(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಫೆ. ೨೪: ಕೊಡಗಿನಲ್ಲಿ ಶತಮಾನೋತ್ಸವ ಕಂಡಿರುವ ಸಹಕಾರ ಕ್ಷೇತ್ರದಲ್ಲಿ ಪ್ರಮುಖವಾಗಿರುವ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿ.ಸಿ.ಸಿ. ಬ್ಯಾಂಕ್)ನ ಹಾಲಿ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದ್ದು, ಇದೀಗ ಚುನಾವಣಾ ಕಾವು ಆರಂಭಗೊAಡಿದೆ. ಹಾಲಿ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರ ನೇತೃತ್ವದ ಆಡಳಿತ ಮಂಡಳಿಯ ಅಧಿಕಾರಾವಧಿ ಏಪ್ರಿಲ್ ೪ಕ್ಕೆ ಮುಕ್ತಾಯಗೊಳ್ಳುತ್ತಿದೆ. ಇದೀಗ ಮುಂದಿನ ಐದು ವರ್ಷಗಳ ಅಧಿಕಾರಾವಧಿಗಾಗಿ ಚುನಾವಣೆ ಎದುರಾಗಿದೆ. ಇದೇ ಮಾರ್ಚ್ ೧೭ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಇದೀಗ ಚುನಾವಣಾ ಪ್ರಕ್ರಿಯೆ ಆರಂಭಗೊAಡಿದೆ. ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ನೂತನ ಕಟ್ಟಡ ಸೇರಿದಂತೆ ಕಳೆದ ಐದು ವರ್ಷಗಳಲ್ಲಿ ಕೊಡಗು ಡಿಸಿಸಿ ಬ್ಯಾಂಕ್ ಉತ್ತಮ ಸಾಧನೆ - ಅಭಿವೃದ್ಧಿಯೊಂದಿಗೆ ರಾಜ್ಯದಲ್ಲಿ ಕೂಡ ವಿಶೇಷವಾಗಿ ಗುರುತಿಸಲ್ಪಟ್ಟಿದ್ದು, ಈ ಬಾರಿಯ ಚುನಾವಣೆ ಮತ್ತಷ್ಟು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಈ ಹಿಂದಿನAತೆ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕಿನಿಂದ ತಲಾ ಮೂವರು ನಿರ್ದೇಶಕರಂತೆ ಒಟ್ಟು ೯ ನಿರ್ದೇಶಕರು, ಜಿಲ್ಲಾ ಮಟ್ಟಕ್ಕೆ ಸಂಬAಧಿಸಿದAತೆ ದವಸ ಭಂಡಾರಗಳ ಒಂದು ಕ್ಷೇತ್ರ, ಮಹಿಳಾ ಸಹಕಾರ ಸಂಘದ ಮೂಲಕ ಒಂದು ಮಹಿಳಾ ಸ್ಥಾನ, ಕೃಷಿಯೇತರ ಸಂಘಗಳ ಒಂದು ನಿರ್ದೇಶಕ ಸ್ಥಾನ ಹಾಗೂ ಇತರೆ ಸಹಕಾರ ಸಂಘಗಳ ಒಂದು ನಿರ್ದೇಶಕ ಸ್ಥಾನ ಸೇರಿದಂತೆ ಒಟ್ಟು ೧೩ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇದರೊಂದಿಗೆ ಅಪೆಕ್ಸ್ ಬ್ಯಾಂಕ್‌ನ ಓರ್ವ ಪ್ರತಿನಿಧಿ ಹಾಗೂ ಡಿಸ್ಟಿçಕ್ಟ್ ರಿಜಿಸ್ಟಾçರ್‌ನ ಒಂದು ಸ್ಥಾನ ಸೇರಿ ಒಟ್ಟು ೧೫ ಮಂದಿಯ ಆಡಳಿತ ಮಂಡಳಿ ರಚನೆಯಾಗ ಬೇಕಿದ್ದು, ೧೩ ನಿರ್ದೇಶಕ ಸ್ಥಾನದ ಚುನಾವಣೆ ಇದರಲ್ಲಿ ಮಹತ್ವದ್ದಾಗಿದೆ. ಪ್ರಮುಖ ಪಕ್ಷಗಳಲ್ಲೂ ಆಂತರಿಕವಾಗಿ ಚುನಾವಣೆಯ ಕಾವು ಏರುತ್ತಿದೆ.

