ಮಡಿಕೇರಿ, ಫೆ. ೨೪: ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ಜರುಗುತ್ತಿದ್ದು, ನಾಡಿನ ಭಕ್ತಾದಿಗಳು ಸೇರಿದಂತೆ ಇತರೆಡೆಗಳಿಂದಲೂ ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ತಾ.೧೯ರಂದು ಕೊಡಿಮರ ನಿಲ್ಲಿಸುವ ಮೂಲಕ ಈ ಬಾರಿಯ ಉತ್ಸವಕ್ಕೆ ಚಾಲನೆ ದೊರೆತಿದ್ದು, ತಾ. ೨೯ರಂದು ದೇವರ ಅವಭೃತ ಸ್ನಾನ ಜರುಗಲಿದೆ. ಇದೀಗ ಪ್ರತಿದಿನ ಬೆಳಿಗ್ಗೆ ಇರುಬೆಳಕು, ನಿತ್ಯ ಪೂಜೆ, ತುಲಾಭಾರದೊಂದಿಗೆ ಇತರ ಕೈಂಕರ್ಯಗಳು ಮುಂದುವರಿಯುತ್ತಿವೆ.