ವೀರಾಜಪೇಟೆ, ಫೆ. ೨೭: ಪತ್ನಿಯನ್ನು ಪತಿ ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಘಟನೆ ವೀರಾಜಪೇಟೆ ಹೊರವಲಯದ ಕದನೂರು ಗ್ರಾಮದಲ್ಲಿ ನಡೆದಿದೆ.

ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಕಂಡ ಕದನೂರು ಗ್ರಾಮದ ಒಕ್ಕಲಿಗರ ವಾಸು ಎಂಬವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ತಮಿಳರ ಸುರೇಶ್ (೩೪) ಎಂಬಾತನೆ ಪತ್ನಿ ಉಷಾ (೩೦)ಳನ್ನು ಹತ್ಯೆಗೈದು ಬಂಧಿತನಾದ ಆರೋಪಿ.

ತಮಿಳರ ಸುರೇಶ್ ಮತ್ತು ಉಷಾ ದಂಪತಿ ಕಾಫಿ ತೋಟದ ಕಾರ್ಮಿಕರಾಗಿ ದುಡಿಯುತ್ತಿದ್ದರು. ದಂಪತಿಗೆ ಎರಡು ಹೆಣ್ಣು ಮಕ್ಕಳಿದ್ದು, ವಸತಿ ಶಾಲೆಯಲ್ಲಿ ಓದುತ್ತಿದ್ದಾರೆ. ಪರಪುರುಷನೊಂದಿಗೆ ಪತ್ನಿ ಅಕ್ರಮ ಸಂಬAಧ ಹೊಂದಿದ್ದುದೆ ಘಟನೆಗೆ ಕಾರಣ ಎಂಬುದಾಗಿ ಸುರೇಶ್ ಪೊಲೀಸರೆದುರು ಒಪ್ಪಿಕೊಂಡಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.