(ವಿಶೇಷ ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಫೆ. ೨೬ : ರಾಜ್ಯದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿAದ ೫೩ ಲಕ್ಷ ಕಾರ್ಮಿಕ ಕಾರ್ಡ್ಗಳನ್ನು ವಿತರಿಸಿದ್ದು, ಇದರಲ್ಲಿ ಮೊದಲ ಹಂತದ ಪರಿಶೀಲನೆಯಲ್ಲಿ ೭ ಲಕ್ಷ ಅನರ್ಹ ಕಾರ್ಡ್ಗಳನ್ನು ಪತ್ತೆ ಹಚ್ಚಲಾಗಿದೆ. ಕೊಡಗು ಜಿಲ್ಲೆಯಲ್ಲಿ ಇದುವರೆಗೆ ೧೭೦ ಬೋಗಸ್ ಕಾರ್ಮಿಕ ಕಾರ್ಡ್ಗಳನ್ನು ಇಲಾಖೆ ಪತ್ತೆ ಹಚ್ಚಿದೆ.
ಕಲ್ಲು, ಮಣ್ಣು ಮುಟ್ಟದವರೂ ಕೂಡ ಕೊಡಗು ಜಿಲ್ಲೆಯಲ್ಲಿ ಕಾರ್ಮಿಕ ಕಾರ್ಡ್ ಪಡೆದುಕೊಂಡು ಕಾರ್ಮಿಕ ಇಲಾಖೆಯ ಯೋಜನೆಗಳನ್ನು ಪಡೆದಿದ್ದಾರೆ.
೧೧ ಸಾವಿರಕ್ಕೂ ಅಧಿಕ ಕಾರ್ಮಿಕ ಕಾರ್ಡ್ ಇರುವ ಕೊಡಗಿನಲ್ಲಿ ಕೇವಲ ೧೭೦ ಬೋಗಸ್ ಕಾರ್ಡ್ ಮಾತ್ರ ಪತ್ತೆಯಾಗಿದ್ದು, ಇನ್ನೂ ಹಲವರು ನಕಲಿ ಕಾರ್ಮಿಕ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬ ಅನುಮಾನವನ್ನು ಕಾರ್ಮಿಕ ಸಂಘಟನೆಗಳು ವ್ಯಕ್ತಪಡಿಸಿವೆ.
ಇದೀಗ ರಾಜ್ಯದಲ್ಲಿ ನಕಲಿ ಕಾರ್ಮಿಕ ಕಾರ್ಡ್ ಪತ್ತೆಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಇನ್ನಷ್ಟು ಬೋಗಸ್ ಕಾರ್ಮಿಕ ಕಾರ್ಡ್ ಪತ್ತೆಯಾಗುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಇದುವರೆಗೆ ಇತರೆ ಜಿಲ್ಲೆಗಳಲ್ಲಿ ಪತ್ತೆಯಾಗಿರುವ ನಕಲಿ ಕಾರ್ಮಿಕ ಕಾರ್ಡ್ಗೆ ಹೋಲಿಸಿದರೆ, ಕೊಡಗು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಕಡಿಮೆ ಬೋಗಸ್ ಕಾರ್ಮಿಕ ಕಾರ್ಡ್ ಪತ್ತೆಯಾಗಿವೆ.
ಚಾಲ್ತಿಯಲ್ಲಿರದ ೩,೪೫೭ ಕಾರ್ಮಿಕ ಕಾರ್ಡ್!
