ಚೆಯ್ಯAಡಾಣೆ, ಫೆ. ೨೩: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಮೇಳ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಲಿಕಾ ಚೇತರಿಕೆಯಲ್ಲಿ ಅಂಗವಾಗಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಮಕ್ಕಳ ಸಂತೆ ಮೇಳ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.
ಮಕ್ಕಳ ಸಂತೆ ಮೇಳವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಉದ್ಘಾಟಿಸಿದರು. ಮಕ್ಕಳ ಸಂತೆ ಮೇಳದ ವ್ಯಾಪಾರ ಮಳಿಗೆ ಕೊಠಡಿಯನ್ನು ಎಸ್‌ಡಿಎಂಸಿ ಅಧ್ಯಕ್ಷೆ ರತ್ನಾ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಸಂತೆ ಮೇಳದಲ್ಲಿ ತಾಜಾ ತರಕಾರಿ, ಹಣ್ಣು ಹಂಪಲು, ಸೊಪ್ಪು, ದಿನಸಿ ಪದಾರ್ಥ, ಆಟಿಕೆಗಳು, ಚುರ್‌ಮುರಿ, ಕೇಕ್, ಜ್ಯೂಸ್, ಪಾನಿಪುರಿ ಮತ್ತಿತರ ವಿವಿಧ ಬಗೆಯ ವಸ್ತುಗಳು ಸಂತೆಯಲ್ಲಿ ಕಂಡುಬAದವು.
ಸAತೆ ಮೇಳದಲ್ಲಿ ವಿದ್ಯಾರ್ಥಿಗಳ ವ್ಯಾಪಾರ ಭರ್ಜರಿಯಾಗಿತ್ತು. ನಾ ಮುಂದು ತಾ ಮುಂದು ಎಂದು ವಿದ್ಯಾರ್ಥಿಗಳು ಗ್ರಾಹಕರನ್ನು ತಮ್ಮೆಡೆಗೆ ಸೆಳೆಯುತ್ತಿರುವ ದೃಶ್ಯ ಕಂಡುಬAತು. ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಾ ಕುಮಾರಿ ಮಾತನಾಡಿ, ಪಾಠ ಬೋಧನೆಯಲ್ಲಿ ವಿದ್ಯಾರ್ಥಿಗಳಿಗೆ ಎಷ್ಟೇ ಕಾರ್ಯಕ್ರಮ ಆಯೋಜಿಸಿದರು ಕೂಡ, ವಿದ್ಯಾರ್ಥಿಗಳಿಗೆ ಅವರ ಮುಂದಿನ ಜೀವನ ತೋರಿಸಿಕೊಡಲು ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಹೊರಸೆಳೆಯುವ ಉದ್ದೇಶದಿಂದ ಈ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸ್ವಂದನ ನೀಡಿದ್ದು, ಹಲವಾರು ವಸ್ತುಗಳನ್ನು ತಂದು ಮಾರಾಟ ಮಾಡಿ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಎಸ್‌ಡಿಎAಸಿ ಉಪಾಧ್ಯಕ್ಷೆ ಭವ್ಯ, ಗ್ರಾಮ ಪಂಚಾಯಿತಿ ಬಿಲ್‌ಕಲೆಕ್ಟರ್ ದಿನೇಶ್, ಶಿಕ್ಷಕಿ ಜಯಪ್ರದ, ದಮಯಂತಿ, ಸತ್ಯಮ್ಮ, ಎಸ್‌ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.