ಮಡಿಕೇರಿ ಫೆ. ೨೬ : ಭೂಮಿಪೂಜೆ ಮಾಡಿದ ನಂತರ ತಕ್ಷಣ ಕಾಮಗಾರಿ ಆರಂಭಿಸ ಬೇಕು, ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಎಂಜಿನಿಯರ್ ಗಳು ಗೌರವವನ್ನು ಉಳಿಸಿಕೊಳ್ಳ ಬೇಕು. ಕೆಲಸ ಮಾಡದ ಎಂಜಿನಿಯರ್ ಗಳು ನಮಗೆ ಬೇಡ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಭಾಗಮಂಡಲದ ಮೇಲು ಸೇತುವೆಯ ಕೆಳಗಿನ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ನಿಗಧಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಗೌರವ ಸಿಗುತ್ತದೆ, ಇಲ್ಲದಿದ್ದಲ್ಲಿ ಕೆಲಸ ಮಾಡದ ಎಂಜಿನಿಯರ್ ಗಳು ನಮಗೆ ಬೇಡ ಎನ್ನುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಬಾರದು, ಇರುವ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು. ಈಗಾಗಲೇ ಕಾಟಕೇರಿಯಲ್ಲಿ ೧ ಮತ್ತು ಪೆರಾಜೆಯಲ್ಲಿ ಎರಡು ಕಾಮಗಾರಿ ಶೇ.೯೦ ರಷ್ಟು ಪೂರ್ಣಗೊಂಡಿದೆ. ಕಾಮಗಾರಿ ಆರಂಭಿಸಲು ವಿಳಂಬ ಮಾಡಿದ ಎಂಜಿನಿಯರ್ ನ್ನು ಅಮಾನತು ಮಾಡಲು ಮುಂದಾಗಿದ್ದೆ. ಕೆಲಸ ಮಾಡದ ಎಂಜಿನಿಯರ್ ಗಳು ನಮಗೆ ಯಾಕೆ ಬೇಕು ಎಂದು ಪ್ರಶ್ನಿಸಿದರು.
ಇದೇ ಸಂದರ್ಭ ಅಯ್ಯಪ್ಪ ಕಾಡುವಿನಲ್ಲಿ ಉಂಟಾದ ಗೊಂದಲ ನಿವಾರಿಸಿದ ಪೊನ್ನಣ್ಣ ಅವರು, ಅರಣ್ಯ ಇಲಾಖೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಅಡ್ಡಿಪಡಿಸಬಾರದು, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾಗಮಂಡಲ ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಸುಸಜ್ಜಿತ ಆಟೋ ನಿಲ್ದಾಣ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭ ನೂತನ ಮೇಲು ಸೇತುವೆ ಕಾಮಗಾರಿ ಮತ್ತು ತ್ರಿವೇಣಿ ಸಂಗಮದ ಬಳಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ ಅವರು, ಕುಡಿಯುವ ನೀರಿವ ಪೂರೈಕೆ, ಗ್ರಾಮದ ಅಭಿವೃದ್ಧಿ ಮತ್ತು ಸ್ವಚ್ಛತೆ ಕುರಿತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯೊAದಿಗೆ ಸಮಾಲೋಚನೆ ನಡೆಸಿದರು. ಆಟೋ ಚಾಲಕರು ಮಾಲೀಕರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಭಾಗಮಂಡಲ ಶ್ರೀ ಭಗಂಡೇಶ್ವರ ತೋಟಗಾರಿಕಾ ಸಂಘಕ್ಕೆ ಭೇಟಿ ನೀಡಿದರು. ಭಾಗಮಂಡಲ ತಲಕಾವೇರಿ ದೇವಸ್ಥಾನದ ಅರ್ಚಕರು, ಸಿಬ್ಬಂದಿ ವರ್ಗ, ಪಂಚಾಯತಿ ಆಡಳಿತ ಮಂಡಳಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಪೊಲೀಸ್ ಠಾಣಾಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ವಿವಿಧ ವಿಚಾರಗಳ ಕುರಿತು ಮಾಹಿತಿ ಪಡೆದರು.
ಪ್ರಮುಖರಾದ ಬೇಕಲ್ ರಮಾನಾಥ್, ಕೆ.ಎ.ಇಸ್ಮಾಯಿಲ್ ನೆರವಂಡÀ ಉಮೇಶ್, ಕರಿಕೆ ಗ್ರಾ.ಪಂ ಅಧ್ಯಕ್ಷ ಬಾಲಚಂದ್ರ ನಾಯರ್, ಡಿಸಿಸಿ ಸದಸ್ಯರಾದ ಸುನಿಲ್ ಪತ್ರಾವೋ, ಹ್ಯಾರೀಸ್ ಚೆಟ್ಟಿಮಾನಿ, ಕೊಡಗನ ತೀರ್ಥ ಪ್ರಸಾದ್, ಬಶೀರ್ ಚೇರಂಬಾಣೆ, ವಲಯಾಧ್ಯಕ್ಷÀ ದೇವಂಗೋಡಿ ಹರ್ಷ, ಎಮ್ಮೆ ಮಾಡುವ ವಲಯಾಧ್ಯಕ್ಷ ಹಂಸ, ಕಾರ್ಯಾಧ್ಯಕ್ಷ ಕೋಳಿಬೈಲು ವೆಂಕಟೇಶ್, ಡಿಪ್ಪು, ಅಶೋಕ್, ರಂಗಪ್ಪ ನಿಡ್ಯಮಲೆ ದಾಮೋದರ, ಅಬ್ದುಲ್ ಲತೀಫ್, ಹ್ಯಾರಿಸ್, ನೌಫಲ್, ಬಾರಿಕೆ ಲೋಕೇಶ್, ಶರತ್, ಕುದುಕೊಳಿ ಶಬರೀಶ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ನಿಡ್ಯಮಲೆ ಸುರೇಶ್, ಬಾರಿಕೆ ಮಿಥುನ್, ಅನಿಲ್, ನಾರಾಯಣ, ಪೊನ್ನಪ್ಪ, ದೇವಂಗೋಡಿ ಯೋಗೇಂದ್ರ, ದಂಡಿನ ಪೂರ್ಣೇಶ್, ಎಮ್ಮೆಮಾಡು ಪಂಚಾಯತಿ ಸದಸ್ಯರಾದ ಈಜು, ಚೆಟ್ಟಿಮಾನಿಯ ಕೆ.ಕೆ.ಹಂಸ, ಬಡ್ಡೀರ ನಂದಕುಮಾರ್, ಕರಿಕೆ ರಮೇಶ್, ಗುತ್ತಿಗೆದಾರ ಸಿ.ಎಸ್.ರಶೀದ್ ಮತ್ತಿತರರು ಹಾಜರಿದ್ದರು.