ಸೋಮವಾರಪೇಟೆ, ಫೆ. ೨೭: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾರುಕಟ್ಟೆ ಆವರಣದಲ್ಲಿರುವ ಮಾಂಸ, ಮೀನು ಮಾರಾಟ ಮಳಿಗೆ, ಸಂತೆ ಸುಂಕ ಎತ್ತಾವಳಿ ಹಾಗೂ ಬಸ್ ನಿಲ್ದಾಣ ಸುಂಕ ಎತ್ತಾವಳಿ ಹಕ್ಕು ಹರಾಜಿನಿಂದ ಪ.ಪಂ.ಗೆ ವಾರ್ಷಿಕ ೩೨,೫೦೦ ಹೆಚ್ಚುವರಿ ಆದಾಯ ಲಭಿಸಿದೆ.

ಕಳೆದ ಬಾರಿ ಒಟ್ಟಾರೆ ರೂ.೨೧,೧೫,೫೦೦ಗೆ ಹರಾಜಾಗಿದ್ದರೆ ಈ ಬಾರಿ ೨೧,೪೮,೦೦೦ ರೂಪಾಯಿಗಳಿಗೆ ಟೆಂಡರ್ ಆಗುವ ಮೂಲಕ ಪಂಚಾಯಿತಿಗೆ ವಾರ್ಷಿಕ ೩೨.೫ ಸಾವಿರ ಹೆಚ್ಚುವರಿ ಆದಾಯ ಬಂದಿದೆ.

ಕಳೆದ ಬಾರಿ ಕೋಳಿ ಮಾಂಸ ಮಾರಾಟದ ಮಳಿಗೆ ಸಂಖ್ಯೆ ೩ ವಾರ್ಷಿಕ ೪೫ ಸಾವಿರಕ್ಕೆ ಹರಾಜಾಗಿತ್ತು. ಈ ಬಾರಿ ಅದು ೪೭ ಸಾವಿರ, ೨.೩೦ ಲಕ್ಷಕ್ಕೆ ಹರಾಜಾಗಿದ್ದ ಮಳಿಗೆ ಸಂಖ್ಯೆ ೪ ಈ ಬಾರಿ ೨.೩೧ ಲಕ್ಷ, ೨.೩೨ ಲಕ್ಷಕ್ಕೆ ಹರಾಜಾಗಿದ್ದ ಮಳಿಗೆ ಸಂಖ್ಯೆ ೬ ಈ ಬಾರಿ ೨.೩೪ ಲಕ್ಷಕ್ಕೆ ಹರಾಜಾಗುವ ಮೂಲಕ ಪಂಚಾಯಿತಿಗೆ ವಾರ್ಷಿಕ ೫ ಸಾವಿರ ಹೆಚ್ಚುವರಿ ಆದಾಯ ಲಭಿಸಿದೆ.

ಕುರಿಮಾಂಸ ಮಾರಾಟ ಮಳಿಗೆ ಸಂಖ್ಯೆ ೫ ಕಳೆದ ವರ್ಷ ೨೮ ಸಾವಿರಕ್ಕೆ ಹರಾಜಾಗಿದ್ದರೆ ಈ ಬಾರಿ ೩೧ ಸಾವಿರ, ಮಳಿಗೆ ಸಂಖ್ಯೆ ೭-೧.೫೦ ಲಕ್ಷದಿಂದ ೧.೫೬ ಲಕ್ಷ, ಮಳಿಗೆ ಸಂಖ್ಯೆ ೧೦-೩೨ ಸಾವಿರದಿಂದ ೩೪ ಸಾವಿರಕ್ಕೆ ಹರಾಜಾಗಿದೆ. ಈ ಮಳಿಗೆಗಳ ಹರಾಜಿನಿಂದ ೧೧ ಸಾವಿರ ಹೆಚ್ಚಿನ ಆದಾಯ ಬಂದಿದೆ.

