ಮಡಿಕೇರಿ, ಫೆ. ೨೪: ಇಡೀ ದೇಶದಲ್ಲಿ ಮೊದಲಿಗೆ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ಬಂದಿದ್ದ ರಾಷ್ಟಿçÃಯ ಶಿಕ್ಷಣ ನೀತಿ ೨೦೨೦ (ಎನ್.ಇ.ಪಿ) ೨೦೨೪-೨೫ನೇ ಸಾಲಿನಿಂದ ರಾಜ್ಯದಲ್ಲಿ ರದ್ದುಗೊಳ್ಳಲಿದ್ದು, ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿ (ಎಸ್.ಇ.ಪಿ) ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರ ದೇಶದಲ್ಲಿ ೨೦೨೦ ರಲ್ಲಿ ರಾಷ್ಟಿçÃಯ ಶಿಕ್ಷಣ ನೀತಿಯನ್ನು (ಎನ್.ಇ.ಪಿ) ಜಾರಿಗೆ ತಂದಿತ್ತು.
ಎನ್.ಇ.ಪಿ ಯಡಿ ಪರಚಯಿಸಿದ್ದ ನಾಲ್ಕು ವರ್ಷಗಳ ಡಿಗ್ರಿ ಕೋರ್ಸ್ ಹಾಗೂ ಬಹು ಐಚ್ಛಿಕ ವಿಷಯಗಳ ಆಯ್ಕೆಯ ಅವಕಾಶಗಳನ್ನು ಹಾಲಿ ಕಾಂಗ್ರೆಸ್ ೨೦೨೪-೨೫ನೇ ಸಾಲಿನಿಂದ ಕೈ ಬಿಡುವುದು ಬಹುತೇಕ ಖಚಿತವಾಗಿವೆ. ರಾಜ್ಯದಲ್ಲಿ ಈ ಮೊದಲು ಜಾರಿಯಲ್ಲಿದ್ದ ಮೂರು ವರ್ಷಗಳ ಡಿಗ್ರಿ ಕೋರ್ಸ್ ಮುಂದಿನ ಶೈಕ್ಷಣಿಕ ವರ್ಷದಿಂದ ಮರು ಜಾರಿಯಾಗಲಿದೆ. ರಾಜ್ಯಾದ್ಯಂತ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎನ್.ಇ.ಪಿ ಯಡಿಲ್ಲಿ ಪದವಿ ತರಗತಿಗಳು ನಡೆಯುತ್ತಿವೆ.
ಎಸ್.ಇ.ಪಿ ಜಾರಿಗೆ ತರಲು ಡಾ ಸುಖದೇವ್ ಥೋರಟ್ ಆಯೋಗ ರಚಿಸಿದ್ದ ಕಾಂಗ್ರೆಸ್ ಸರ್ಕಾರ!
ರಾಷ್ಟಿçÃಯ ಶಿಕ್ಷಣ ನೀತಿ (ಎನ್.ಇ.ಪಿ) ಕೈ ಬಿಟ್ಟು ರಾಜ್ಯ ಪ್ರತ್ಯೇಕ ಶಿಕ್ಷಣ ನೀತಿಯನ್ನು (ಎಸ್.ಇ.ಪಿ) ಜಾರಿಗೆ ತರಲು ಹಾಲಿ ಕಾಂಗ್ರೆಸ್ ಸರ್ಕಾರ ಡಾ.ಸುಖದೇವ್ ಥೋರಟ್ ನೇತೃತ್ವದ ಆಯೋಗವನ್ನು ರಚಿಸಿತ್ತು. ಡಾ. ಸುಖದೇವ್ ಥೋರಟ್ ನೇತೃತ್ವದ ಆಯೋಗವು ಎನ್.ಇ.ಪಿಯಡಿ ಪರಿಚಯಿಸಿದ್ದ ನಾಲ್ಕು ವರ್ಷಗಳ ಪದವಿ ಹಾಗೂ ಬಹು ಐಚ್ಛಿಕ ವಿಷಯಗಳ ಆಯ್ಕೆಯ ಅವಕಾಶಗಳನ್ನು ಕೈ ಬಿಡಲು ಮಧ್ಯಂತರ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಥೋರಟ್ ಆಯೋಗದ ಮಧ್ಯಂತರ ವರದಿಗೆ ಉನ್ನತ ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮತ್ತಿಯಷ್ಟೇ ಬಾಕಿ ಉಳಿದಿದೆ.