ಈಗಾಗಲೇ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಪೈಪೋಟಿ ಆರಂಭಗೊAಡಿದ್ದು, ಕಳೆದ ಬಾರಿಗಿಂತಲೂ ಹೆಚ್ಚಿನ ಆಕಾಂಕ್ಷಿಗಳಿದ್ದಾರೆನ್ನ ಲಾಗಿದೆ. ಇದು ನೇರವಾಗಿ ರಾಜಕೀಯವಾಗಿ ಪಕ್ಷದ ಚಿಹ್ನೆಯಡಿಯಲ್ಲಿ ಜರುಗುವ ಚುನಾವಣೆ ಅಲ್ಲವಾದರೂ, ಇದರಲ್ಲಿ ರಾಜಕೀಯ ಪ್ರತಿಷ್ಠೆಯೂ ಅಡಗಿದೆ. ಹಾಲಿ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ ಬಾಂಡ್ ಗಣಪತಿ ಸೇರಿದಂತೆ ಬಹುತೇಕರು ಬಿಜೆಪಿ ಬೆಂಬಲಿತರಾಗಿದ್ದಾರೆ.

(ಮೊದಲ ಪುಟದಿಂದ) ಆದರೆ, ಈ ಬಾರಿ ಜಿಲ್ಲೆಯಲ್ಲಿ ಇಬ್ಬರು ಶಾಸಕರು ಕಾಂಗ್ರೆಸ್ ಪಕ್ಷದವರಾಗಿರುವುದರಿಂದ ಚುನಾವಣೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಸಾಧನೆ ಹಾಗೂ ಅಭಿವೃದ್ಧಿಯ ಆಧಾರದಲ್ಲಿ ಹಾಲಿ ಅಧ್ಯಕ್ಷ ಬಾಂಡ್ ಗಣಪತಿ ಸೇರಿದಂತೆ ಇತರ ನಿರ್ದೇಶಕರೂ ಮತ್ತೊಂದು ಅವಧಿಗೆ ಪ್ರಯತ್ನದಲ್ಲಿದ್ದಾರೆ. ಇವರೊಂದಿಗೆ ಇನ್ನಿತರ ಅನೇಕ ಮಂದಿ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದು, ಅಂತಿಮವಾಗಿ ಆಯಾ ಪಕ್ಷದವರು ತಮ್ಮ ಬೆಂಬಲಿತ ಅಭ್ಯಥಿಗಳನ್ನಾಗಿ ಯಾರನ್ನು ಅಂತಿಮಗೊಳಿಸಲಿದ್ದಾರೆ ಎಂಬುದು ಇದೀಗ ಹೆಚ್ಚಿನ ಕುತೂಹಲಕ್ಕೆ ಎಡೆಯಾಗಿದೆ.

ಮೂರು ತಾಲೂಕುಗಳಾದ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆಯ ತಲಾ ೩ ನಿರ್ದೇಶಕರ ಸ್ಥಾನಕ್ಕೆ ಆಯಾ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಡೆಲಿಗೇಟರ್ ಆಗಿ ನಿಯುಕ್ತಿಗೊಳ್ಳುವವರು ಮತದಾರರಾಗಿರುತ್ತಾರೆ. ಅಲ್ಲದೆ, ಈ ಡೆಲಿಗೇಟರ್‌ಗಳಲ್ಲೇ ಒಬ್ಬರು ಚುನಾವಣೆಗೂ ಅಭ್ಯರ್ಥಿಯಾಗಲಿದ್ದು, ಇದು ಹೆಚ್ಚಿನ ಸ್ಪರ್ಧೆಗೆ ಕಾರಣವಾಗಲಿದೆ.

ಮಡಿಕೇರಿ ತಾಲೂಕಿನಲ್ಲಿ ೨೨, ಸೋಮವಾರಪೇಟೆಯಿಂದ ೨೨ ಹಾಗೂ ವೀರಾಜಪೇಟೆಯಿಂದ ೨೯ ಸಂಘಗಳ ಪ್ರತಿನಿಧಿಗಳು ಆಯಾ ತಾಲೂಕಿನ ಮತದಾರರಾಗಿರುತ್ತಾರೆ. ಇದರಲ್ಲಿ ವೀರಾಜಪೇಟೆ ತಾಲೂಕಿನ ಹುದಿಕೇರಿ ಸಂಘದ ಚುನಾವಣೆ ಇನ್ನೂ ನಡೆಯದಿರುವುದರಿಂದ ಇದು ಅತಂತ್ರತೆಯಲ್ಲಿದೆ. ಇನ್ನಿತರ ನಾಲ್ಕು ನಿರ್ದೇಶಕ ಸ್ಥಾನಕ್ಕೆ ಆಯಾ ಸಂಘಗಳ ಮತದಾರರ ವಿವರ ಅಂತಿಮಗೊಳಿಸುವ ಪ್ರಕ್ರಿಯೆ ಇದೀಗ ಚುನಾವಣಾಧಿಕಾರಿಗಳ ಮೂಲಕ ನಡೆಯುತ್ತಿದೆ.

ಈಗಾಗಲೇ ಚುನಾವಣೆಗೆ ಮಾರ್ಚ್ ೧೭ರ ದಿನಾಂಕ ನಿಗದಿಯಾಗಿದ್ದು, ಇನ್ನಿತರ ಅಗತ್ಯ ಪ್ರಕ್ರಿಯೆಗಳು ಇದೀಗ ಆರಂಭಗೊAಡಿವೆ. ಹಾಲಿ ಆಡಳಿತ ಮಂಡಳಿಯಲ್ಲಿ ವೀರಾಜಪೇಟೆ ತಾಲೂಕಿನಿಂದ, ಈಗಿನ ಅಧ್ಯಕ್ಷ ಬಾಂಡ್ ಗಣಪತಿ, ಹೊಟ್ಟೇಂಗಡ ರಮೇಶ್, ಪಟ್ರಪಂಡ ರಘು ನಾಣಯ್ಯ, ಮಡಿಕೇರಿ ತಾಲೂಕಿನಿಂದ ಹಾಲಿ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಹೊಸೂರು ಸತೀಶ್ ಕುಮಾರ್ ಹಾಗೂ ಕಿಮ್ಮುಡಿರ ಜಗದೀಶ್, ಸೋಮವಾರಪೇಟೆಯಿಂದ ಬಿ.ಡಿ. ಮಂಜುನಾಥ್, ಎಸ್.ಬಿ. ಭರತ್ ಕುಮಾರ್ ಹಾಗೂ ಬಿ.ಕೆ. ಚಿಣ್ಣಪ್ಪ, ಮಹಿಳಾ ಕ್ಷೇತ್ರದಿಂದ ಜಲಜಾ ಶೇಖರ್, ಕೃಷಿಯೇತರ ಸಂಘದ ಸ್ಥಾನದಿಂದ ಕನ್ನಂಡ ಸಂಪತ್, ಇತರೆ ಕ್ಷೇತ್ರದ ಮೂಲಕ ಎ.ಕೆ. ಮನುಮುತ್ತಪ್ಪ ಹಾಗೂ ದವಸ ಭಂಡಾರದ ಸ್ಥಾನದಿಂದ ಕೋಲತಂಡ ಸುಬ್ರಮಣಿ ಅವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ.