ಕುಶಾಲನಗರ, ಫೆ. ೨೪: ಸುಳ್ಳು ಜಾತಿ ಪತ್ರ ಪಡೆದು ಆದಿವಾಸಿ ಸಮುದಾಯದ ಸವಲತ್ತುಗಳನ್ನು ಪಡೆಯುವ ವ್ಯಕ್ತಿಗಳ ಮೇಲೆ ಸರಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆದಿವಾಸಿ ಸಮುದಾಯದ ಮುಖಂಡ ಆರ್.ಕೆ. ಚಂದ್ರು ಆಗ್ರಹಿಸಿದ್ದಾರೆ.
ಅವರು ಕುಶಾಲನಗರ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಇತ್ತೀಚಿನ ವರ್ಷಗಳಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದು ನೈಜ ಗಿರಿಜನರಿಗೆ ಅನ್ಯಾಯ ವಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ದೊರಕಬೇಕಾದ ಸವಲತ್ತುಗಳನ್ನು ನಿಯಮಬಾಹಿರವಾಗಿ ಪಡೆಯುತ್ತಿ ದ್ದಾರೆ ಎಂದು ಆರೋಪಿಸಿದ ಚಂದ್ರು, ಇದರಿಂದ ಜೇನು ಕುರುಬ ಜನಾಂಗದವರಿಗೆ ಯಾವುದೇ ಸವಲತ್ತು ಗಳು ಲಭಿಸುತ್ತಿಲ್ಲ. ತಕ್ಷಣ ಜಿಲ್ಲಾ ಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮೀಸಲಾತಿ ಅಡಿ ಯಲ್ಲಿ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿಗೆ ಆಯ್ಕೆ ಆಗಿದ್ದಾರೆ. ಇದನ್ನು ತಾವು ಖಂಡಿಸುವುದಾಗಿ ಅವರು ಹೇಳಿದರು. ಸರ್ಕಾರ ಸುಳ್ಳು ಜಾತಿ ಪತ್ರ ನೀಡುವವರ ಮೇಲೆ ಕ್ರಮ ಕೈಗೊಂಡು ಇದನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಸದಸ್ಯರಾದ ರಾಜಮಣಿ, ಸತೀಶ, ಸುನಿಲ್, ನವೀನ್ ಇದ್ದರು.