ಪೊನ್ನಂಪೇಟೆ, ಫೆ. ೨೫: ಪೊನ್ನಂಪೇಟೆ ತಾಲೂಕು ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೨೬ ರಿಂದ ಮಾ. ೫ರ ವರೆಗೆ ನಡೆಯಲಿದೆ ಎಂದು ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ತಾ. ೨೬ ರಂದು ಸಂಜೆ ೭ಗಂಟೆಗೆ ಕೊಡಿಮರ ನಿಲ್ಲಿಸುವ ಮೂಲಕ ಆರಂಭವಾಗಲಿದ್ದು, ಮಾ. ೪ರಂದು ನೆರ್ಪು ಹಾಗೂ ಮಾ. ೫ರಂದು ದೇವರ ಅವಭೃತ ಸ್ನಾನ (ದೇವ ಕುಳಿಪೊ) ನಡೆಯಲಿದೆ.
ಒಂಬತ್ತು ದಿನಗಳ ಕಾಲ ನಡೆಯುವ ವಾರ್ಷಿಕ ಉತ್ಸವದಲ್ಲಿ ಮಾ. ೨ ರಿಂದ ಪರಕೆ ಬೊಳಕ್ ಆರಂಭವಾಗಲಿದೆ. ಉತ್ಸವ ಮುಗಿಯುವವರೆಗೂ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ೯೯೦೧೨೬೨೩೯೮ ಸಂಪರ್ಕಿಸ ಬಹುದಾಗಿದೆ ಎಂದು ತಿಳಿಸಿದ್ದಾರೆ.