ಪೊನ್ನಂಪೇಟೆ, ಫೆ. ೨೪: ಸರ್ವಧರ್ಮ ಸಮನ್ವಯತೆ ಮತ್ತು ಸಹೋದರತೆಯ ಪ್ರತೀಕವಾಗಿ ನೆಲೆ ನಿಂತಿರುವ ದೇಶದ ಐಕ್ಯತೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಂದು ಧರ್ಮದವರ ಮೇಲಿದೆ. ಈ ಕುರಿತು ನಿರ್ಲಕ್ಷತೆ ವಹಿಸಿದರೆ ಮುಂದಿನ ಪೀಳಿಗೆಗೆ ಅದರ ಪರಿಣಾಮ ಎದುರಾಗಲಿದೆ ಎಂದು ಧಾರ್ಮಿಕ ವಿದ್ವಾಂಸ ನೌಫಲ್ ಸಖಾಫಿ ಕಳಸ ಎಚ್ಚರಿಸಿದ್ದಾರೆ.

ವೀರಾಜಪೇಟೆ ಸಮೀಪದ ಅಂಬಟ್ಟಿ ದರ್ಗಾ ಶರೀಫಿನ ಶೇಕ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಜಾತಿ, ಮತ ಭೇದವಿಲ್ಲದೆ ವರ್ಷಂಪ್ರತಿ ನಡೆಯುವ ಅಂಬಟ್ಟಿ ಮಖಾಂ ಉರೂಸ್‌ನ ಸಮಾರೋಪದ ಅಂಗವಾಗಿ ನಡೆದ ಸಾರ್ವಜನಿಕ ಸೌಹಾರ್ದ ಸಮ್ಮೇಳನದಲ್ಲಿ ಪ್ರಧಾನ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ದ್ವೇಷದಿಂದ ಸಮಾಜದಲ್ಲಿ ಯಾರಿಗೂ, ಏನನ್ನು ಸಾಧಿಸಲು ಸಾಧ್ಯವಿಲ್ಲ. ಎಲ್ಲಾ ಧರ್ಮಗಳು ಸಹೋದರತೆಯನ್ನು ಎತ್ತಿ ಹಿಡಿಯಬೇಕೆಂದು ಸಾರಿದ್ದರೂ ಅದು ನಿರೀಕ್ಷಿತ ಪ್ರಮಾಣದಲ್ಲಿ ಜಾರಿಯಾಗುತ್ತಿಲ್ಲ. ಪ್ರತಿಯೊಬ್ಬರಲ್ಲೂ ಸಹೋದರತೆಯ ಮನೋಭಾವ ಮೂಡಿದರೆ ಸಮಾಜದಲ್ಲಿ ಸಂಘರ್ಷದ ವಾತಾವರಣವೇ ಇರುವುದಿಲ್ಲ ಎಂದು ಹೇಳಿದರು.

ವಿವಿಧತೆಯಲ್ಲಿ ಏಕತೆಯನ್ನು ಸಾರುವ ವಿಶಾಲವಾದ ರಾಷ್ಟçಕ್ಕೆ ಹೊಂದುವAತಹ ವಿಶಿಷ್ಟ ಸಂವಿಧಾನವನ್ನು ನಾವು ಹೊಂದಿದ್ದೇವೆ. ಈ ಸಂವಿಧಾನದ ದೃಷ್ಟಿಯಲ್ಲಿ ಬಡವ-ಬಲ್ಲಿದ ಎಲ್ಲರೂ ಸಮಾನರು. ಆದರೂ ನಮ್ಮ ಸಮಾಜದಲ್ಲಿ ಮನುಷ್ಯರ ಮಧ್ಯೆ ಕಂದಕಗಳು ಸೃಷ್ಟಿಯಾಗಿವೆ. ಇವುಗಳನ್ನು ಹೋಗಲಾಡಿಸಿ ರಾಷ್ಟಿçÃಯ ಏಕತೆಯನ್ನು ಪೋಷಿಸಲು ಪ್ರತಿಯೊಬ್ಬರೂ ಪಣತೊಡಬೇಕು. ಏನೇ ಭಿನ್ನತೆ ಇದ್ದರೂ ಅದನ್ನು ಮರೆತು

(ಮೊದಲ ಪುಟದಿಂದ) ಭ್ರಾತೃತ್ವದಿಂದ ಮತ್ತು ಶಾಂತಿಯಿAದ ಬಾಳುವ ಮೂಲಕ ರಾಷ್ತ್ರೀಯ ಏಕತೆಯನ್ನು ಸದಾ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಅಂಬಟ್ಟಿ ಜಮಾಅತ್‌ನ ಅಧ್ಯಕ್ಷ ಎ.ಎಚ್. ಸಾದುಲಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಅಕ್ಕಳತಂಡ ಎಸ್. ಮೊಯ್ದು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಳವಂಡ ಅರವಿಂದ ಕುಟ್ಟಪ್ಪ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ.ಎ. ಹನೀಫ್, ಅಂಬಟ್ಟಿ ಖಾಲಿದ್ ಫೈಝಿ, ಪ್ರಮುಖರಾದ ಕೋಳುಮಂಡ ರಫೀಕ್, ಸ್ಥಳೀಯ ಗ್ರಾ. ಪಂ. ಸದಸ್ಯರಾದ ಚಂಗೇಟ್ಟಿರ ರಾಜ ಸೋಮಯ್ಯ, ಜಮಾಅತ್ ಮಾಜಿ ಅಧ್ಯಕ್ಷ ಕೆ.ಎ. ಯೂಸುಫ್, ಹಿರಿಯರಾದ ಕೆ.ಎ. ಆಲಿ, ಜಮಾಅತ್ ಕಾರ್ಯದರ್ಶಿ, ಜುಬೈರ್ ಅಹ್ಮದ್ ಮೊದಲಾದವರು ಪಾಲ್ಗೊಂಡಿದ್ದರು. ಅಂಬಟ್ಟಿ ಜಮಾಅತ್‌ನ ಆಡಳಿತ ಮಂಡಳಿ ಸಹ ಕಾರ್ಯದರ್ಶಿ ಆಶಿಕ್ ಶರೀಫ್ ಸ್ವಾಗತಿಸಿದರು. ಮಸೀದಿಯ ಸದರ್ ಉಸ್ತಾದ್ ಅಶ್ರಫ್ ಹಳ್ರಮಿ ವಂದಿಸಿದರು.

ಕಾರ್ಯಕ್ರಮದ ನಂತರ ಸೇರಿದ್ದ ಸಾವಿರಾರು ಜನರಿಗೆ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಇದಕ್ಕೂ ಮೊದಲು ಅಂಬಟ್ಟಿ ದರ್ಗಾ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು. ರಾತ್ರಿ ದರ್ಗಾ ಆವರಣದಲ್ಲಿ ಬುರ್ದಾ ಮಜ್ಲೀಸ್ ಆಯೋಜಿಸಲಾಗಿತ್ತು.