ಚೆಯ್ಯಂಡಾಣೆ, ಫೆ. ೨೬: ಈ ನೆಲದಲ್ಲಿ ಹುಟ್ಟಿದ ಎಲ್ಲಾ ಧರ್ಮದವರು ಪರಸ್ಪರ ಸೌಹಾರ್ದತೆ ಸಾಮರಸ್ಯದಿಂದ ಬದುಕಬೇಕು ಎಂದು ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೇರವಂಡ ಉಮೇಶ್ ಹೇಳಿದರು.

ಕುಂಜಿಲ ಪೈನರಿ ದರ್ಗಾದಲ್ಲಿ ನಡೆದ ವಾರ್ಷಿಕ ಉರೂಸ್ ಸೌಹಾರ್ದ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬೊಳಿಯಾಡಿರ ಸಂತು ಸುಬ್ರಮಣಿ ಮಾತನಾಡಿ, ಎಲ್ಲರೂ ಇಲ್ಲಿ ಸೌಹಾರ್ದತೆ ಮೆರೆಯುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಯಾಕೂಬ್ ಮಾತನಾಡಿದರು.

ವಾಗ್ಮಿ ಪೇರೋಡ್ ಅಬ್ದುಲ್ ರಹ್ಮನ್ ಸಖಾಫಿ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಸೌಕತ್ ಅಲಿ ವಹಿಸಿದ್ದರು.

ಈ ಸಂದರ್ಭ ಮುದರಿಸ್ ನಿಝರ್ ಅಹ್ಸನಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವೀರಾಜಪೇಟೆ ಬ್ಲಾಕ್ ಅಲ್ಪಸಂಖ್ಯಾತ ಘಟಕ್ ಅಧ್ಯಕ್ಷ ರಫೀಕ್, ಮಾಜಿ ಜಮಾಅತ್ ಅಧ್ಯಕ್ಷ ಮೊಹಮ್ಮದ್ ಹಾಜಿ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಾಫಿ, ಉದಿಯಂಡ ಸುಭಾಷ್, ಚೇತನ್, ದಾನಿ ಭಾಷ ಹಸನ್, ಹಂಝ, ಗ್ರಾಮ ಪಂಚಾಯಿತಿ ಸದಸ್ಯ ರಝಕ್, ಬಶೀರ್, ಯುಎಇ ಸಮಿತಿ ಸದಸ್ಯ ಅಧ್ಯಕ್ಷ ನಾಸಿರ್, ಎಡಪಾಲ ಜಮಾಅತ್ ಅಧ್ಯಕ್ಷ ಶಾಫಿ, ಜಮಾಅತ್ ಪದಾಧಿಕಾರಿಗಳು, ಮತಿತ್ತರರು ಉಪಸ್ಥಿತರಿದ್ದರು.

ಅಬ್ದುಲ್ಲ ಸಖಾಫಿ ಪ್ರಾರ್ಥಿಸಿದರೆ, ಅಜೀಜ್ ಮಾಸ್ಟರ್ ಸ್ವಾಗತಿಸಿ, ಸಹೀದ್ ವಂದಿಸಿದರು. ಸಂಜೆ ಮೌಲೂದ್ ಪಾರಾಯಣದ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. -ಅಶ್ರಫ್