ಮಡಿಕೇರಿ, ಫೆ. ೨೫: ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಲೇಖಕರ, ಕಲಾವಿದರ ಬಳಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲಾ ಶಿಕ್ಷಕರಿಗೆ ಭಾಷಣ ಸ್ಪರ್ಧೆ ಹಾಗೂ ೨೦೨೨-೨೩ನೇ ಸಾಲಿನಲ್ಲಿ ೧೦ನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಟಿ.ಪಿ. ರಮೇಶ್ ದತ್ತಿ ಪ್ರಶಸ್ತಿ ಸಮಾರಂಭ ನಡೆಯಿತು.

ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಸಾಹಿತಿ, ಪತ್ರಕರ್ತ ಡಾ. ಜೆ. ಸೋಮಣ್ಣ, ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆ ಹೆಚ್ಚಾಗುತ್ತಿದೆ. ಸಾಹಿತಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ. ಮಹಿಳಾ ಬರಹಗಾರರು ಮುಂದೆ ಬಂದು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಆರ್ಥಿಕ ಸಂಕಷ್ಟದ ನಡುವೆ ಜಿಲ್ಲೆಯಲ್ಲಿ ಆರಂಭವಾದ ಕ.ಸಾ.ಪ. ಇಂದು ನಿರಂತರ ಚಟುವಟಿಕೆ ಮೂಲಕ ಸಾಹಿತ್ಯಾಸಕ್ತರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಾಥಮಿಕ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ ಭಾರತೀಸುತ ಕೂಡ ಪ್ರಾಥಮಿಕ ಶಿಕ್ಷಕರಾಗಿದ್ದರು ಎಂದು ಸ್ಮರಿಸಿದರು.

ಅವಕಾಶ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನಾವು ಹುಡುಕಿಕೊಂಡು ಹೋಗಬೇಕು ಕಲೆ ಹಾಗೂ ಸಾಹಿತ್ಯ ಒಂದೇ ನಾಣ್ಯದ ೨ ಮುಖಗಳಿದ್ದಂತೆ. ಇವೆರಡನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಹೆಚ್ಚಿನ ಅಧ್ಯಯನ, ಓದಿನಿಂದ ಗಟ್ಟಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ನೆಲೆಯೂರಬಹುದಾಗಿದೆ. ಕ.ಸಾ.ಪ. ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದರು.

ದತ್ತಿ ದಾನಿ ಟಿ.ಪಿ. ರಮೇಶ್ ಮಾತನಾಡಿ, ಕನ್ನಡ ಮಾಧ್ಯಮದಲ್ಲಿಯೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಇಂಗ್ಲೀಷ್‌ನಿAದ ಮಾತ್ರ ಸಾಧನೆ ಸಾಧ್ಯ ಎಂಬ ಸುಳ್ಳನ್ನು ಸೃಷ್ಟಿ ಮಾಡಲಾಗುತ್ತಿದೆ. ಪರಿಣಾಮ ಕನ್ನಡ ಶಾಲೆಯಲ್ಲಿಯೂ ಇಂಗ್ಲೀಷ್ ಕಲಿಕೆ ಆರಂಭವಾಗಿದೆ. ಅಧ್ಯಯನಶೀಲರಾಗುವುದರಿಂದ ಉತ್ತಮ ಸತ್ಪçಜೆಯಾಗಿ ರೂಪುಗೊಳ್ಳಬಹುದು. ನಾವು ಬೆಳೆಯುವುದರೊಂದಿಗೆ ನಮ್ಮವರನ್ನು ಬೆಳೆಸುವ ಕೆಲಸವಾಗಬೇಕು. ಕಾರ್ಯಾಗಾರದ ಮೂಲಕ ಸಾಹಿತಿಗಳಿಗೆ ಮಾರ್ಗದರ್ಶನ ನೀಡುವ ಚಿಂತನೆಗಳಿವೆ. ಸಾಹಿತಿಗಳ ಅಗಾಧ ಸೇವೆಯಿಂದ ಇಂದು ಉದಯೋನ್ಮುಖ ಸಾಹಿತಿಗಳು ಹುಟ್ಟಿಕೊಂಡು ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ನಿರಂತರ ಕಾರ್ಯಕ್ರಮದ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡಲಾಗುವುದು ಎಂದರು.

ಶಿಕ್ಷಕರ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಪುಸ್ತಕಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ಭಾಷೆಗೊಂದು ಶಕ್ತಿ ಇದೆ. ಕೇವಲ ಸಂವಹನಕ್ಕೆ ಮಾತ್ರ ಸೀಮಿತವಲ್ಲ. ನಮ್ಮೊಳಗಿನ ತಳಮಳ, ಅಭಿಪ್ರಾಯವನ್ನು ಪರಿಣಾಮಕಾರಿ ಯಾಗಿ ಸಾಹಿತ್ಯದ ಮೂಲಕ ಮುಟ್ಟಿಸಬಹುದಾಗಿದೆ. ಕಲೆ ಹಾಗೂ ಸಾಹಿತ್ಯಕ್ಕೆ ಒಂದಕ್ಕೊAದು ಸಂಬAಧ ಇದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಕಥೆಗಳು ದೊಡ್ಡ ಮಟ್ಟದ ಓದುಗರನ್ನು ಹೊಂದಿದೆ. ಒತ್ತಡದ ಬದುಕಿನಿಂದ ಓದುವ ವ್ಯವದಾನವನ್ನು ಜನ ಕಳೆದುಕೊಳ್ಳುತ್ತಿದ್ದಾರೆ. ಕಥೆಗಳು ಬದುಕಿನ ಮೇಲೆ ಪ್ರಭಾವ ಬೀರುವಷ್ಟು ಶಕ್ತಿ ಇದೆ. ಸಾಹಿತ್ಯ ಅಭಿವ್ಯಕ್ತಿ ಮಾಧ್ಯಮವಾಗಿದೆ. ಕೋಮುವಾದದ ಉಸಿರುಗಟ್ಟುವ ವಾತಾವರಣದಲ್ಲಿ ಎಲ್ಲರನ್ನೂ ಒಂದುಗೂಡಿಸುವ ಸಾಹಿತ್ಯ ಸೃಷ್ಟಿಯಾಗಬೇಕು. ಬರವಣಿಗೆಯಿಂದ ಸಮಾಜ ಕಟ್ಟುವ ಕೆಲಸವಾಗಬೇಕೆಂದು ಪ್ರತಿಪಾದಿಸಿದರು. ಐಗೂರು ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ೧೦ನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಸಿ.ಬಿ. ಬೇಸಿಲ್‌ಗೆ ಟಿ.ಪಿ. ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಿಕ್ಷಕರ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಬೆಸೂರು ಪ್ರಾಥಮಿಕ ಶಾಲೆಯ ಸ್ನೇಹ ಬಸಮ್ಮ, ದ್ವಿತೀಯ ಸ್ಥಾನ ನಡಿಕೇರಿ ಶಾಲೆಯ ಸೌಮ್ಯ, ತೃತೀಯ ಬಹುಮಾನವನ್ನು ಚೆರಿಯಪರಂಬು ಶಾಲೆಯ ಸುಕುಮಾರ್, ಸಮಾಧಾನಕರ ಬಹುಮಾನವನ್ನು ವೀರಾಜಪೇಟೆ ಶಾಲೆಯ ಎಂ.ಎ. ಮಂಜುನಾಥ್ ಪಡೆದುಕೊಂಡರು.

ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳಗದ ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್, ಸಹಕಾರ್ಯದರ್ಶಿ ಜಯಪ್ಪ ಹಾನಗಲ್ಲು, ಉಪಾಧ್ಯಕ್ಷರುಗಳಾದ ಎಂ.ಇ. ಮೊಹಿದ್ದೀನ್, ರೇವತಿ ರಮೇಶ್ ಹಾಜರಿದ್ದರು.