ಮಡಿಕೇರಿ, ಫೆ. ೨೫ : ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ವತಿಯಿಂದ ಆಯೋಜಿಸಲಾದ ವಿಪ್ರ ಕ್ರೀಡಾಕೂಟದ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ ಹಾಗೂ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಗರದ ಲಕ್ಷಿö್ಮ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ಸಮುದಾಯದ ರವಿಶಂಕರ್ ಬಿ.ಪಿ, ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಸಹನಾ ದಿನೇಶ್ ಹಾಗೂ ರಕ್ಷಾ ಎನ್. ಕೆ, ಸಮಾಜ ಸೇವೆಗೆ ಮುರಳೀಧರ್ ಹೆಚ್.ಆರ್, ಧಾರ್ಮಿಕ ಕ್ಷೇತ್ರದಲ್ಲಿ ವೆಂಕಟರಮಣ ಭಟ್ ಹಾಗೂ ಶಾಸ್ತ್ರೀಯ ನೃತ್ಯದಲ್ಲಿನ ಸಾಧನೆಗೆ ಪ್ರೇಕ್ಷ ಭಟ್ ಅವರುಗಳು ಸನ್ಮಾನಕ್ಕೆ ಭಾಜನರಾದರು. ಇದಲ್ಲದೆ ಎನ್.ಸಿ.ಸಿ ಪರವಾಗಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭ ನಡೆದ ಪಥಸಂಚಲನದಲ್ಲಿ ಭಾಗವಹಿಸಿದ್ದ ರಘುವಂಶಿ ಸಿ.ಎಸ್ ಹಾಗೂ ಆಯುಷ್ ಎಂ.ಡಿ ಅವರುಗಳನ್ನು ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ

ಕಳೆದ ವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಾದ ಸಾಕ್ಷಿ, ಪ್ರಣಮ್ಯ ಕಿರಣ್, ಶ್ರೀ ಲಕ್ಷಿö್ಮ, ಆಂಚಲ್ ಜೋಶಿ, ನಿರೂಪಮ ಹಾಗೂ ಪದವಿ ಶಿಕ್ಷಣದಲ್ಲಿ ಹೆಚ್ಚು ಅಂಕ ಗಳಿಸಿದ ಅಪೂರ್ವ, ಸುಪ್ರಿಯಾ ಹಾಗೂ ಸುಪ್ರಭಾ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕ್ರೀಡಾಕೂಟದಲ್ಲಿನ ವಿಜೇತರಿಗೆ ಬಹುಮಾನ

ವಿಪ್ರ ಕ್ರೀಡಾಕೂಟದ ಅಂಗವಾಗಿ ಹಲವು ದಿನಗಳಿಂದ ಸಮುದಾಯದ ಬಾಂಧವರಿಗೆ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕ್ರಿಕೆಟ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಒಳಾಂಗಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಜಿಲ್ಲಾ ಮಟ್ಟದ ಮಹಿಳೆಯರ ಬ್ಯಾಡ್ಮಿಂಟನ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ ಈಶ್ವರಿ ಉದಯಶಂಕರ್ ಪ್ರಥಮ ಹಾಗೂ ಸೌಮ್ಯ ಸಂತೋಷ್ ಭಟ್ ದ್ವಿತೀಯ ಬಹುಮಾನದ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರು. ಮಕ್ಕಳ ವಿಭಾಗದಲ್ಲಿ ಅವನೀಶ್ ಕೃಷ್ಣ ಪ್ರಥಮ ಹಾಗೂ ಶಿಶಿರ್ ದ್ವಿತೀಯ ಸ್ಥಾನ ಗಳಿಸಿ ಟ್ರೋಫಿ ಪಡೆದುಕೊಂಡರು. ಬಾಲಕಿಯರ ವಿಭಾಗದಲ್ಲಿ

