ಚೆಯ್ಯಂಡಾಣೆ, ಫೆ. ೨೬: ಕೊಡಗಿನ ನಂಟು ಹೊಂದಿರುವ ಕೇರಳದ ಪಯ್ಯವೂರ್ ಹಬ್ಬ ಇತ್ತೀಚೆಗೆ ಸಂಪನ್ನಗೊAಡಿತು.
ಕೇರಳದ ಪಯ್ಯವೂರ್ ಈಶ್ವರ ದೇವರಿಗೂ ಕೊಡಗಿಗೂ ಎಲ್ಲಿಲ್ಲದ ನಂಟು. ಪುರಾತನ ಕಾಲದಲ್ಲಿ ಕೇರಳದಲ್ಲಿ ಕ್ಷಾಮ ತಲೆದೋರಿತು. ದೇವರ ನಿತ್ಯ ನೈವೇದ್ಯಕ್ಕೂ ಬರ ಬಂದ ಕಾಲ.
ಅಂದು ಚೆಯ್ಯಂಡಾಣೆ ಸಮೀಪ ಪೆಬ್ಬಾಟ್ಟಾಣೆ ಮಂದ್ (ದೇವ ತೊಪ್ಪು ಮಂದ್) ನಲ್ಲಿ ಮುಂಡಿಯೋಳAಡ ಹಾಗೂ ಬೋವ್ವೇರಿಯಂಡ ಕುಟುಂಬಸ್ಥರ ಹಿರಿಯರಿಗೆ ದೇವರು ಪ್ರತ್ಯಕ್ಷಗೊಂಡು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪಯ್ಯವೂರ್ ಹಬ್ಬಕ್ಕೆ ನೈವೇದ್ಯಕ್ಕೆ ಅಕ್ಕಿಯನ್ನು ಸಮರ್ಪಿಸಬೇಕೆಂದು ಹೇಳಿದರಂತೆ. ಅದೇ ಪ್ರಕಾರ ಅಂದಿನಿAದ ಮುಂಡಿಯೋಳAಡ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರು ಕೇರಳದ ಪಯ್ಯವೂರ್ ಕ್ಷೇತ್ರದಲ್ಲಿ ತಕ್ಕರಾಗಿದ್ದು ಮೊದಲಿಗೆ ಈ ಎರಡು ಕುಟುಂಬಸ್ಥರು ಎತ್ತು ಪೋರಾಟದೊಂದಿಗೆ ತೆರಳುತ್ತಾರೆ
ಫೆ.೧೦ ರಂದು ಎತ್ತು ಪೋರಾಟದೊಂದಿಗೆ ಚೇಲಾವರದ ಅರಣ್ಯದ ಕಾಡುದಾರಿಯ ಮುಖಾಂತರ ಸುಮಾರು ೪೦ಕ್ಕೂ ಹೆಚ್ಚು ಕಿ.ಮಿ.ನಷ್ಟು ದೂರದ ಪಯ್ಯವೂರ್ಗೆ ಕಾಲ್ನಡಿಗೆಯಲ್ಲಿ ತೆರಳಿ ಫೆ.೧೨ ರಂದು ಬೆಳಿಗ್ಗೆ ಅಕ್ಕಿ ಅರ್ಪಿಸುತ್ತಾರೆ. ನಂತರ ಅಕ್ಕಿ ಅಳ್ಪೋ ಶಾಸ್ತçದ ಮೂಲಕ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಳ್ಳಲಿದೆ.
ಕೋಮರತಚ್ಚನ್ ಆಹ್ವಾನ
ವರ್ಷಕ್ಕೆ ಒಂದು ಬಾರಿ ಕೋಮರತಚ್ಚನ್ ಮುಂಡಿಯೋಳAಡ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರ ಮನೆಗೆ ತೆರಳಿ ನಂತರ ಕಡಿಯತ್ನಾಡಿನ ಮುಖ್ಯವಾದ ೧೨ ಕುಟುಂಬಕ್ಕೆ ಹಾಗೂ ದೇವಸ್ಥಾನಗಳಿಗೆ ತೆರಳಿ ಆಹ್ವಾನ ನೀಡಿ ಹಿಂತಿರುಗಿ ಮುಂಡಿಯೋಳAಡ ಕುಟುಂಬಸ್ಥರಿಗೆ ಕಂಡಿ ಪಣ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರಿಗೆ ಕೌಂಡಿಪಣ ನೀಡಿ ಕಾಡುದಾರಿಯ ಮೂಲಕ ಕೇರಳದ ಪಯ್ಯವೂರ್ಗೆ ತೆರಳುತ್ತಾರೆ.
ಫೆ.೧೯ ರಂದು ನಾಡಿಗೆ ಒಳಪಟ್ಟ ಭಕ್ತರು ಎತ್ತು ಪೋರಾಟದೊಂದಿಗೆ ಪಯ್ಯವೂರ್ಗೆ ಹೊರಟು ತಾ.೨೧ ರಿಂದ ೨೩ ರತನಕ ಕ್ರಮವಾಗಿ ಎಂಟು, ಒಂಭತ್ತ್ತು, ಹತ್ತು ಊಟ್ ಹಬ್ಬ ನಡೆಯಿತು.ನಂತರ ಆನೆಯ ಮೇಲೆ ದೇವರ ಪ್ರದಕ್ಷಿಣೆ, ದೇವರಿಗೆ ತುಪ್ಪಾಭಿಷೇಕ ನಡೆದು ಹಬ್ಬಕ್ಕೆ ತೆರೆ ಎಳೆಯಲಾಯಿತು. ಕಡಿಯತ್ ನಾಡಿನಿಂದ ಬಂದ ಭಕ್ತಾದಿಗಳ ಅಕ್ಕಿಯನ್ನು ಕುಟುಂಬಸ್ಥರು ಅಳತೆಮಾಡಿ ನೋಂದಾಯಿಸಿಕೊ ಳ್ಳುತ್ತಾರೆ. ಅದಕ್ಕೆ ಪ್ರತಿಫಲವಾಗಿ ಪ್ರಸಾದ ರೂಪದಲ್ಲಿ ಭಕ್ತಾದಿಗಳಿಗೆ ತೆಂಗಿನಕಾಯಿ ಕೊಡುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ.
ಹಬ್ಬದಲ್ಲಿ ಕೊಡಗಿನ ಕಡಿಯತ್ನಾಡಿಗೆ ಒಳಪಟ್ಟ ಭಕ್ತರಿಂದ ದುಡಿಕೊಟ್ಟ್ ಪಾಟ್, ಬೊಳಕಾಟ್ ಮನಸೆಳೆಯಿತು. ೧೫ಕ್ಕೂ ಹೆಚ್ಚು ತಿರುವಳಕಾರರು, ೧೦ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮುಂಡಿಯೋಳAಡ ಹಾಗೂ ಬೊವ್ವೇರಿಯಂಡ ಕುಟುಂಬದ ತಲಾ ಒಬ್ಬರನ್ನು ದೇವಸೋಮ್ ಬೋರ್ಡ್ನಲ್ಲಿ ಟ್ರಸ್ಟಿಗಳಾಗಿ ನೇಮಿಸಲಾಗಿದೆ. -ಅಶ್ರಫ್