ಕೊಡಗು ಜಿಲ್ಲೆಯಲ್ಲಿ ಇದುವರೆಗೆ ೧೧,೯೬೯ ಕಾರ್ಮಿಕ ಕಾರ್ಡ್ ನೋಂದಣಿಯಾಗಿವೆ. ಆದರೆ ಅದರಲ್ಲಿ ಕೇವಲ ೮,೫೧೨ ಕಾರ್ಮಿಕ ಕಾರ್ಡ್ ಮಾತ್ರ ಚಾಲ್ತಿಯಲ್ಲಿವೆ. ಉಳಿದ ೩,೪೫೭ ಕಾರ್ಮಿಕ ಕಾರ್ಡ್ ಚಾಲ್ತಿಯಲ್ಲಿಲ್ಲ. ೩,೪೫೭ ಕಾರ್ಮಿಕ ಕಾರ್ಡ್ಗಳನ್ನು ನವೀಕರಿಸಿಲ್ಲ. ಕಾರ್ಮಿಕ ಇಲಾಖೆ ಈ ಹಿಂದೆ ಮೂರು ವರ್ಷಕೊಮ್ಮೆ ಕಾರ್ಮಿಕ ಕಾರ್ಡ್ ಗಳನ್ನು ನವೀಕರಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಇದೀಗ ಪ್ರತೀ ವರ್ಷ ಕಾರ್ಮಿಕ ಕಾರ್ಡ್ ನವೀಕರಣಗೊಳಿಸಬೇಕಾಗಿರುವುದರಿಂದ ನಕಲಿ ದಾಖಲೆ ಸೃಷ್ಟಿಸಿ ನಕಲಿ ಕಾರ್ಡ್ ಪಡೆದುಕೊಂಡವರು ಸಿಕ್ಕಿ ಬೀಳುತ್ತಿದ್ದಾರೆ ಮತ್ತು ಬೋಗಸ್ ಕಾರ್ಡ್ ಪತ್ತೆಯಾಗುತ್ತಿವೆ.
ಕಾರ್ಮಿಕ ಕಾರ್ಡ್ ನವೀಕರಿಸಲು ಕಟ್ಟುನಿಟ್ಟಾದ ನಿಯಮಗಳನ್ನು ಇತ್ತೀಚೆಗೆ ಕಾರ್ಮಿಕ ಇಲಾಖೆ ಅಳವಡಿಸಿರುವುದರಿಂದ
ಇದೀಗ ಅಧಿಕಾರಿಗಳು ಸಹಿ ಹಾಕಿರುವ ಕಾರ್ಡ್ ಗಳು ಬೋಗಸ್ ಅಂತ ಹೇಳುವುದು ಎಷ್ಟು ಸರಿ!
ನಕಲಿ ಕಾರ್ಮಿಕ ಕಾರ್ಡ್ಗಳು ಹೆಚ್ಚಾಗಲು ತಾಲೂಕು ಮಟ್ಟದ ಹಿರಿಯ ಕಾರ್ಮಿಕ ನಿರೀಕ್ಷಕರೆ ಹೊಣೆ.
ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ನವೀಕರಣವನ್ನು ಪ್ರತಿವರ್ಷ ಮಾಡುವುದು ಕಡ್ಡಾಯಪಡಿಸಿದೆ. ಈ ಹಿಂದೆ ೩ ವರ್ಷಕ್ಕೊಮ್ಮೆ ನೋಂದಣಿ ಮಾಡಿಸಬಹುದಾಗಿತ್ತು. ಅಲ್ಲದೆ ವೇತನ ಚೀಟಿ, ಸ್ವಯಂ ಘೋಷಣಾಪತ್ರ , ಹೀಗೆ ಹಲವು ದಾಖಲೆಗಳನ್ನು ಕೇಳುತ್ತಿದ್ದು ಇವುಗಳಿಗೆ ಮಾಲೀಕರು ಸಹಿ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕ ಇಲಾಖೆಯಿಂದಲೇ, ಕೆಲಸದ ಸ್ಥಳಗಳಿಗೆ ಭೇಟಿ ನೀಡಿ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಮಿಕ ಕಾರ್ಡ್ ನೋಂದಾಯಿಸಿಕೊಳ್ಳಬೇಕು.
ಎಸ್.ಎA ಕೃಷ್ಣ ಕರಡಿಗೋಡು, ಪ್ರಧಾನ ಕಾರ್ಯದರ್ಶಿ ಕಾಫಿ ನಾಡು ಕಟ್ಟಡ ಕಾರ್ಮಿಕ ಸಂಘ ಕೊಡಗು.ಅನರ್ಹರ ಬಳಿ ಕಾರ್ಡ್
ಜೀವನದಲ್ಲಿ ಇದುವರೆಗೆ ಮರಳು,ಕಲ್ಲು, ಸಿಮೆಂಟ್ ಮುಟ್ಟದವರ ಬಳಿ ಕೂಡ ಕಾರ್ಮಿಕರ ಕಾರ್ಡ್ ಕಂಡು ಬಂದಿವೆ. ಅದರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ. ಅಸಂಘಟಿತರಾಗಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರಿಗೆ ಅನುಕೂಲವಾಗಲಿ ಎಂದು, ಸರ್ಕಾರ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮಾಡಲಾಗುತ್ತಿವೆ.
