ಶರಣಬಸಪ್ಪ ಮಾಹಿತಿ
ಕುಶಾಲನಗರ, ಫೆ. ೨೩: ವೀರಾಜಪೇಟೆ ವಿಭಾಗದಲ್ಲಿ ಅರಣ್ಯದ ನಡುವೆ ಪ್ರಾಕೃತಿಕವಾಗಿ ತೊರೆಗಳು ಹರಿಯುತ್ತಿರುವ ಕಾರಣ ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಂಬAಧ ಯಾವುದೇ ರೀತಿಯ ಅನಾನುಕೂಲತೆ ಉಂಟಾಗಿಲ್ಲ ಎಂದು ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ ತಿಳಿಸಿದ್ದಾರೆ.
ಬಿರುಬಿಸಿಲಿನ ಹಿನ್ನೆಲೆಯಲ್ಲಿ ಅರಣ್ಯಗಳಲ್ಲಿ ವನ್ಯಜೀವಿಗಳ ಸಮಸ್ಯೆಗಳಿಗೆ ಸಂಬAಧಿಸಿದAತೆ ‘ಶಕ್ತಿ’ ಅವರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಬಯಸಿದಾಗ ವೀರಾಜಪೇಟೆ ವಿಭಾಗ ವ್ಯಾಪ್ತಿಯ ಮಾಕುಟ್ಟ, ಮುಂಡ್ರೋಟ್ ಅರಣ್ಯ ವ್ಯಾಪ್ತಿಯಲ್ಲಿ ಪ್ರಕೃತಿದತ್ತವಾಗಿ ತೊರೆಗಳಲ್ಲಿ ನೀರು ಹರಿಯುವ ಕಾರಣ ವನ್ಯಜೀವಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳು ಇದುವರೆಗೆ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ.
ವಿಭಾಗದ ಅರಣ್ಯ ವ್ಯಾಪ್ತಿ ನಾಗರಹೊಳೆ ಯೋಜನೆ ಗಡಿಭಾಗದಲ್ಲಿದ್ದು ಆ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಿದ್ದು ಇದು ವಿಭಾಗದ ಅರಣ್ಯ ವನ್ಯಜೀವಿಗಳಿಗೆ ಸಹಕಾರಿಯಾಗಿದೆ. ಉಳಿದಂತೆ ಬಹುತೇಕ ಅರಣ್ಯ ತಿತಿಮತಿ-ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಕಾಫಿ ತೋಟಗಳ ಒತ್ತಿನಲ್ಲಿದ್ದು, ಈ ಪ್ರದೇಶಗಳಲ್ಲಿ ನೀರಿನ ಕೊರತೆ ಕಂಡುಬAದಿಲ್ಲ ಎಂದು ಅವರು ಹೇಳಿದ್ದಾರೆ. ಕಾಡ್ಗಿಚ್ಚು ಹಬ್ಬದಂತೆ ಈಗಾಗಲೇ ಅರಣ್ಯ ಗಡಿ ಅಂಚಿನಲ್ಲಿ ಬೆಂಕಿ ಗಡಿ ರೇಖೆ ನಿರ್ಮಿಸಲಾಗಿದೆ.
ಸುಮಾರು ೧೧೨ ಕಿಲೋಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ಬೆಂಕಿ ರೇಖೆ ಅಳವಡಿಸಲಾಗಿದ್ದು ಇಲಾಖೆಯ ಸಿಬ್ಬಂದಿಗಳು ಕಟ್ಟೆಚ್ಚರ ವಹಿಸುತ್ತಿದ್ದಾರೆ ಎಂದು ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಗಡಿಭಾಗ ಚೇರಂಗಾಲ ವ್ಯಾಪ್ತಿಯಲ್ಲಿ ಕೂಡ ಯಾವುದೇ ರೀತಿಯ ಬೆಂಕಿ ಅನಾಹುತ ಉಂಟಾಗದAತೆ ಗಮನಹರಿಸಲಾಗಿದೆ ಎಂದು ಶರಣಬಸಪ್ಪ ತಿಳಿಸಿದ್ದಾರೆ.