ಹಸಿಮೀನು ಮಾರಾಟ ಮಳಿಗೆ ಸಂಖ್ಯೆ ೮ ಕಳೆದ ಬಾರಿ ೧.೭೨ ಲಕ್ಷಕ್ಕೆ ಹರಾಜಾಗಿದ್ದರೆ ಈ ಬಾರಿ ೧.೭೪ ಲಕ್ಷ, ಮಳಿಗೆ ಸಂಖ್ಯೆ ೯- ೧.೧೦ ಲಕ್ಷದಿಂದ ೧.೧೩ ಲಕ್ಷ, ಮಳಿಗೆ ಸಂಖ್ಯೆ ೧೧- ೧.೩೧ ಲಕ್ಷದಿಂದ ೧.೩೩ ಲಕ್ಷಕ್ಕೆ ಹರಾಜಾಗಿದೆ. ಇದರಿಂದ ೭ ಸಾವಿರ ಹೆಚ್ಚುವರಿ ಆದಾಯ ಲಭಿಸಿದೆ.

ಸಂತೆ ಸುಂಕ ಎತ್ತಾವಳಿ ಹಕ್ಕನ್ನು ಕಳೆದ ಬಾರಿ ೯.೩೮ ಲಕ್ಷಕ್ಕೆ ನೀಡಿದ್ದರೆ, ಈ ಬಾರಿ ೯.೪೫ ಲಕ್ಷಕ್ಕೆ ಟೆಂಡರ್ ಮಾಡಲಾಗಿದೆ. ವಾರ್ಷಿಕ ೭ ಸಾವಿರ ಹೆಚ್ಚುವರಿ ಆದಾಯ ಬಂದಿದೆ. ಬಸ್ ನಿಲ್ದಾಣದ ಸುಂಕ ಎತ್ತಾವಳಿ ಹಕ್ಕನ್ನು ಕಳೆದ ಬಾರಿ ೪೭,೫೦೦ಕ್ಕೆ ನೀಡಿದ್ದರೆ, ಈ ಬಾರಿ ೫೦ ಸಾವಿರಕ್ಕೆ ಹರಾಜು ಮಾಡಲಾಗಿದೆ. ಹೆಚ್ಚುವರಿಯಾಗಿ ಎರಡೂವರೆ ಸಾವಿರ ಪಂಚಾಯಿತಿಗೆ ಆದಾಯ ಬಂದಿದೆ.

ಹAದಿ ಮಾಂಸ ಮಾರಾಟ ಮಳಿಗೆಗೆ ಯಾರೂ ಸಹ ಟೆಂಡರ್ ಹಾಕದ ಹಿನ್ನೆಲೆ, ಮಳಿಗೆ ಹರಾಜು ನಡೆದಿಲ್ಲ. ಒಟ್ಟಾರೆ ಕುರಿ, ಕೋಳಿ, ಹಸಿ ಮೀನು ಮಾರಾಟ ಮಳಿಗೆ, ಸಂತೆ ಹಾಗೂ ಬಸ್ ನಿಲ್ದಾಣ ಸುಂಕ ಎತ್ತಾವಳಿ ಹಕ್ಕನ್ನು ಕಳೆದ ಬಾರಿ ರೂ. ೨೧,೧೫,೫೦೦ಕ್ಕೆ ಹರಾಜು ಮಾಡಿದ್ದರೆ, ಈ ಬಾರಿ ೨೧.೪೮ ಲಕ್ಷಕ್ಕೆ ಹರಾಜಾಗುವ ಮೂಲಕ ವಾರ್ಷಿಕ ೩೨.೫ ಸಾವಿರ ರೂಪಾಯಿ ಪಂಚಾಯಿತಿಗೆ ಅಧಿಕ ಆದಾಯ ಬಂದಿದೆ.

ಪAಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ನವೀನ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಟೆಂಡರ್ ಸಭೆಯಲ್ಲಿ ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರುಗಳಾದ ಪಿ.ಕೆ. ಚಂದ್ರು, ಜಯಂತಿ ಶಿವಕುಮಾರ್, ಬಿ.ಸಿ. ವೆಂಕಟೇಶ್, ಮೋಹಿನಿ, ಶುಭಕರ್, ಮೃತ್ಯುಂಜಯ, ಜೀವನ್, ಬಿ.ಆರ್. ಮಹೇಶ್ ಅವರುಗಳು ಉಪಸ್ಥಿತರಿದ್ದರು.