ಎನ್.ಇ.ಪಿ ಜಾರಿಯಾದಾಗ ಪದವಿ ಸೇರಿದ್ದ ವಿದ್ಯಾರ್ಥಿಗಳು ೩ನೇ ವರ್ಷದ ಪದವಿ ವಿದ್ಯಾರ್ಥಿಗಳು!
೨೦೨೦-೨೧ನೇ ಸಾಲಿನಲ್ಲಿ ರಾಜ್ಯದಲ್ಲಿ ಎನ್.ಇ.ಪಿ ಜಾರಿಯಾದಾಗ ಪ್ರಥಮ ವರ್ಷ ಪದವಿ ಸೇರಿದ್ದ ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಮೂರನೇ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ. ಎನ್.ಇ.ಪಿ ಯಥಾಸ್ಥಿತಿ ಮುಂದುವರೆದರೆ, ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳು ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ೪ನೇ ವರ್ಷದ ‘ಆನರ್ಸ್’ ಪದವಿ ವ್ಯಾಸಾಂಗ ಮಾಡಬೇಕಾಗುತ್ತದೆ. ಈಗಿನ ವೇಳಾಪಟ್ಟಿ ಅನ್ವಯ ಮಂಗಳೂರು ವಿಶ್ವವಿದ್ಯಾಲಯದ ಹಾಗೂ ಕೊಡಗು ವಿಶ್ವವಿದ್ಯಾಲಯದಲ್ಲಿ ೨೦೨೪ ಜೂನ್ ಅಥವಾ ಜುಲೈ ತಿಂಗಳಲ್ಲಿ ನಾಲ್ಕು ವರ್ಷಗಳ ‘ಆನರ್ಸ್’ ಪದವಿ ಕೋರ್ಸ್ ಆರಂಭವಾಗಬೇಕು. ಇದೀಗ ಸರ್ಕಾರವು ಡಾ. ಸುಖದೇವ್ ಥೋರಟ್ ಆಯೋಗದ ಮಧ್ಯಂತರ ವರದಿ ಜಾರಿಗೆ ತರುವ ಮೂಲಕ ಈ ಹಿಂದೆ ಇದ್ದಂತೆ ಪದವಿ ಶಿಕ್ಷಣವನ್ನು ಮೂರು ವರ್ಷಕ್ಕೆ ಸೀಮಿತಗೊಳಿಸಲು ಮುಂದಾಗಿದೆ.
ಎನ್.ಇ.ಪಿಯಡಿ ಮೂರನೇ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳ ಪದವಿ ತರಗತಿಗಳು ೨೦೨೩-೨೪ನೇ ಇದೇ ಶೈಕ್ಷಣಿಕ ಸಾಲಿಗೆ ಅಂತ್ಯವಾಗಲಿದೆ. ನಾಲ್ಕನೇ ವರ್ಷದ ಪದವಿ ಕೋರ್ಸ್ ಓದುವ ಅವಶ್ಯಕತೆ ಇರುವುದಿಲ್ಲ.
ಬಹು ಐಚ್ಛಿಕ ವಿಷಯ!
ಕಲಾ ವಿದ್ಯಾರ್ಥಿ, ವಾಣಿಜ್ಯ ವಿಭಾಗದ ವಿಷಯ ಆಯ್ಕೆ ಮಾಡಬಹುದಿತ್ತು!
