ಪಾಲಿಬೆಟ್ಟ, ಫೆ. ೨೮: ನಿನ್ನೆ ಸಂಜೆ ೭ ಗಂಟೆಗೆ ಪಾಲಿಬೆಟ್ಟ ಬಳಿ ದಂಪತಿಗಳಿದ್ದ ಕಾರಿನ ಮೇಲೆ ಆನೆಯೊಂದು ದಾಳಿ ಮಾಡಿ ಜಖಂಗೊಳಿಸಿದೆ. ದಂಪತಿ ಅಪಾಯದಿಂದ ಪಾರಾಗಿದ್ದಾರೆ.

ಎಲಿಫೆಂಟ್ ಕಾರಿಡಾರ್ ತೋಟದ ಮಾಲೀಕ ಬಿದ್ದಂಡ ವಿಜು ಚೆಂಗಪ್ಪ, ಪತ್ನಿ ನಿಮ್ಮಿ ಹಾಗೂ ಇತರ ಇಬ್ಬರು ಪಾಲಿಬೆಟ್ಟದಿಂದ ಮಾರುತಿ ಕಾರಿನಲ್ಲಿ ತೋಟದ ಮನೆಗೆ ಬರುತ್ತಿದ್ದರು. ಮುಖ್ಯ ರಸ್ತೆಯಿಂದ ಮನೆಯ ದಾರಿಗೆ ತಿರುಗುತ್ತಿದ್ದಂತೆಯೇ ತೋಟದೊಳಗಿನಿಂದ ಮರಿ ಆನೆಯೊಂದು ಅಡ್ಡ ಬಂದಿದೆ. ಕೂಡಲೇ ಅದರ ತಾಯಿ ನುಗ್ಗಿ ಬಂದು ಕಾರಿಗೆ ಸೊಂಡಿಲಿನಿAದ ಬಡಿದಿದೆ. ಚಾಲನೆ ಮಾಡುತ್ತಿದ್ದ ನಿಮ್ಮಿ ಅವರು ಕಾರನ್ನು ಹಿಮ್ಮುಖವಾಗಿ ಓಡಿಸಿದ್ದಾರೆ. ಆದರೆ, ಆನೆ ಪುನಃ ಬಂದು ಬಾನೆಟ್ಟಿಗೆ ಬಡಿದು ಜಖಂಗೊಳಿಸಿದೆ. ಧೈರ್ಯಗುಂದದ ನಿಮ್ಮಿ ಅವರು ವೇಗವಾಗಿ, ಹಿಮ್ಮುಖವಾಗಿ ಮುಖ್ಯ ರಸ್ತೆ ತಲುಪಿದರು. ಮಗುವಿನಿಂದ ಕಾರು ದೂರವಾದಂತೆ, ತಾಯಿ ಮಗುವಿನೊಂದಿಗೆ ತೋಟದೊಳಗಿನ ದಾರಿಯಲ್ಲಿ ನಡೆದು ಮರೆಯಾಗಿದೆ.

ದಂಪತಿ ಕಾರಿನಲ್ಲಿ ಪಾಲಿಬೆಟ್ಟಕ್ಕೆ ಬಂದು, ಸಮಯ ಕಳೆದು, ಸ್ನೇಹಿತರೊಂದಿಗೆ ಮನೆಗೆ ಮರಳಿದ್ದಾರೆ. ಕಾರು ಜಖಂಗೊAಡಿದೆ.