ಮಡಿಕೇರಿ, ಫೆ. ೨೪: ಸಿದ್ದಾಪುರ-ಅಮ್ಮತ್ತಿ ಹೋಬಳಿಯ ಅಮೃತ ಯುವ ಮೊಗೇರ ಸೇವಾ ಸಮಾಜದ ವತಿಯಿಂದ ಏರ್ಪಡಿಸಲಾಗಿರುವ ಪ್ರಿಮಿಯರ್ ಲೀಗ್ ಸೀಸನ್-೨ ಕ್ರಿಕೆಟ್ ಪಂದ್ಯಾವಳಿಯ ಪ್ರದರ್ಶನ ಪಂದ್ಯಾಟದಲ್ಲಿ ಕೊಡಗು ಪತ್ರಕರ್ತರ ಸಂಘ ಗೆಲುವು ಸಾಧಿಸಿದೆ.
ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ಅಮೃತ ಮೊಗೇರ ತಂಡ ನಾಲ್ಕು ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೩೪ ರನ್ ಕಲೆಹಾಕಿತು. ಪತ್ರಕರ್ತರ ತಂಡದ ಪರ ವಿವೇಕ್ ಎರಡು, ಅಶೋಕ್ ಹಾಗೂ ಖಲೀಲ್ ತಲಾ ಒಂದು ವಿಕೆಟ್ ಪಡೆದರು. ೩೪ ರನ್‌ಗಳ ಗುರಿ ಬೆನ್ನತ್ತಿದ ಪತ್ರಕರ್ತರ ತಂಡ ೩.೧ ಓವರ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡು ಖಲೀಲ್ ಹಾಗೂ ವಿನೋದ್ ಅವರ ಜೊತೆಯಾಟ ದೊಂದಿಗೆ ಗೆಲುವು ಸಾಧಿಸಿತು. ಖಲೀಲ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು. ಕುಡೆಕಲ್ ಸಂತೋಷ್ ನಾಯಕತ್ವದ ಪತ್ರಕರ್ತರ ತಂಡದಲ್ಲಿ ಉಪ ನಾಯಕ ವಿನೋದ್ ಮೂಡಗದ್ದೆ, ಖಲೀಲ್, ಅಶೋಕ್, ಜಿ.ವಿ. ರವಿಕುಮಾರ್, ದಿನೇಶ್, ವಿವೇಕ್ ಮೊಗೇರ, ಪಿ.ಎಂ.ರವಿ, ಸಿಯಾದ್, ಮರದಾಳು ಚೇತನ್, ಸಮರ್ಥ್ ಅವರುಗಳು ಪಾಲ್ಗೊಂಡಿದ್ದರು.