ಶನಿವಾರಸಂತೆ, ಫೆ. ೨೩: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅವರ ಅಧ್ಯಕ್ಷತೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಿರ್ಮಿಸಿರುವ ಮೊದಲ ಅಂತಸ್ತಿನ ೬ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಸಭೆ ನಡೆಯಿತು.

ಹರಾಜು ಪ್ರಕ್ರಿಯೆಯಲ್ಲಿ ೪ ಜನ ಬಿಡ್ಡುದಾರರು ಪಾಲ್ಗೊಂಡಿದ್ದರು. ೨ ಮಳಿಗೆಗಳ ಹರಾಜು ನಡೆಯಿತು. ಮಳಿಗೆ ಸಂಖ್ಯೆ ೯ ಅನ್ನು ಮಾಸಿಕ ಬಾಡಿಗೆ ರೂ. ೭ ಸಾವಿರಕ್ಕೆ ಮತ್ತು ಮಳಿಗೆ ಸಂಖ್ಯೆ ೧೨ ಅನ್ನು ರೂ. ೪,೫೦೦ ಬಾಡಿಗೆಗೆ ಪ್ರತ್ಯೇಕ ಜಿ.ಎಸ್.ಟಿ.ಯಂತೆ ಹರಾಜು ಪ್ರಕ್ರಿಯೆ ನಡೆಯಿತು. ಉಳಿದ ೪ ಮಳಿಗೆಗಳನ್ನು ಮರು ಹರಾಜು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿದರು. ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಸದಸ್ಯರಾದ ಎಸ್.ಸಿ. ಶರತ್ ಶೇಖರ್, ಎಸ್.ಎನ್. ರಘು, ಎಸ್.ಆರ್. ಮಧು, ಸರೋಜಾಶೇಖರ್, ಫರ್ಜಾನಾ ಶಾಹಿದ್, ಸರಸ್ವತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಕಾರ್ಯದರ್ಶಿ ದೇವರಾಜ್, ಲೆಕ್ಕಾಧಿಕಾರಿ ವಸಂತ್ ಕುಮಾರ್ ಹಾಗೂ ಸಿಬ್ಬಂದಿ ಹಾಜರಿದ್ದರು.