ಸುಮೇಧ ಪ್ರಥಮ ಹಾಗೂ ಅನುಕ್ತ ದ್ವಿತೀಯ ಸ್ಥಾನ ಗಳಿಸಿದ್ದು ಟ್ರೋಫಿ ತಮ್ಮದಾಗಿಸಿಕೊಂಡರು. ಪುರುಷರ ವಿಭಾಗದಲ್ಲಿ ಶ್ರೀನಿವಾಸ್ ಕುಶಾಲನಗರ ಪ್ರಥಮ ಹಾಗೂ ಶಶಿಕಾಂತ್ ದ್ವಿತೀಯ ಬಹುಮಾನ ಪಡೆದುಕೊಂಡರು. ಪುರುಷರ ಡಬಲ್ಸ್ ನಲ್ಲಿ ಅಚಲ್ ಮಯ್ಯ ಹಾಗೂ ಪ್ರಶಾಂತ್ ಮಯ್ಯ ಜೋಡಿ ಪ್ರಥಮ, ಡಾ.ರಾಘವನ್ ಹಾಗೂ ಎ. ವಿ ಮಂಜುನಾಥ್ ಜೋಡಿ ದ್ವಿತೀಯ ಸ್ಥಾನ ಗಳಿಸಿತು. ಲೇಡೀಸ್ ಡಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಸುಮನಾ ಶ್ರೀ ಹರಿ - ಸೌಮ್ಯ ಸಂತೋಷ್ ಭಟ್ ಜೋಡಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಸುಧಾ ಶಂಕರ್ ಪ್ರಸಾದ್ - ಈಶ್ವರಿ ಉದಯಶಂಕರ್ ಜೋಡಿ ಬಹುಮಾನ ಪಡೆದುಕೊಂಡರು. ಟೇಬಲ್ ಟೆನ್ನಿಸ್ ನಲ್ಲಿ ವಿಜೇತರಾದ ಹರಿಶಂಕರ್ ಹಾಗೂ ಸುಬ್ರಮಣ್ಯ ಕೆ. ಪಿ ಅವರುಗಳು ಪ್ರಥಮ, ದ್ವಿತೀಯ ಬಹುಮಾನಗಳನ್ನು ಪಡೆದುಕೊಂಡರು. ಜಿಲ್ಲಾ ಮಟ್ಟದ ಪುರುಷರ ಕ್ಯಾರಮ್ ನಲ್ಲಿ ಸಂತೋಷ್ ಕಾಲೂರು ಪ್ರಥಮ, ಶ್ಯಾಮ್ ಸುಂದರ್ ದ್ವಿತೀಯ ಬಹುಮಾನ ಗಳಿಸಿದರು.

ಚೆಸ್ ನಲ್ಲಿ ವಿಷ್ಣು ಶಾಸ್ತಿç ಪ್ರಥಮ, ಕಾವ್ಯಶ್ರೀ ದ್ವಿತೀಯ ಸ್ಥಾನ ಗಳಿಸಿದರು. ಮಹಿಳೆಯರಿಗೆ ಆಯೋಜಿಸಲಾದ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಶೈಲಜ ಪ್ರಥಮ ಹಾಗೂ ಚಂದ್ರಾವತಿ ಶ್ರೀನಿವಾಸ್ ದ್ವಿತೀಯ ಸ್ಥಾನ ಗಳಿಸಿದರು. ಪುರುಷರಿಗೆ ಆಯೋಜಿಸಲಾದ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಜಗದೀಶ್ ಬಿ. ಕೆ ಪ್ರಥಮ ಹಾಗೂ ಸುದೀಪ್ ದ್ವಿತೀಯ ಸ್ಥಾನ ಗಳಿಸಿದರು. ಮಹಿಳೆಯರಿಗೆ ಆಯೋಜನೆಗೊಂಡಿದ್ದ ಸಂಗೀತ ಕುರ್ಚಿ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಪ್ರಥಮ, ದೀಪಿಕಾ ದ್ವಿತೀಯ ಬಹುಮಾನ ಗಳಿಸಿದರು. ಮಕ್ಕಳ ವಿಭಾಗದ ಸಂಗೀತಾ ಕುರ್ಚಿ ಸ್ಪರ್ಧೆಯಲ್ಲಿ ಸಮನ್ಯು ಪ್ರಥಮ ಹಾಗೂ ಅನನ್ಯ ದ್ವಿತೀಯ ಸ್ಥಾನ ಗಳಿಸಿದರು. ಹೂ ಜೋಡಣೆ ಸ್ಪರ್ಧೆಯಲ್ಲಿ ದೀಪಿಕಾ ಪ್ರಥಮ ಹಾಗೂ ಸವಿತ ಭಟ್ ದ್ವಿತೀಯ ಸ್ಥಾನ ಗಳಿಸಿದರು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಶ್ರೀದೇವಿ ತಂಡ ಪೊನ್ನಂಪೇಟೆ ಹಾಗೂ ದ್ವಿತೀಯ ಸ್ಥಾನಗಳಿಸಿದ ಮಡಿಕೇರಿ ವಿಪ್ರಾಸ್ ತಂಡದವರು ಟ್ರೋಫಿ ಹಾಗೂ ಪದಕಗಳನ್ನು ತಮ್ಮದಾಗಿಸಿಕೊಂಡರು. ಪುರುಷರ ಹಗ್ಗಜಗ್ಗಾಟದಲ್ಲಿ ವಿಜೇತರಾದ ಈಗಲ್ಸ್ ವೀರಾಜಪೇಟೆ ತಂಡ ಹಾಗೂ ೨ನೆ ಸ್ಥಾನ ಗಳಿಸಿದ ಅಡ್ವೋಕೇಟ್ ಬ್ರಹ್ಮಾಸ್ ತಂಡಕ್ಕೆ ಟ್ರೋಫಿ ಹಾಗೂ ಪದಕಗಳನ್ನು ನೀಡಲಾಯಿತು. ನಿಧಿಯ ನಿರ್ದೇಶಕ ಸಂಪತ್ ಕುಮಾರ್ ಅವರು ಹಗ್ಗಜಗ್ಗಾಟ ಟ್ರೋಫಿ ಪ್ರಾಯೋಜಿಸಿದ್ದರು. ಕ್ರಿಕೆಟ್‌ನಲ್ಲಿ ಜಯಗಳಿಸಿದ ಕರಡ ಬುಲ್ಸ್ ತಂಡಕ್ಕೆ ಹಾಗೂ ೨ನೆ ಸ್ಥಾನ ಗಳಿಸಿದ ಮಡಿಕೇರಿ ವಿಪ್ರಾಸ್ ತಂಡಕ್ಕೆ ದಿ.ರಾಮಚಂದ್ರ ರಾವ್ ಸ್ಮರಣಾರ್ಥ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್. ಕೆ ಬಾಲಚಂದ್ರ ಅವರು, ಮುಂದಿನ ತಲೆಮಾರನ್ನು ಯೋಗ್ಯ, ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸುವ ದೊಡ್ಡ ಹೊಣೆಗಾರಿಕೆ ಸಮಾಜದ ಸದಸ್ಯರಿಗೆ ಇದೆ. ಜನಾಂಗದ ಮಕ್ಕಳು ಉನ್ನತ ವಿದ್ಯಾಭ್ಯಾಸವನ್ನು ಹೊಂದಿ ಸರ್ಕಾರಿ ಕೆಲಸವನ್ನು ನಿರೀಕ್ಷಿಸದೆ ಸ್ವ ಉದ್ಯೋಗದತ್ತ ಗಮನ ಹರಿಸಬೇಕು ಎಂದರು. ರಾಮಾಯಣ, ಮಹಾಭಾರತ, ಭಗವದ್ಗೀತೆ- ಇವುಗಳ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿದರೆ ಮಕ್ಕಳು ಬದುಕಿನಲ್ಲಿ ಸೋಲುವುದಿಲ್ಲ. ಉತ್ತಮ ಜೀವನವನ್ನು ರೂಪಿಸುವುದರೊಂದಿಗೆ ಸಂಸ್ಕಾರಯುತ ಬದುಕನ್ನು ಸಾಗಿಸುತ್ತಾರೆ ಎಂದರು.

ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷೆ ಗೀತಾ ಗಿರೀಶ್ ಪ್ರಾಸ್ತಾವಿಕ ಮಾತುಗಳನ್ನಾಡಿ ಫೆಬ್ರವರಿ ತಿಂಗಳಲ್ಲಿ ಮೂರು ಭಾನುವಾರಗಳಂದು ಬ್ರಾಹ್ಮಣ ಸಮಾಜದವರಿಗೆ ಕ್ರೀಡಾಕೂಟಗಳನ್ನು ಆಯೋಜಿಸಿದ್ದು ಇಂದು ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆ ಸಹಕಾರಿಯಾಗಿದೆ. ಸುಖ-ದುಃಖ, ಸೋಲು- ಗೆಲುವು ಜೀವನದಲ್ಲಿ ಇದ್ದು ಅವುಗಳನ್ನು ಮೀರಿ ಬದುಕು ರೂಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕಾರ್ಯದರ್ಶಿ ಬಿ.ಕೆ ಜಗದೀಶ್, ಖಜಾಂಚಿ ಜಿ.ಆರ್ ರವಿಶಂಕರ್, ನಿರ್ದೇಶಕರಾದ ಸವಿತಾ ಭಟ್, ಪ್ರಭಾಕರ ನೆಲ್ಲಿತ್ತಾಯ, ಎ.ವಿ ಮಂಜುನಾಥ, ಜಯಶೀಲಾ ಪ್ರಕಾಶ್, ಸಂಪತ್ ಕುಮಾರ್, ವೀಣಾ ಹೊಳ್ಳ, ರಾಜಶೇಖರ್, ಭರತೇಶ್ ಖಂಡಿಗೆ, ಹಿರಿಯರಾದ ಜಿ.ಟಿ ರಾಘವೇಂದ್ರ ಹಾಗೂ ಇತರರು ಇದ್ದರು.