ಗೋಣಿಕೊಪ್ಪಲು, ಫೆ. ೨೪ : ಅಪಘಾತ ಸಂಭವಿಸಿದ ವೇಳೆ ಬಹುತೇಕ ಮಂದಿ ಸ್ಥಳದಲ್ಲಿದ್ದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಹಿಂದೇಟು ಹಾಕುವುದು ಸಹಜ.

ಆದರೆ ಗೋಣಿಕೊಪ್ಪಲುವಿನ ಸಮಾಜ ಸೇವಕಿ ಕೊಟ್ಟಂಗಡ ವಿಜು ದೇವಯ್ಯ ತನ್ನ ಕಣ್ಣ ಮುಂದೆ ಕಂಡು ಬಂದ ಅಪಘಾತ ಪ್ರಕರಣದಲ್ಲಿ ಕಾಲು ಮುರಿದುಕೊಂಡು ನರಳುತ್ತಿದ್ದ ಸ್ಕೂಟರ್ ಸವಾರರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸುವ ಮೂಲಕ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

ನಗರದ ಪೊಲೀಸ್ ಠಾಣೆ ರಸ್ತೆಯಲ್ಲಿ ಬೆಳಿಗ್ಗೆ ಸ್ಕೂಟರ್‌ಗೆ ಜೀಪು ಡಿಕ್ಕಿಯಾಗಿದೆ. ಈ ವೇಳೆ ಸ್ಕೂಟರ್ ಮಗುಚಿಕೊಂಡಿದೆ. ಅಪಘಾತದಲ್ಲಿ ಸವಾರನ ಬಲಗಾಲು ಮುರಿತಕ್ಕೊಳಗಾಗಿ ನರಳುತ್ತಿದ್ದ.

ಈ ರಸ್ತೆ ಮಾರ್ಗವಾಗಿ ತನ್ನ ಪಿಕ್‌ಅಪ್ ಜೀಪಿನಲ್ಲಿ ಕೊಟ್ಟಂಗಡ ವಿಜು ದೇವಯ್ಯ ಕಾನೂರಿನ ಕಾಫಿ ತೋಟಕ್ಕೆ ತೆರಳುತ್ತಿದ್ದರು.