ರಾಷ್ಟಿçÃಯ ಶಿಕ್ಷಣ ನೀತಿಯಡಿ (ಎನ್.ಇ.ಪಿ) ಬಹು ಐಚ್ಛಿಕ ವಿಷಯಗಳನ್ನು ಅಧ್ಯಯನ ಮಾಡುವ ಅವಕಾಶವಿತ್ತು. ಅಂದರೆ ಕಲಾ, ವಾಣಿಜ್ಯ, ವಿಜ್ಞಾನ ಸೇರಿದಂತೆ ಯಾವುದೇ ವಿಭಾಗದ ವಿದ್ಯಾರ್ಥಿಗಳು ಅದೇ ವಿಭಾಗದ ವಿಷಯಗಳಿಗಷ್ಟೇ ಸೀಮಿತವಾಗದೆ ೪ ವರ್ಷಗಳಲ್ಲಿ ತಮ್ಮ ಮೂಲ ವಿಭಾಗದ ಐಚ್ಛಿಕ ವಿಷಯಗಳ ಜೊತೆಗೆ ತಮಗೆ ಆಸಕ್ತಿ ಇರುವ ಬೇರೆ ಬೇರೆ ವಿಭಾಗದ ಐಚ್ಛಿಕ ವಿಷಯಗಳನ್ನು ಅಧ್ಯಯನ ಮಾಡಲು ಎನ್.ಇ.ಪಿ ಯಲ್ಲಿ ಅವಕಾಶ ನೀಡಲಾಗಿತ್ತು.
ಬಹು ಪ್ರವೇಶ, ಬಹು ನಿರ್ಗಮನಕ್ಕೆ ಅವಕಾಶ!
ರಾಷ್ಟಿçÃಯ ಶಿಕ್ಷಣ ನೀತಿಯಲ್ಲಿ ಬಹುಪ್ರವೇಶ, ಬಹು ನಿರ್ಗಮನ ಪದ್ಧತಿಗೆ ಅವಕಾಶ ನೀಡಲಾಗಿತ್ತು. ಪದವಿ ವ್ಯಾಸಾಂಗದ ಮಧ್ಯೆ ಯಾವುದೇ ವರ್ಷದಲ್ಲಿ ಓದು ಮೊಟಕುಗೊಳಿಸಿದರು ಕೂಡ,ವರ್ಷದ ಅಧ್ಯಯನಕ್ಕೆ ಸೀಮಿತವಾಗಿ ಪ್ರಮಾಣ ಪತ್ರ ಪಡೆಯಲು ಅವಕಾಶವಿತ್ತು. ಯಾವಾಗ ಬೇಕಾದರೂ ಮೊಟಕುಗೊಳಿಸಿದ ವರ್ಷದಿಂದಲೇ ಓದು ಮುಂದುವರಿಸಲು ಬಹು ಪ್ರವೇಶ ಹಾಗೂ ಬಹು ನಿರ್ಗಮನಕ್ಕೆ ಅವಕಾಶವಿತ್ತು.
ಈ ಪದ್ಧತಿಗೆ ದೊಡ್ಡ ಅಪಸ್ವರ ಎದ್ದಿತ್ತು. ಅಂದಿನ ರಾಜ್ಯ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಕೇಂದ್ರ ಜಾರಿಗೆ ತಂದಿರುವ ಎನ್.ಇ.ಪಿ ಯನ್ನು ಜಾರಿಗೆ ತಂದಿದೆ ಎಂದು ಹೇಳಿ ಕಾಂಗ್ರೆಸ್, ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು. ಹಾಗೂ ದೇಶದಲ್ಲಿ ಅಪಸ್ವರ ಎದಿತ್ತು. ಕೆಲವು ರಾಜ್ಯಗಳಲ್ಲಿ ಎನ್.ಇ.ಪಿ ಇಂದಿಗೂ ಕೂಡ ಜಾರಿಯಾಗಿಲ್ಲ. ಎನ್.ಪಿಯನ್ನು ವಿರೋಧ ಪಕ್ಷಗಳು ನಾಗ್ಪುರ ಎಜುಕೇಶನ್ ಪಾಲಿಸಿ ಎಂದು ಟೀಕಿಸಿದ್ದರು.
ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎನ್.ಇ.ಪಿಯನ್ನು ರದ್ದುಗೊಳಿಸಿ ಎಸ್.ಇ.ಪಿಯನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದು, ಪ್ರಣಾಳಿಕೆಯನ್ನು ಪೂರೈಸಲಿದೆ.
- ಕೆ.ಎಂ ಇಸ್ಮಾಯಿಲ್ ಕಂಡಕರೆ