ಖ್ಯಾತ ಗಾಯಕ ಪಂಕಜ್ ಉಧಾಸ್ ನಿಧನ
ಮುಂಬೈ, ಫೆ. ೨೬: ಬಾಲಿವುಡ್ ಚಿತ್ರರಂಗದ ಗಾಯಕ, ಗಜಲ್ ಮಾಂತ್ರಿಕ ಪಂಕಜ್ ಉಧಾಸ್ (೭೩) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಬಾಲಿವುಡ್ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ, ಕನ್ನಡದಲ್ಲೂ ಅವರು ಹಾಡನ್ನು ಹಾಡಿದ್ದರು. ಸುದೀಪ್ ನಟನೆಯ ಸ್ಪರ್ಶ ಸಿನಿಮಾದ ‘ಚೆಂದಕ್ಕಿAತ ಚೆಂದ ನೀನೇ ಸುಂದರ’ ಗೀತೆಯು ಪಂಕಜ್ ಅವರ ಕಂಠದಲ್ಲೇ ಮೂಡಿ ಬಂದಿದ್ದು. ಇಟಗಿ ಈರಣ್ಣ ಅವರ ಸಾಹಿತ್ಯವನ್ನು ಈ ಹಾಡಿನ ಮೂಲಕ ನಾಡಿಗೆ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಗಾಯಕ ಪಂಕಜ್ ಉಧಾಸ್ ಅವರ ನಿಧನಕ್ಕೆ ಬಾಲಿವುಡ್ ನಟರು, ಗಾಯಕರು, ಸಂಗೀತ ನಿರ್ದೇಶಕರು ಕಂಬನಿ ಮಿಡಿದಿದ್ದಾರೆ.
ಭಾರತದ ಒತ್ತಡಕ್ಕೆ ಮಣಿದ ರಷ್ಯಾ: ಹಲವು ಭಾರತೀಯರ ಬಿಡುಗಡೆ
ನವದೆಹಲಿ, ಫೆ. ೨೬: ಭಾರತದ ಒತ್ತಾಯದ ನಂತರ ರಷ್ಯಾದ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ರಷ್ಯಾದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ರಷ್ಯಾದ ಸೈನ್ಯದಿಂದ ಭಾರತೀಯ ಪ್ರಜೆಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಎಲ್ಲಾ ಸಂಬAಧಿತ ವಿಷಯಗಳನ್ನು ಮುಂದುವರಿಸಲು ಭಾರತವು ಬದ್ಧವಾಗಿದೆ. ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಹಲವಾರು ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.
ಮಹಿಳೆಯರ ಶಾಶ್ವತ ಆಯೋಗ ಕುರಿತು ಕೇಂದ್ರಕ್ಕೆ 'ಸುಪ್ರೀಂ' ಚಾಟಿ
ನವದೆಹಲಿ, ಫೆ. ೨೬: ನೌಕಾಪಡೆಯಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ ಸಿಗುವುದನ್ನು ಖಚಿತಪಡಿಸಿಕೊಳ್ಳಿ.. ನಿಮ್ಮ ಕೈಲಾಗದಿದ್ದರೆ ಹೇಳಿ.. ಅದನ್ನು ನಾವು ಮಾಡುತ್ತೇವೆ ಎಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದೆ. ಭಾರತೀಯ ಕೋಸ್ಟ್ ಗಾರ್ಡ್ನಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ ನೀಡಿಕೆ ವಿಚಾರದಲ್ಲಿ ‘ಪುರುಷ ಪ್ರಧಾನ’ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, “ಮಹಿಳೆಯರು ಗಡಿಗಳನ್ನು ರಕ್ಷಿಸಬಲ್ಲರಾದರೆ, ಅವರು ಕರಾವಳಿಯನ್ನೂ ರಕ್ಷಿಸಬಲ್ಲರು. ಸೇನೆ ಮತ್ತು ನೌಕಾಪಡೆ ಈಗಾಗಲೇ ಈ ನೀತಿಯನ್ನು ಜಾರಿಗೆ ತಂದಿರುವಾಗ ಕೋಸ್ಟ್ ಗಾರ್ಡ್ ಏಕೆ ವಿಭಿನ್ನವಾಗಿರಬೇಕು?” ಎಂದು ಪ್ರಶ್ನಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಕಿರು ಸೇವಾ ಆಯೋಗದ ಅಧಿಕಾರಿಗಳಿಗೆ (ಎಸ್ಎಸ್ಸಿಒ) ಶಾಶ್ವತ ಆಯೋಗಗಳನ್ನು ನೀಡುವಲ್ಲಿ ಕೆಲವು ಕ್ರಿಯಾತ್ಮಕ ಮತ್ತು ಕಾರ್ಯಾಚರಣೆಯ ತೊಂದರೆಗಳಿವೆ ಎಂದು ಸಲ್ಲಿಸಿದ್ದ ಹೇಳಿಕೆಗಳನ್ನು ಗಮನಿಸಿ ಈ ರೀತಿ ಹೇಳಿದೆ. ಮಹಿಳೆಯರನ್ನು ಹೊರಗಿಡಲು ಸಾಧ್ಯವಿಲ್ಲ ಎಂದು ಘೋಷಿಸಿದ ಸುಪ್ರೀಂ ಕೋರ್ಟ್, ಭಾರತೀಯ ಕೋಸ್ಟ್ ಗಾರ್ಡ್ನಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರಕ್ಕೆ ಸೋಮವಾರ ಸೂಚಿಸಿದೆ. ಅಲ್ಲದೆ ಈ ಕೆಲಸವನ್ನು ಕೇಂದ್ರ ಸರ್ಕಾರ ಮಾಡದಿದ್ದರೆ ನ್ಯಾಯಾಲಯವು ಅದನ್ನು ಮಾಡುತ್ತದೆ ಎಂದು ಹೇಳಿದೆ.
ಅಗ್ನಿಪಥ್ ಯೋಜನೆ : ರಾಷ್ಟçಪತಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ, ಫೆ. ೨೬: ಅಗ್ನಿಪಥ್ ಯೋಜನೆಯಿಂದಾಗಿ ಸಶಸ್ತç ಪಡೆಗಳಲ್ಲಿ ನಿಯಮಿತ ಉದ್ಯೋಗವನ್ನು ಬಯಸುತ್ತಿರುವ ದೇಶದ ಯುವಕರಿಗೆ 'ಘೋರ ಅನ್ಯಾಯ' ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸೋಮವಾರ ರಾಷ್ಟçಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, ಯುವಕರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ. ಸಶಸ್ತç ಪಡೆಗಳಲ್ಲಿ ನಿಯಮಿತ ನೇಮಕಾತಿ ಪ್ರಕ್ರಿಯೆ ಅಂತ್ಯಗೊAಡಿರುವುದರಿAದ ಸುಮಾರು ೨ ಲಕ್ಷ ಯುವಕ-ಯುವತಿಯರ ಭವಿಷ್ಯ ಅತಂತ್ರವಾಗಿದೆ ಎಂದು ಖರ್ಗೆ ರಾಷ್ಟçಪತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ರಾಷ್ಟçಪತಿ ದ್ರೌಪದಿ ಮುರ್ಮು ಅವರು ಭಾರತೀಯ ಸಶಸ್ತç ಪಡೆಗಳ ಸರ್ವೋಚ್ಚ ಕಮಾಂಡರ್ ಕೂಡ ಆಗಿದ್ದಾರೆ. ಈ ಯುವಕರು ತಮ್ಮ ಕನಸುಗಳ ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿ ವರ್ಷಗಳ ಕಾಲ ಕಳೆದಿದ್ದಾರೆ. ನಮ್ಮ ಯುವಕರು ಈ ರೀತಿ ತೊಂದರೆ ಅನುಭವಿಸಲು ಬಿಡಬಾರದು. ಅವರಿಗೆ ಸೂಕ್ತ ನ್ಯಾಯ ಲಭ್ಯವಾಗುವಂತೆ ನೋಡಿಕೊಳ್ಳಲು ನಾನು ನಿಮಗೆ ಮನವಿ ಮಾಡುತ್ತೇನೆ' ಎಂದು ಅವರು ಹೇಳಿದ್ದಾರೆ. ಜೂನ್ ೧೪, ೨೦೨೨ ರಂದು ಘೋಷಿಸಲಾದ ಅಗ್ನಿಪಥ್ ಯೋಜನೆಯು ಹದಿನೇಳುವರೆಯಿಂದ ೨೧ ವರ್ಷ ವಯಸ್ಸಿನ ಯುವಕರನ್ನು ಕೇವಲ ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಅವರಲ್ಲಿ ಶೇ ೨೫ ರಷ್ಟನ್ನು ಇನ್ನೂ ೧೫ ವರ್ಷಗಳವರೆಗೆ ಉಳಿಸಿಕೊಳ್ಳುವ ಅವಕಾಶವಿದೆ.
