ಮಡಿಕೇರಿ, ಫೆ. ೨೬: ಕೊಡಗಿನ ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ಜಿಲ್ಲೆಯ ಏಕೈಕ ನಗರಸಭೆಯೂ ಆಗಿದೆ. ಮಡಿಕೇರಿ ನಗರದಲ್ಲಿ ವಾಹನಗಳ ನಿಲುಗಡೆಗೆ ಸಮಸ್ಯೆ ಇರುವುದು ಬಹುತೇಕ ಎಲ್ಲರಿಗೂ ಅರಿವಿದೆ. ಪ್ರವಾಸಿಗರೂ ಹೆಚ್ಚಾಗಿ ಆಗಮಿಸುವುವದರಿಂದ ಹಾಗೂ ಜಿಲ್ಲಾ ಕೇಂದ್ರವೂ ಆಗಿರುವುದರಿಂದ ಇಲ್ಲಿ ಸಂಚಾರ ವ್ಯವಸ್ಥೆಗೆ ತೀರಾ ಸಂಕಷ್ಟ ಎದುರಾಗುತ್ತಿರುತ್ತದೆ.
ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶದ ಕೊರತೆಯಿಂದಾಗಿ ಸದಾ ಟ್ರಾಫಿಕ್ ಜಾಂ ಆಗುತ್ತಿರುತ್ತದೆ. ಇಂತಹ ಸಮಸ್ಯೆಯ ನಡುವೆ ನಗರದ ಕೆಲವು ರಸ್ತೆಗಳಲ್ಲಿ, ತಿಂಗಳಾನುಗಟ್ಟಲೆಯಿAದ ಕೆಲವೊಂದು ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ.
ನಗರದ ಹಲವೆಡೆ ಹೇಳುವವರು - ಕೇಳುವವರು ಇಲ್ಲದ ರೀತಿಯಲ್ಲಿ ಕೆಲವೊಂದು ವಾಹನಗಳು ಧೂಳು ಹಿಡಿದು ನಿಂತು ತಿಂಗಳಾನುಗಟ್ಟಲೆಯಾಗುತ್ತಿದೆ. ಇಂತಹ ನಿಲುಗಡೆಯಿಂದಾಗಿ ದಿನನಿತ್ಯದ ಸಂಚಾರ ವ್ಯವಸ್ಥೆಗೆ ಪದೇ ಪದೇ ಸಮಸ್ಯೆಯಾಗುತ್ತಿದೆ. ಕೈಗಾರಿಕಾ ಬಡಾವಣೆ ರಸ್ತೆಯ ಮೂಲಕ ಖಾಸಗಿ ಬಸ್ ಸಂಚಾರವೂ ಇದೆ. ಈ ರಸ್ತೆಯಲ್ಲೇ ಆಟೋ, ಕಾರು ಸೇರಿ ನಾಲ್ಕೆöÊದು ವಾಹನಗಳು ಅದೆಷ್ಟೋ ಸಮಯದಿಂದ ನಿಂತಲ್ಲೇ ಇವೆ.
ಇತ್ತೀಚೆಗೆ ಓದುಗರೊಬ್ಬರು ಈ ಬಗ್ಗೆ ಪತ್ರಿಕೆ ಮೂಲಕ ಬೆಳಕು ಚೆಲ್ಲಿದ್ದರೂ ಇತ್ತ ಯಾರೂ ಗಮನ ಹರಿಸಿಲ್ಲ. ಐಟಿಐ ಬಳಿ ದಸರಾದ ಮಾರನೆಯ ದಿನದಿಂದ ನಿಲುಗಡೆಗೊಂಡಿರುವ ಕಾರೊಂದನ್ನು ಇನ್ನೂ ಕೇಳುವವರಿಲ್ಲ. ಕಿಷ್ಕೆಂದೆಯಾಗಿರುವ ನಗರದ ಹಲವೆಡೆ ಈ ರೀತಿಯ ಅನಧಿಕೃತ ಪಾರ್ಕಿಂಗ್‌ನಿAದಾಗಿ ಸಮಸ್ಯೆಗಳು ಬಿಗಡಾಯಿಸುತ್ತಿದೆ. ಈ ಕುರಿತು ಪೊಲೀಸ್ ಇಲಾಖೆ ನಗರದೆಲ್ಲೆಡೆ ಅವಲೋಕಿಸಿ ಇಂತಹ ವಾಹನಗಳನ್ನು ಅಲ್ಲಿಂದ ತೆರವು ಮಾಡಿಸಬೇಕಿದೆ. ಸಂಚಾರಿ ಪೊಲೀಸರಿಗಂತೂ ವಾಹನ ದಟ್ಟಣೆ ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ಪೊಲೀಸ್ ಇಲಾಖೆ, ಜತೆಗೆ ನಗರಸಭೆ ಕೂಡ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ‘ಶಕ್ತಿ’ ಮೂಲಕ ಒತ್ತಾಯಿಸಿದ್ದಾರೆ.