ವೀರಾಜಪೇಟೆ, ಫೆ. ೨೪: ವೀರಾಜಪೇಟೆಯ ಅಂಚೆ ಕಚೇರಿಯಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ ಚಿನ್ನಾಭರಣ ಮತ್ತು ಹಣವನ್ನು ಅಂಚೆ ಕಚೇರಿ ಸಿಬ್ಬಂದಿಗಳು ಆಕೆಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ವೀರಾಜಪೇಟೆ ಅಂಚೆ ಕಛೇರಿಯ ನೌಕರರಾದ ಗಣಪತಿ ಹಾಗೂ ನಾಗು ನಾಯಕ್ ಅವರು ಬೆಳಿಗ್ಗೆ ಕಚೇರಿಗೆ ಕರ್ತವ್ಯಕ್ಕೆ ಬಂದಾಗ ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ವ್ಯವಸ್ಥೆಗೊಳಿಸಿದ ಟೇಬಲ್ ಮೇಲೆ ಚಿನ್ನ, ನಗದುಗಳನ್ನೊಳಗೊಂಡ ಕೈ ಚೀಲ ಕಂಡುಬAದಿದೆ. ಕೂಡಲೇ ಪೋಸ್ಟ್ ಮಾಸ್ಟರ್ ಮಂಜುನಾಥ್ ಅವರ ಗಮನಕ್ಕೆ ತರಲಾಯಿತು. ಬಳಿಕ ವಿಚಾರ ಮಾಡಿದಾಗ ಅದು ಸುಂಕದಕಟ್ಟೆ ನಿವಾಸಿ ಅಶ್ವಿನಿ ಎಂಬುವವರಿಗೆ ಸೇರಿದ್ದು ಎಂದು ಪತ್ತೆ ಹಚ್ಚಿ ಖಾತ್ರಿಪಡಿಸಿಕೊಂಡು ಕೂಡಲೇ ಅಶ್ವಿನಿ ಅವರನ್ನು ಅಂಚೆ ಕಚೇರಿಗೆ ಕರೆಸಿ ಚಿನ್ನ ಮತ್ತು ನಗದು ಕೈಚೀಲವನ್ನು ಅವರಿಗೆ ಹಿಂತಿರುಗಿಸಲಾಯಿತು.