ಸೋಮವಾರಪೇಟೆ, ಫೆ. ೨೩: ಎಸ್‌ವೈಎಸ್ ಮತ್ತು ಎಸ್‌ಎಸ್‌ಎಫ್ ಸೋಮವಾರಪೇಟೆ ಸರ್ಕಲ್ ನೇತೃತ್ವದಲ್ಲಿ ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.

ಶಿಬಿರಕ್ಕೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ಚಾಲನೆ ನೀಡಿದರು. ನಂತರ ಮಾತನಾಡಿ, ಹಿಂದೆAದಿಗಿAತಲೂ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಕ್ತದ ಬೇಡಿಕೆ ಹೆಚ್ಚಿದ್ದು, ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ತುರ್ತು ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಎರಡು ಮೂರು ದಿನಗಳಿಗೊಮ್ಮೆಯಾದರೂ, ರಕ್ತದಾನ ಶಿಬಿರಗಳು ನಡೆದಲ್ಲಿ ಸಮಸ್ಯೆಯಿಂದ ಪಾರಾಗಬಹುದು ಎಂದರು.

ಜಿಲ್ಲೆಯವರೊAದಿಗೆ ಹೊರ ಜಿಲ್ಲೆಯಿಂದಲೂ ಸಾಕಷ್ಟು ರೋಗಿಗಳು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುತ್ತಿರುವುದರಿಂದ ೫೦೦ಕ್ಕೂ ಹೆಚ್ಚಿನ ಯೂನಿಟ್ ರಕ್ತ ಬೇಕಾಗಿದೆ. ಎಲ್ಲ ಗುಂಪಿನ ರಕ್ತವನ್ನು ಸಂಗ್ರಹ ಮಾಡಬೇಕಿರುವುದರಿಂದ ಕೊರತೆ ಹೆಚ್ಚಾಗಿದೆ. ರಕ್ತದಾನದಿಂದ ನಮ್ಮಲ್ಲಿ ಯಾವುದಾದರೂ ಕಾಯಿಲೆಗಳಿದ್ದಲ್ಲಿ ಕಂಡುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಆರೋಗ್ಯವಂತರು ವರ್ಷಕ್ಕೆ ಮೂರು ಬಾರಿಯಾದರೂ ರಕ್ತದಾನ ಮಾಡಬಹುದು ಎಂದು ತಿಳಿಸಿದರು.

ಈ ಹಿಂದೆ ಇದ್ದ ಮೂಢನಂಬಿಕೆ, ಭಯ ಮತ್ತು ಆತಂಕವನ್ನು ಬಿಟ್ಟು ಹೆಚ್ಚಾಗಿ ರಕ್ತದಾನಕ್ಕೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ. ಕಾಲೇಜಿನ ವಿದ್ಯಾರ್ಥಿಗಳಲ್ಲೂ ರಕ್ತದಾನ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದ್ದು, ಯುವ ಜನರು ಇನ್ನೂ ಹೆಚ್ಚಾಗಿ ರಕ್ತದಾನದಲ್ಲಿ ಪಾಲ್ಗೊಂಡು ಮತ್ತೊಂದು ಜೀವದ ಉಳಿವಿಗೆ ಮುಂದಾಗಬೇಕೆAದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ವೈಎಸ್ ಸೋಮವಾರಪೇಟೆ ಸರ್ಕಲ್ ಅಧ್ಯಕ್ಷ ಶಾಫಿ ಸಹದಿ ಮಾತನಾಡಿ, ನಮ್ಮ ಸಂಸ್ಥೆ ದೇಶದ ಸಂವಿಧಾನವನ್ನು ಗೌರವಿಸುವ ಮೂಲಕ ಸಮಾಜ ಸೇವೆ ಮಾಡಿಕೊಂಡು ಬರುತ್ತಿದೆ. ಕೆಲವು ಸಂಘಟನೆಗಳು ಇಸ್ಲಾಂ ಹೆಸರಿನಲ್ಲಿ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿರುವುದು, ಕುರಾನ್ ಮತ್ತು ಪ್ರವಾದಿ ವಿರೋಧಿ ಕೆಲಸವಾಗಿದೆ. ಎಲ್ಲರೂ ಒಂದಾಗಿ ಬದುಕಬೇಕೆನ್ನುವ ಉದ್ದೇಶದಿಂದ ಕಳೆದ ಹಲವಾರು ವರ್ಷಗಳಿಂದ ಯಾವುದೇ ಕಪ್ಪುಚುಕ್ಕೆ ಬಾರದ ರೀತಿಯಲ್ಲಿ ಸಾಮಾಜಮುಖಿ ಕೆಲಸಗಳನ್ನು ಎಸ್‌ವೈಎಸ್ ಮತ್ತು ಎಸ್‌ಎಸ್‌ಎಫ್ ಮಾಡಿಕೊಂಡು ಬರುತ್ತಿದೆ ಎಂದರು.

ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ, ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಾಲಕೃಷ್ಣ, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗಂಗಾಧರ್, ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ಉಪಸ್ಥಿತರಿದ್ದರು.