ಕಣಿವೆ, ಫೆ. ೨೪: ತೊರೆನೂರು ಗ್ರಾಮದಲ್ಲಿ ಪುರುಷರೇ ಸೇರಿ ಮಾಡಿಕೊಂಡಿರುವ ಸೂರ್ಯೋದಯ ಹೆಸರಿನ ಸ್ವಸಹಾಯ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಗ್ರಾಮೀಣ ಸೊಗಡು ನೋಡುಗರ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಧಾವಿಸಿದ ಗಣ್ಯರನ್ನು ಅಲಂಕೃತ ಎತ್ತಿನ ಬಂಡಿಯ ಮೇಲೆ ವಾದ್ಯಗೋಷ್ಠಿ ಹಾಗೂ ಕಲಶ ಹೊತ್ತ ಮುತ್ತೆöÊದೆಯರೊಂದಿಗೆ ಊರ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆ ಸಾಗುವ ಮಾರ್ಗದ ಬೀದಿಗಳ ಪ್ರತಿ ಮನೆ ಮನೆಗಳ ಅಂಗಳಗಳಲ್ಲಿ ಕಣ್ಮನ ಸೆಳೆದ ರಂಗು ರಂಗಿನ ಚಿತ್ತಾರದ ರಂಗೋಲಿ ಹಾಗೂ ತಳಿರು ತೋರಣಗಳು ಅತಿಥಿಗಳಿಗೆ ಮುದ ನೀಡಿದವು.

ರಾಗಿ ಮುದ್ದೆ, ಹುರುಳಿ ಕಟ್ಟಿನ ಸಾರು ಹಾಗೂ ಬೆಣ್ಣೆಯಂತೂ ಅವಿಭಕ್ತ ಕುಟುಂಬಗಳಲ್ಲಿ ಹಾಸು ಹೊಕ್ಕಾಗಿದ್ದ ಆಹಾರ ಪದ್ದತಿಯೇ ಮರುಕಳಿಸಿದಂತಿತ್ತು.

ಕಾರ್ಯಕ್ರಮಕ್ಕೆ ಧಾವಿಸಿದ್ದ ಮುಖ್ಯ ಅತಿಥಿ ಹಳ್ಳಿಕಾರ್ ಹಸುಗಳ ತಳಿಯ ಪಾಲಕ, ರಿಯಾಲಿಟಿ ಶೋನ ಸ್ಪರ್ಧಿ ವರ್ತೂರು ಸಂತೋಷ್ ಅವರ ಹಳ್ಳಿಯ ಸೊಗಡಿನ ಮಾತುಗಳಿಗೆ ಹಳ್ಳಿಯ ಮಂದಿ ಮಾರು ಹೋದರೆ, ಸಂತೋಷ್ ರೊಂದಿಗೆ ಸೆಲ್ಫಿಗೆ ಹಳ್ಳಿಯ ಹೈಕ್ಲು ಮುಗಿ ಬಿದ್ದರು. ಒಟ್ಟಾರೆ, ಬಯಲು ಸೀಮೆಯ ತೊರೆನೂರು ಗ್ರಾಮಕ್ಕೆ ಗ್ರಾಮವೇ ಗ್ರಾಮ ಸಿರಿಗೆ ಮಾರು ಹೋದಂತಿತ್ತು. ಗ್ರಾಮದ ಮುಖ್ಯ ರಸ್ತೆಗಳಲ್ಲಿ ಕಾರ್ಯಕ್ರಮದ ಅಂಗವಾಗಿ ಅಳವಡಿಸಿದ್ದ ಪ್ಲೆಕ್ಸ್ಗಳಲ್ಲಿ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರ ಭಾವಚಿತ್ರಗಳು ನೋಡುಗರ ಗಮನ ಸೆಳೆದವು. ಸಮಯ ಪಾಲನೆಗೆ ಹೆಸರಾದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿನ ಸಮಯಕ್ಕೆ ಸರಿಯಾಗಿ ಧಾವಿಸಿ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗಿಯಾದರೆ, ಸಮಯ ಪಾಲನೆ ಮರೆತ ಹಾಲಿ ಶಾಸಕ ಡಾ. ಮಂಥರ್‌ಗೌಡ ಮಧ್ಯಾಹ್ನ ೩ ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಮಹಿಳಾ ಸ್ವಸಹಾಯ ಗುಂಪುಗಳೇ ಹೆಚ್ಚಾಗಿ ಇರುವ ಜಿಲ್ಲೆಯಲ್ಲಿ ಇರುವ ಬೆರಳೆಣಿಕೆಯ ಪುರುಷ ಸ್ವಸಹಾಯ ಸಂಘ ವಿಭಿನ್ನವಾದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು.

- ಕೆ.ಎಸ್.ಮೂರ್ತಿ