ಪೊನ್ನಂಪೇಟೆ, ಫೆ . ೨೬ : ಕರ್ನಾಟಕ ಸ್ಪೋರ್ಟ್ ಡ್ಯಾನ್ಸ್ ಅಸೋಸಿಯೇಷನ್ ಹಾಗೂ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಜಮ್ಮು ಕಾಶ್ಮೀರದ ಅಭಿನವ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ರಾಷ್ಟç ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೆ. ಎನ್. ದೀಕ್ಷಾ ಉತ್ತಮ ಪ್ರದರ್ಶನ ತೋರುವ ಮೂಲಕ, ಶಾಸ್ತಿçÃಯ ನೃತ್ಯ (ಗುಂಪು) ಮತ್ತು ಜಾನಪದ ನೃತ್ಯ (ಗುಂಪು ) ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಶಾಸ್ತಿçÃಯ ನೃತ್ಯ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಪಡೆದು ಅಂತರರಾಷ್ಟಿçÃಯ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಈಕೆ ಅರಮೇರಿ ಎಸ್.ಎಂ.ಎಸ್ ವಿದ್ಯಾಸಂಸ್ಥೆಯಲ್ಲಿ ೨ ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಬಿಟ್ಟಂಗಾಲ ಗ್ರಾಮದ ಕೆ.ಎ.ನವೀನ್ ಕುಮಾರ್ ಮತ್ತು ಎ.ಎಸ್.ನಿತ್ಯ ದಂಪತಿಯ ಪುತ್ರಿ. ಈಕೆ ವೀರಾಜಪೇಟೆಯ ವಿದುಷಿ ಹೇಮಾವತಿ ಕಾಂತರಾಜ್ ಅವರ ನಾಟ್ಯಂಜಲಿ ನೃತ್ಯ ಮತ್ತು ಸಂಗೀತ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ.