ಮಡಿಕೇರಿ, ಫೆ. ೨೬: ಕೊಡಗು ಜಿಲ್ಲೆಯಲ್ಲಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳೆಷ್ಟು ಗೊತ್ತೇ... ಬರೋಬ್ಬರಿ ೩೯೬೫ ಹುದ್ದೆಗಳು ಜಿಲ್ಲೆಯಲ್ಲಿ ಖಾಲಿ ಇದೆ ಎಂದರೆ ಅಗತ್ಯ ಕೆಲಸ ಕಾರ್ಯಗಳು ಹೇಗೆ ತಾನೆ ನಡೆಸಲು ಸಾಧ್ಯ..?
ವಿವಿಧ ಸರಕಾರಿ ಇಲಾಖೆಗಳಿಗೆ ಸಂಬAಧಿಸಿದAತೆ ಕೊಡಗು ಜಿಲ್ಲೆಗೆ ಮಂಜೂರಾತಿ ಇರುವ ಒಟ್ಟು ಹುದ್ದೆಗಳು ೯೦೪೪ ರಷ್ಟು. ಇದರಲ್ಲಿ ಪ್ರಸ್ತುತ ಭರ್ತಿಯಾಗಿರುವುದು ೫೦೭೯ ಮಾತ್ರ. ಖಾಲಿ ಇರುವ ಹುದ್ದೆಗಳ ಸಂಖ್ಯೆ ೩೯೬೫ ಇದು ರಾಜ್ಯಸರಕಾರವೇ ವಿಧಾನ ಪರಿಷತ್ನಲ್ಲಿ ನೀಡಿರುವ ಅಧಿಕೃತವಾದ ದಾಖಲಾತಿ ಎಂಬದು ಹುಬ್ಬೇರಿಸುವಂತೆ ಮಾಡಿದೆ.
ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾಗಿರುವ ಎಂ.ಪಿ. ಸುಜಾ ಕುಶಾಲಪ್ಪ ಅವರು ಕೊಡಗಿನಲ್ಲಿ ಎಲ್ಲಾ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ಹಾಗೂ ಹುದ್ದೆಗಳು ಖಾಳಿ ಇರುವುದರಿಂದ ಅಭಿವೃದ್ಧಿ ಕುಂಠಿತವಾಗಿದ್ದು, ಯಾವ ಕಾಲಮಿತಿಯೊಳಗೆ ಭರ್ತಿ ಮಾಡಲಾಗುವುದು ಎಂಬ ಪ್ರಶ್ನೆಯನ್ನು ವಿಧಾನ ಪರಿಷತ್ನಲ್ಲಿ ಮುಂದಿಟ್ಟಿದ್ದರು. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒದಗಿಸಿರುವ ಮಾಹಿತಿಯಲ್ಲಿ ಬರೋಬ್ಬರಿ ೩೯೬೫ ಹುದ್ದೆ ಖಾಲಿ ಇರುವುದು ತಿಳಿದು ಬಂದಿದೆ.
ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಖಾಲಿ ಇರುವ ಹುದ್ದೆಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಂಡಿದೆ ಹಾಗೂ ಖಾಲಿ ಇರುವ ಮುಂಬಡ್ತಿ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳು ಲಭ್ಯವಾದಂತೆ ಕಾಲ ಕಾಲಕ್ಕೆ ಭರ್ತಿ ಮಾಡಲಾಗಿದೆ. ಗ್ರೂಪ್ ಸಿ ವೃಂದದ ಶೀಘ್ರಲಿಪಿಕಾರರು ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಪ್ ಡಿ ವೃಂದದ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಸುಜಾ ಕುಶಾಲಪ್ಪ ಅವರ ಪ್ರಶ್ನೆಗೆ ಉತ್ತರ ಒದಗಿಸಿದ್ದಾರೆ. ಸರಕಾರದ ಉತ್ತರ ಈ ರೀತಿ ಇರಬಹುದು ಆದರೆ, ಕಳೆದ ಕೆಲವಾರು ವರ್ಷಗಳಿಂದಲೂ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬದು ಜನತೆಯ ಅನುಭವದಲ್ಲಿರುವ ವಿಚಾರವಾಗಿದೆ. ಬಹುತೇಕ ಶೇ. ೪೦ ರಷ್ಟು ಹುದ್ದೆಗಳು ಖಾಲಿ ಇದ್ದು, ಇದರ ಭರ್ತಿ ಯಾವಾಗ ಎಂಬದು ಜನತೆಯ ಮುಂದಿರುವ ಪ್ರಶ್ನೆಯಾಗಿದೆ.
ಪ್ರಮುಖ ಇಲಾಖೆಗಳು
ಕಂದಾಯ ಇಲಾಖೆಗೆ ಸಂಬAಧಿಸಿದAತೆ ಮಂಜೂರಾದ ಹುದ್ದೆಗಳು ೩೬೫. ಇದರಲ್ಲಿ ಭರ್ತಿಯಾಗಿರುವುದು ೨೫೮ ಮಾತ್ರವಾಗಿದ್ದು, ೧೦೭ ಹುದ್ದೆಗಳು ಖಾಲಿ ಇವೆ. ಪೊಲೀಸ್ ಇಲಾಖೆಯಲ್ಲಿ ೯೩, ಕೃಷಿ ಇಲಾಖೆಯಲ್ಲಿ ೧೧೬, ತೋಟಗಾರಿಕಾ ಇಲಾಖೆಯಲ್ಲಿ ೯೯, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ೩೬೩, ಚೆಸ್ಕಾಂನಲ್ಲಿ ೫೪೬, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ೩೩೯ ಹುದ್ದೆಗಳು ಖಾಲಿ ಇವೆ.
