್ಪ, ಸೂರ್ಯೋದಯ ಸಂಘದ ಪ್ರಥಮ ಅಧ್ಯಕ್ಷ ಟಿ.ಕೆ. ಪಾಂಡುರAಗ, ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಕದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ರಾಜ್ಯ ಬಿ.ಜೆ.ಪಿ. ಎಸ್.ಟಿ. ಮೋರ್ಚಾದ ಉಪಾಧ್ಯಕ್ಷೆ ಕೆ.ಆರ್. ಮಂಜುಳಾ ಸೇರಿದಂತೆ ಸೂರ್ಯೋದಯ ಪುರುಷರ ಸ್ವ ಸಹಾಯ ಸಂಘದ ಟಿ.ಬಿ. ಸೋಮಾಚಾರಿ, ದೇವಾಲಯ ಸಮಿತಿಯ ಉಪಾಧ್ಯಕ್ಷ ಚಿದಾನಂದ, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್, ಪ್ರೌಢಶಾಲೆಯ ಅಧ್ಯಕ್ಷ ಎ.ಎಂ. ಅಣ್ಣಯ್ಯ, ಟಿ.ಎನ್. ದಿನೇಶ್, ಸೂರ್ಯೋದಯ ಸಂಘದ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನೇಕ ಗಣ್ಯರನ್ನು ಗೌರವಿಸಲಾಯಿತು. ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿ, ಕೃಷ್ಣೇಗೌಡ ವಂದಿಸಿದರು.