ಮಡಿಕೇರಿ, ಫೆ. ೨೬: ಟಿ.ಎಂ. ವಿಜಯಭಾಸ್ಕರ್ ಅವರು ಸಲ್ಲಿಸಿರುವ ಆಡಳಿತ ಸುಧಾರಣೆ ವರದಿಯನ್ನು ತಕ್ಷಣಕ್ಕೆ ಜಾರಿ ಮಾಡುವುದಿಲ್ಲ ಎಂದು ಶಾಸಕ ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು.

ಕರ್ನಾಟಕ ಅರಣ್ಯ ವಿದ್ಯಾರ್ಥಿಗಳು ಮತ್ತು ಪದವೀಧರ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಮುಷ್ಕರ ¸್ಥÀಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ಟಿ.ಎಂ. ವಿಜಯಭಾಸ್ಕರ್ ರವರು ಸಲ್ಲಿಸಿರುವ ಆಡಳಿತ ಸುಧಾರಣೆ ವರದಿಯನ್ನು ತಕ್ಷಣಕ್ಕೆ ಜಾರಿ ಮಾಡುವುದಿಲ್ಲ ಎಂದು ಅರಣ್ಯ ಸಚಿವರು ದೂರವಾಣಿ ಮೂಲಕ ತನಗೆ ತಿಳಿಸಿದ್ದಾರೆ. ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಸೂಕ್ತ ಕ್ರಮವನ್ನು ಜರುಗಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ತಾನು ಕೂಡ ಕಾನೂನಾತ್ಮಕವಾಗಿ ಸರ್ವೋZ್ಛÀ ನ್ಯಾಯಾಲಯ ಮತ್ತು ಉಚ್ಛನ್ಯಾಯಾಲಯ ತೀರ್ಪುಗಳನ್ನು ಅಧ್ಯಯನ ಮಾಡಿ ಮುಖ್ಯಮಂತ್ರಿಗಳಿಗೆ ಮತ್ತು ಅರಣ್ಯ ಸಚಿವರಿಗೆ ಕಾನೂನಿನ ಮಾಹಿತಿ ನೀಡಿ ಇದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ. ಮುಖ್ಯವಾದ ಬೇಡಿಕೆಯಾದ ಅರಣ್ಯ ಪದವೀಧರರಿಗೆ ಮಾv್ರÀ ಹುದ್ದೆಯನ್ನು ಮೀಸಲು ಇಡುವುದರ ಬU್ಗೆ ಇನ್ನು ¸್ವÀಲ್ಪ ಅಧ್ಯಯನ ಮಾಡಬೇಕಾಗಿದೆ. ಇದಕ್ಕೆ ಕಾಲಾವಕಾಶ ಬೇಕು. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸಹಕಾರ ನೀಡುತ್ತೇನೆ ಎಂದು ಪೊನ್ನಣ್ಣ ಭರವಸೆಯಿತ್ತರು. ಮುಷ್ಕರವನ್ನು ಕೈಬಿಟ್ಟು ಕೂಡಲೇ ಕಾಲೇಜಿಗೆ ತೆರಳುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.