ಇವು ಕೊಡಗಿನ ಮಟ್ಟಿಗೆ ಕೆಲವು ಪ್ರಮುಖವಾಗಿ ಬೇಕಾದ ಇಲಾಖೆಗಳಾಗಿವೆ ಎಂಬದು ಇಲ್ಲಿ ಗಮನಾರ್ಹ. ಒಟ್ಟು ೫೮ ಇಲಾಖೆಗಳಿಗೆ ಸಂಬAಧಿಸಿದAತೆ ಇಷ್ಟು ಪ್ರಮಾಣದಲ್ಲಿ ಅಂದರೆ ಒಟ್ಟು ೯೦೪೪ ಹುದ್ದೆಗಳ ಪೈಕಿ ೩೯೬೫ ಹುದ್ದೆಗಳು ಖಾಲಿ ಇದ್ದರೆ ಹೇಗೆ ತಾನೆ ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುವುದು ಎಂಬದು ಪ್ರಶ್ನೆಯಾಗಿದೆ.
(ಸರಕಾರದ ಮಾಹಿತಿಯನ್ನು ಇದರೊಂದಿಗೆ ಯಥವತ್ತಾಗಿ ಪ್ರಕಟಿಸಲಾಗಿದೆ)ಮುಂಬಡ್ತಿ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳು ಲಭ್ಯವಾದಂತೆ ಕಾಲ ಕಾಲಕ್ಕೆ ಭರ್ತಿ ಮಾಡಲಾಗಿದೆ. ಗ್ರೂಪ್ ಸಿ ವೃಂದದ ಶೀಘ್ರಲಿಪಿಕಾರರು ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಪ್ ಡಿ ವೃಂದದ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಸುಜಾ ಕುಶಾಲಪ್ಪ ಅವರ ಪ್ರಶ್ನೆಗೆ ಉತ್ತರ ಒದಗಿಸಿದ್ದಾರೆ. ಸರಕಾರದ ಉತ್ತರ ಈ ರೀತಿ ಇರಬಹುದು ಆದರೆ, ಕಳೆದ ಕೆಲವಾರು ವರ್ಷಗಳಿಂದಲೂ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬದು ಜನತೆಯ ಅನುಭವದಲ್ಲಿರುವ ವಿಚಾರವಾಗಿದೆ. ಬಹುತೇಕ ಶೇ. ೪೦ ರಷ್ಟು ಹುದ್ದೆಗಳು ಖಾಲಿ ಇದ್ದು, ಇದರ ಭರ್ತಿ ಯಾವಾಗ ಎಂಬದು ಜನತೆಯ ಮುಂದಿರುವ ಪ್ರಶ್ನೆಯಾಗಿದೆ.
ಪ್ರಮುಖ ಇಲಾಖೆಗಳು
ಕಂದಾಯ ಇಲಾಖೆಗೆ ಸಂಬAಧಿಸಿದAತೆ ಮಂಜೂರಾದ ಹುದ್ದೆಗಳು ೩೬೫. ಇದರಲ್ಲಿ ಭರ್ತಿಯಾಗಿರುವುದು ೨೫೮ ಮಾತ್ರವಾಗಿದ್ದು, ೧೦೭ ಹುದ್ದೆಗಳು ಖಾಲಿ ಇವೆ. ಪೊಲೀಸ್ ಇಲಾಖೆಯಲ್ಲಿ ೯೩, ಕೃಷಿ ಇಲಾಖೆಯಲ್ಲಿ ೧೧೬, ತೋಟಗಾರಿಕಾ ಇಲಾಖೆಯಲ್ಲಿ ೯೯, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ೩೬೩, ಚೆಸ್ಕಾಂನಲ್ಲಿ ೫೪೬, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ೩೩೯ ಹುದ್ದೆಗಳು ಖಾಲಿ ಇವೆ.
ಇವು ಕೊಡಗಿನ ಮಟ್ಟಿಗೆ ಕೆಲವು ಪ್ರಮುಖವಾಗಿ ಬೇಕಾದ ಇಲಾಖೆಗಳಾಗಿವೆ ಎಂಬದು ಇಲ್ಲಿ ಗಮನಾರ್ಹ. ಒಟ್ಟು ೫೮ ಇಲಾಖೆಗಳಿಗೆ ಸಂಬAಧಿಸಿದAತೆ ಇಷ್ಟು ಪ್ರಮಾಣದಲ್ಲಿ ಅಂದರೆ ಒಟ್ಟು ೯೦೪೪ ಹುದ್ದೆಗಳ ಪೈಕಿ ೩೯೬೫ ಹುದ್ದೆಗಳು ಖಾಲಿ ಇದ್ದರೆ ಹೇಗೆ ತಾನೆ ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುವುದು ಎಂಬದು ಪ್ರಶ್ನೆಯಾಗಿದೆ.
(ಸರಕಾರದ ಮಾಹಿತಿಯನ್ನು ಇದರೊಂದಿಗೆ ಯಥವತ್ತಾಗಿ ಪ್ರಕಟಿಸಲಾಗಿದೆ)