ವೀರಾಜಪೇಟೆ, ಫೆ. ೨೬: ವೀರಾಜಪೇಟೆ ಪುರಸಭೆಯ ಮಳಿಗೆ ಗಳ ವಾರ್ಷಿಕ ಹರಾಜಿನಲ್ಲಿ ವಾಹನ ಗಳ ಸುಂಕ ಎತ್ತಾವಳಿ, ಹಂದಿ ಮಾಂಸ ಮಳಿಗೆ ಹರಾಜು ಸಂತೆ ಸುಂಕ ಎತ್ತಾವಳಿ ಸೇರಿದಂತೆ, ೬ ಲಕ್ಷ ೪೦ ಸಾವಿರ ರೂ. ಸಂಗ್ರಹಗೊAಡಿದೆ. ಕಳೆದ ಸಾಲಿಗಿಂತ ರೂ. ೩ ಲಕ್ಷದ ೧೧ ಸಾವಿರ ಹೆಚ್ಚು ಆದಾಯ ಪುರಸಭೆಗೆ ಬಂದಿದೆ.
ವೀರಾಜಪೇಟೆ ಪುರಸಭೆಗೆ ಸೇರಿದ ೨೦೨೪-೨೫ನೇ ಸಾಲಿನ ವಾರ್ಷಿಕ ಬಹಿರಂಗ ಹರಾಜಿನಲ್ಲಿ ಹಂದಿ ಮಾಂಸ ಮಳಿಗೆ ರೂ. ೭೮ ಸಾವಿರ, ವಾಹನ ಸುಂಕ ರೂ. ೧.೬೦ ಲಕ್ಷ, ಸಂತೆ ಸುಂಕ ರೂ. ೪.೨ ಲಕ್ಷ ಸೇರಿದಂತೆ ಒಟ್ಟು ರೂ. ೬.೪೦ ಲಕ್ಷ ಬಂದಿದೆ. ಕಳೆದ ಸಾಲಿಗಿಂತ ಈ ಬಾರಿ ರೂ. ೩ ಲಕ್ಷದ ೧೧ ಸಾವಿರ ಹೆಚ್ಚು ಗಳಿಸಿರುವುದಾಗಿ ತಿಳಿಸಿದ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರು ಇನ್ನು ಉಳಿದಿರುವ ಅನೇಕ ಮಳಿಗೆಗಳ ವಾರ್ಷಿಕ ಹರಾಜು ಪ್ರಕ್ರಿಯೆ ಮುಂದಿನ ದಿನದಲ್ಲಿ ನಡೆಯಲಿದ್ದು ಅದರಲ್ಲಿ ಹೆಚ್ಚಿನ ಆದಾಯ ಬರಲಿದೆ ಎಂದರು. ಪುರಸಭೆ ಸದಸ್ಯರಾದ ಸುನಿತ ಜೂನಾ, ಫಸಿಯಾ ತಬಸಮ್, ಮಹ್ಮದ್ ರಾಫಿ, ಮಹದೇವ್ ಸುಭಾಶ್, ರಜನಿಕಾಂತ್, ಅನಿತಾ, ಅಬ್ದುಲ್ ಜಲೀಲ್ ಹಾಗೂ ಪುರಸಭೆ ಸಿಬ್ಬಂದಿಗಳು ಮತ್ತು ಬಿಡ್ ದಾರರು ಭಾಗವಹಿಸಿದ್ದರು.