ಪೊನ್ನಂಪೇಟೆ, ಫೆ. ೨೬: ನಿವೃತ್ತ ವಲಯ ಅರಣ್ಯಾಧಿಕಾರಿ ಹಾಗೂ ಪರಿಸರವಾದಿ ಕೊಟ್ರಂಗಡ. ಎಂ. ಚಿಣ್ಣಪ್ಪ (೮೪) ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ಪೊನ್ನಂಪೇಟೆ ತಾಲೂಕಿನ ಕುಮಟೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಮಂಗಳವಾರ ಮೃತರ ಸ್ವಗೃಹದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಶ್ರೀಯುತರು ೧೯೬೭ರಲ್ಲಿ ಅರಣ್ಯ ಇಲಾಖೆಗೆ ಅರಣ್ಯಾಧಿಕಾರಿಯಾಗಿ ಸೇರಿದರು. ೧೯೭೫ರಲ್ಲಿ ನಾಗರಹೊಳೆ ವಲಯ ಅರಣ್ಯಾಧಿಕಾರಿಯಾಗಿ ಅರಣ್ಯ ಉಳಿಸುವುದಕ್ಕಾಗಿ ಅವಿರತವಾಗಿ ಶ್ರಮಿಸಿದ್ದರು. (ಮೊದಲ ಪುಟದಿಂದ) ಆ ದಿನಗಳಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ಜಿಂಕೆಗಳ ಸಂಖ್ಯೆ ಹೆಚ್ಚಾಗಲು ಚಿಣ್ಣಪ್ಪ ಅವರ ಕೊಡುಗೆ ಅಪಾರವಾಗಿದೆ.

ಇವರ ಸೇವೆಯನ್ನು ಪರಿಗಣಿಸಿ ೧೯೮೫ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕವನ್ನೂ ನೀಡಲಾಗಿದೆ. ನಂತರ ‘ವೈಲ್ಡ್ ಲೈಫ್ ಫಸ್ಟ್' ಅಧ್ಯಕ್ಷರಾಗಿ ಟಿಂಬರ್ ಮಾಫಿಯಾ ವಿರುದ್ಧ ಧ್ವನಿಯಾಗಿದ್ದರು.

ಇತ್ತೀಚಿನ ವರ್ಷಗಳಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ಅರಣ್ಯವನ್ನು ಬೆಂಕಿಯಿAದ ರಕ್ಷಿಸಲು ನಿರಂತರವಾಗಿ ಶ್ರಮಿಸಿದ್ದರು. ಅವರ ನೇತೃತ್ವದಲ್ಲಿ ನಡೆಯುತ್ತಿರುವ 'ನಾವಿಕೋಯೆಡ್’ ಮತ್ತು 'ವೈಲ್ಡ್ ಲೈಫ್ ಫಸ್ಟ್’ ಸಂಘಟನೆಗಳು ಯಶಸ್ಸಿನ ದಾರಿ ಕಂಡಿವೆ.

ಕೆ.ಎಂ. ಚಿಣ್ಣಪ್ಪ ಅವರ ಉನ್ನತ ವ್ಯಕ್ತಿತ್ವವು ಟಿ.ಎಸ್. ಗೋಪಾಲ್ ನಿರೂಪಣೆಯಲ್ಲಿ ‘ಕಾಡಿನೊಳಗೊಂದು ಜೀವ’ ಎಂಬ ಕೃತಿಯಲ್ಲಿ ಮೂಡಿಬಂದಿದೆ.

ಇವರ ಸೇವೆಗೆ ಹಲವು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟಿçÃಯ ಪ್ರಶಸ್ತಿಗಳು ಸಂದಿವೆ.

ಪರಿಸರ ಸಂರಕ್ಷಣೆ ವಿಚಾರದಲ್ಲಿ ಎಂದಿಗೂ ಮುಂಚೂಣಿಯಲ್ಲಿರುತಿದ್ದ ಇವರು, ನೇರ ನಡೆ-ನುಡಿಗೆ ಹೆಸರಾಗಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ, ಪರಿಸರ ಆಸಕ್ತರಿಗೆ, ಹಲವು ಇಲಾಖೆಯ ಅಧಿಕಾರಿಗಳಿಗೆ ಪರಿಸರದ ಸೂಕ್ಷö್ಮ ವಿಚಾರಗಳನ್ನು ತರಬೇತಿ ನೀಡಿದ ಕೀರ್ತಿ ಚಿಣ್ಣಪ್ಪ ಅವರಿಗೆ ಸಲ್ಲುತ್ತದೆ.

-ಚನ್ನನಾಯಕ