ಕುಶಾಲನಗರ, ಫೆ. ೨೬: ಕುಶಾಲನಗರ ಮುಳ್ಳುಸೋಗೆ ಜನತಾ ಕಾಲೋನಿ ಗ್ರಾಮದ ಗೌರಿ ಗಣೇಶ ದೇವಸ್ಥಾನದ ಐದನೇ ವರ್ಷದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಗೌರಿ ಗಣೇಶ ದೇವಸ್ಥಾನ ಸೇವಾ ಟ್ರಸ್ಟ್ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮದಲ್ಲಿ ದೇವಾಲಯದಲ್ಲಿ ವಿಶೇಷ ಅರ್ಚನೆ, ವಿಧಿ ವಿಧಾನಗಳು ಜರಗಿದವು.
ಕಾವೇರಿ ನದಿಯಿಂದ ಗಂಗಾಜಲ ತಂದು ಪೂಜೆ ಸಲ್ಲಿಸಲಾಯಿತು. ದೇವಾಲಯದ ಅರ್ಚಕರಾದ ಶ್ರೀಧರ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.
ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಸಾಮೂಹಿಕ ಪೂಜೆ ಸಲ್ಲಿಸಿದರು.
ದೇವಸ್ಥಾನ ಸೇವಾ ಟ್ರಸ್ಟ್ನ ಅಧ್ಯಕ್ಷ ಸುಚಿತ್ರ ತಮ್ಮಯ್ಯ, ಉಪಾಧ್ಯಕ್ಷೆ ಜ್ಯೋತಿ, ಕಾರ್ಯದರ್ಶಿ ಚಂದ್ರಿಕಾ, ಸಂಚಾಲಕಿ ವಿಜಿ, ರಮ್ಯ, ಸಚಿನ್, ರವಿಚಂದ್ರ, ಲೋಕೇಶ್, ನಾಗ ಪ್ರವೀಣ್, ತಮ್ಮಯ್ಯ, ಮತ್ತಿತರರು ಇದ್ದರು.