ದೇಶದ ೫೫೪ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಮೋದಿ ಶಂಕುಸ್ಥಾಪನೆ
ನವದೆಹಲಿ, ಫೆ. ೨೬: ರಾಜ್ಯದ ೧೫ ರೈಲ್ವೇ ನಿಲ್ದಾಣ ಒಳಗೊಂಡAತೆ ಅಮೃತ ಭಾರತ ಯೋಜನೆಯಡಿ ದೇಶದ ೫೫೪ ರೈಲು ನಿಲ್ದಾಣಗಳ ಪುನಾರಾಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ವರ್ಚುವಲ್ ಮೂಲಕ ಪ್ರಧಾನಿ ಮೋದಿಯವರು ರೈಲು ನಿಲ್ದಾಣಗಳ ಪುನಾರಾಭಿವೃದ್ಧಿಗೆ ಕಾರ್ಯಕ್ಕೆ ಚಾಲನೆ ನೀಡಿದರು. ದೇಶದ ೫೫೪ ರೈಲ್ವೆ ನಿಲ್ದಾಣಗಳ ನವೀಕರಣ, ಅಭಿವೃದ್ಧಿ ಕಾಮಗಾರಿ ಹಾಗೂ ೧೫೦೦ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂದು ರೈಲ್ವೇಗೆ ಸಂಬAಧಿಸಿದ ೨೦೦೦ಕ್ಕೂ ಹೆಚ್ಚು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ಈ ಸರ್ಕಾರದ ಮೂರನೇ ಅವಧಿಯು ಜೂನ್ನಿಂದ ಪ್ರಾರಂಭವಾಗಲಿದೆ ಆದರೆ ಕಾಮಗಾರಿ ಪ್ರಾರಂಭವಾದ ಪ್ರಮಾಣ ಮತ್ತು ವೇಗವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಇಂದಿನ ಕಾರ್ಯಕ್ರಮ ನವಭಾರತದ ಹೊಸ ಸಂಸ್ಕೃತಿಯ ಸಂಕೇತವಾಗಿದೆ. ಭಾರತ ಇಂದು ಏನೇ ಮಾಡಿದರೂ ಅದು ಅಭೂತಪೂರ್ವ ವೇಗದಲ್ಲಿ ಮಾಡುತ್ತದೆ. ಸಣ್ಣಪುಟ್ಟ ಕನಸ್ಸುಗಳನ್ನು ನಿಲ್ಲಿಸಿ, ದೊಡ್ಡ ಕನಸ್ಸುಗಳನ್ನು ಕಾಣುತ್ತಿದ್ದೇವೆ. ಆ ಕನಸನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ. ಇದು ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯವಾಗಿದೆ ಎಂದು ಹೇಳಿದರು.
ಆಂಧ್ರಪ್ರದೇಶ: ನಿಂತಿದ್ದ ಟ್ರಕ್ಗೆ ಬಸ್ ಡಿಕ್ಕಿ, ನಾಲ್ವರು ಸಾವು
ಕಾಕಿನಾಡ, ಫೆ. ೨೬: ಟೈರ್ ಪಂಕ್ಚರ್ ಆಗಿ ನಿಂತಿದ್ದ ಟ್ರಕ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಆಂಧ್ರದ ಕಾಕಿನಾಡ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಜಿಲ್ಲೆಯ ಪ್ರಟ್ಟಿಪಾಡು ಮಂಡಲದ ಪಡಲೆಮ್ಮ ದೇವಸ್ಥಾನದ ಬಳಿಯ ರಾಷ್ಟಿçÃಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಣ್ಣಾವರಂನಿAದ ರಾಜಮಹೇಂದ್ರವರAಗೆ ತೆರಳುತ್ತಿದ್ದ ಟ್ರಕ್ ಟೈರ್ ಪಂಕ್ಚರ್ ಆಗಿದ್ದು, ರಿಪೇರಿಗಾಗಿ ರಸ್ತೆಬದಿಯಲ್ಲಿ ನಿಲ್ಲಿಸಲು ಮುಂದಾದಾಗ ವೈಶಾಖದಿಂದ ರಾಜಮಹೇಂದ್ರವರAಗೆ ತೆರಳುತ್ತಿದ್ದ ಬಸ್ಸು, ಟ್ರಕ್ ನೋಡಿಕೊಳ್ಳುತ್ತಿದ್ದ ಮೂವರು ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ. ಅಲ್ಲದೇ, ಅದೇ ಮಾರ್ಗದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಬ್ಬ ವ್ಯಕಿಗೂ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಸಿಲುಕಿದ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.