ಒಂದೇ ಮನೆಯಲ್ಲಿ ಒಂದಿಬ್ಬರು ಕಟ್ಟಡ ಕಾರ್ಮಿಕರು ಇರುವುದು ಸಹಜ. ಗಂಡ ಗಾರೆ ಕೆಲಸದಲ್ಲಿ ತೊಡಗಿಕೊಂಡಿದ್ದರೆ, ಆತನ ಹೆಂಡತಿ ಹಾಗೂ ೧೮ ವರ್ಷ ತುಂಬಿದ ಮಕ್ಕಳಿಗೂ ಕೂಡ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡು ಕಾರ್ಮಿಕ ಇಲಾಖೆಯ ಯೋಜನೆಗಳನ್ನು ಪಡೆದುಕೊಂಡಿರುವ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ.
೨೦೦೭ ರಲ್ಲಿ ಕಾರ್ಮಿಕ ಕಾರ್ಡ್ ಸೇವೆ ಆರಂಭಗೊAಡಾಗ ನೋಂದಣಿ ಮತ್ತು ನವೀಕರಣ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಕೋವಿಡ್ ಬಳಿಕ ಸರ್ಕಾರ ನೋಂದಣಿ ಮತ್ತು ನವೀಕರಣ ಶುಲ್ಕವನ್ನು ರದ್ದು ಮಾಡಿತ್ತು.
ಮಧ್ಯವರ್ತಿಗಳು ಕಟ್ಟಡ ಕಾರ್ಮಿಕರೇ ಅಲ್ಲದವರಿಂದ ಹಣ ಪಡೆದು, ಕಾರ್ಮಿಕರ ಕಾರ್ಡ್ ಮಾಡಿಕೊಟ್ಟಿದ್ದಾರೆ. ಜೀವನದಲ್ಲಿ ಇದುವರೆಗೆ ಕಟ್ಟಡ ಕೆಲಸವನ್ನೇ ಮಾಡದ, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಬೋಗಸ್ ಕಾರ್ಡ್ ಹೊಂದಿದ್ದಾರೆ. ಇನ್ನೂ ಅನೇಕ ಮಹಿಳೆಯರು ಬೋಗಸ್ ಕಾರ್ಡ್ ಪಡೆದುಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿವೆ.
ಕಳೆದ ವರ್ಷ ೨೦೨೩ ಫೆಬ್ರವರಿ ತಿಂಗಳಲ್ಲಿ ನಕಲಿ ಕಾರ್ಮಿಕ ಪತ್ತೆ ಅಭಿಯಾನದಲ್ಲಿ ೧೦೧ ಬೋಗಸ್ ಕಾರ್ಡ್ ಪತ್ತೆಯಾಗಿತ್ತು.
ಕಟ್ಟಡ ಮತ್ತು ಇತರೆ ಕಾರ್ಮಿಕರಲ್ಲದ ೩೫೦೦ ಕ್ಕೂ ಹೆಚ್ಚು ಜನರು ಕಾರ್ಮಿಕರ ಕಾರ್ಡ್ ಪಡೆದುಕೊಂಡು ಇಲಾಖೆಯಿಂದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಹಿರಿಯ ಕಾರ್ಮಿಕ ನಿರೀಕ್ಷಕರು ವೀರಾಜಪೇಟೆ ವೃತ್ತದಲ್ಲಿ ಇದುವರೆಗೆ ೫೧೪೫ ಕಾರ್ಮಿಕ ಕಾರ್ಡ್ ನೋಂದಣಿಯಾಗಿದೆ. ಆದರೆ ೨೨೭೮ ಕಾರ್ಮಿಕ ಕಾರ್ಡ್ ಚಾಲ್ತಿಯಲ್ಲಿ ಇಲ್ಲ. ಕೇವಲ ೨,೮೬೭ ಕಾರ್ಮಿಕರ ಕಾರ್ಡ್ ಮಾತ್ರ ಚಾಲ್ತಿಯಲ್ಲಿವೆ.