ಮಡಿಕೇರಿ, ಫೆ. ೨೪: ಪೊನ್ನಂಪೇಟೆ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸುವಂತೆ ಕಿಗ್ಗಟ್‌ನಾಡ್ ಹಿರಿಯ ನಾಗರಿಕ ವೇದಿಕೆಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ.

ಕೊಡಗಿನ ಪೊನ್ನಂಪೇಟೆ ಪಟ್ಟಣವು, ಪೊನ್ನಂಪೇಟೆ ತಾಲೂಕಿನ ಮುಖ್ಯ ಕೇಂದ್ರ ಈಗ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಲ್ಪಟ್ಟಿದೆ.

ಪೊನ್ನಂಪೇಟೆಯಲ್ಲಿ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಒಂದಿದೆ. ಈ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲ ಹಲವಾರು ಹಳ್ಳಿಗಳು ಅಡಕವಾಗಿವೆ. ಆದರೆ, ಈ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಓರ್ವ ಖಾಯಂ ವೈದ್ಯರಿಲ್ಲದೆ ಈ ಹಲವಾರು ಹಳ್ಳಿಗಳ ನಿವಾಸಿಗಳು ಅಂದರೆ ಬಡ ರೈತರು, ಕಾರ್ಮಿಕರು, ವೃದ್ಧೆಯರು, ಅಂಗವಿಕಲರು, ಇತ್ಯಾದಿ ದುರ್ಬಲ ಜನರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಆದಷ್ಟು ಶೀಘ್ರ ಓರ್ವ ಖಾಯಂ ವೈದ್ಯರನ್ನು ಪೊನ್ನಂಪೇಟೆ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೇಮಿಸಿ ಅಮಾಯಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಪತ್ರದ ಮೂಲಕ ವೇದಿಕೆಯ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರು ಮನವಿ ಮಾಡಿದ್ದಾರೆ.