ಕುಶಾಲನಗರ, ಫೆ. ೨೬: ಸಮೀಪದ ಕೊಪ್ಪ ಗ್ರಾಮದಲ್ಲಿ ಮನೆಯಲ್ಲಿ ಮಲಗಿದ್ದ ಸಂದರ್ಭ ಬಾಲಕನೊಬ್ಬನಿಗೆ ಹಾವು ಕಚ್ಚಿ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ.
ಕೊಪ್ಪ ಗ್ರಾಮದ ಮೈಸೂರು ರಸ್ತೆಯ ಅಂಚಿನಲ್ಲಿರುವ ಅಡ್ಡಂಡ ಪೊನ್ನಪ್ಪ ಮತ್ತು ಪವಿತ್ರ ದಂಪತಿ ಪುತ್ರ ಕುಶಾಲನಗರ ಫಾತಿಮಾ ಕಾನ್ವೆಂಟ್ ಮೂರನೇ ತರಗತಿ ವಿದ್ಯಾರ್ಥಿ ಆದರ್ಶ್ ದೇವಯ್ಯ (೯) ಮೃತಪಟ್ಟ ದುರ್ದೈವಿ ಬಾಲಕ.
ಕುಶಾಲನಗರ ಬೈಲುಕೊಪ್ಪ ಹೆದ್ದಾರಿ ರಸ್ತೆಯ ಅಂಚಿನಲ್ಲಿರುವ ಹಂಚಿನ ಮನೆಯಲ್ಲಿ ರಾತ್ರಿ ಬಾಲಕ ತನ್ನ ಸಹೋದರ, ತಾಯಿ ಅಜ್ಜಿಯೊಂದಿಗೆ ಮಲಗಿದ್ದ ಸಂದರ್ಭ ಹಾವು ರಾತ್ರಿ ೨ ಗಂಟೆ ವೇಳೆಯಲ್ಲಿ ಕಚ್ಚಿರುವುದಾಗಿ ಮೃತ ಬಾಲಕನ ತಾಯಿ ಪವಿತ್ರ ತಿಳಿಸಿದ್ದಾರೆ. ಪುತ್ರ ಕಿರುಚಿಕೊಂಡ ಸಂದರ್ಭ ಹಾವು ಮನೆಯಲ್ಲಿ ಓಡಾಡುತ್ತಿದ್ದನ್ನು ತಾನು ಕಂಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಹಾವು ಕಚ್ಚಿದ ತಕ್ಷಣ ಸ್ಥಳೀಯ ವೈದ್ಯರ ಬಳಿ ತೆರಳಿದರೂ ಪ್ರಯೋಜನವಾಗದೆ ಹೆಚ್ಚಿನ ಚಿಕಿತ್ಸೆಗೆ ಕುಶಾಲನಗರ ಸರಕಾರಿ ಆಸ್ಪತ್ರೆಗೆ ಒಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬಾಲಕನ ಪೋಷಕರು ಮೂಲತಃ ಸೂರ್ಲಬ್ಬಿ ಗ್ರಾಮ ನಿವಾಸಿಗಳಾಗಿದ್ದು, ಕೆಲವು ವರ್ಷಗಳಿಂದ ಕೊಪ್ಪ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ತಂದೆ ಪೊನ್ನಪ್ಪ ಅವರು ಚೆನ್ನೆöÊ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಪವಿತ್ರ ರಸ್ತೆ ಬದಿಯಲ್ಲಿ ಸಣ್ಣ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದು, ಇದೀಗ ಕುಟುಂಬ ದುಃಖ ಸಾಗರದಲ್ಲಿ ಮುಳುಗಿದೆ.
ಸಮೀಪದಲ್ಲಿ ಪುಟ್ಟ ಮಗು ತನ್ನ ಅಜ್ಜಿಯೊಂದಿಗೆ ಮಲಗಿದ್ದು ತಾಯಿ ಸೇರಿದಂತೆ ಮೂರು ಜನ ಅಪಾಯದಿಂದ ಪಾರಾಗಿದ್ದಾರೆ.
ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದು, ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೈಲುಕೊಪ್ಪ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ.