ಐಗೂರು, ಫೆ. ೨೩: ಸ್ಥಳೀಯ ಐಗೂರಿನ ಏಕದಂತ ಗೆಳೆಯರ ಬಳಗದ ವತಿಯಿಂದ ಛತ್ರಪತಿ ಶಿವಾಜಿ ಜಯಂತಿ ಪ್ರಯುಕ್ತ ಐಗೂರಿನ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಐಗೂರು ವ್ಯಾಪ್ತಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಿತು.
ಲೀಗ್ ಮಾದರಿಯಲ್ಲಿ ೨೫ ಅಂಕಗಳಿಗೆ ಸೀಮಿತಗೊಂಡ ಈ ಪಂದ್ಯಾವಳಿಯಲ್ಲಿ ಒಟ್ಟು ೧೦ ತಂಡಗಳು ಭಾಗವಹಿಸಿದ್ದವು. ಈ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳಾದ ಟೀಮ್ ಚರಿಸ್ ರಾಮ್, ಯಂಗ್ ಸ್ಟಾರ್, ಟೀಂ ಛತ್ರಪತಿ ಮತ್ತು ಟೀಮ್ ಹನುಮಾನ್ ಅಂತಿಮ ಸುತ್ತಿಗೆ ಪ್ರವೇಶಿಸಿತು. ಕೊನೆಗೆ ಲೀಗ್ನಲ್ಲಿದ್ದ ಎಲ್ಲಾ ತಂಡಗಳನ್ನು ಮಣಿಸಿ ಟೀಮ್ ಛತ್ರಪತಿ ಮತ್ತು ಟೀಮ್ ಚೆರಿಸ್ ರಾಮ್ ತಂಡಗಳು ಫೈನಲ್ ಪಂದ್ಯಕ್ಕೆ ಪ್ರವೇಶಿಸಿತು. ಅಂತಿಮ ಹಂತದ ಫೈನಲ್ ಪಂದ್ಯಾವಳಿಯು ತೀವ್ರವಾದ ಹಣಾಹಣಿಯಿಂದ ಕೂಡಿದ್ದು, ೨೫-೨೧ ಅಂತರದ ಅಂಕಗಳಿAದ ಟೀಂ ಚೆರಿಸ್ ರಾಮ್ ತಂಡ ವಿಜಯ ಪತಾಕೆಯನ್ನು ಹಾರಿಸಿ, ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಟೀಮ್ ಛತ್ರಪತಿ ಪಡೆಯಿತು. ಪಂದ್ಯಾವಳಿಯ ಅತ್ಯುತ್ತಮ ಹೊಡೆತಗಾರನಾಗಿ ಚರಿಸ್ರಾಮ್ ತಂಡದ ರಾಜೇಶ್, ಅತ್ಯುತ್ತಮ ತಡೆತಗಾರನಾಗಿ ಛತ್ರಪತಿ ತಂಡದ ದರ್ಶಿತ್ ಬಹುಮಾನ ಗಿಟ್ಟಿಸಿಕೊಂಡರು. ಇದರ ಜೊತೆಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ ಮತ್ತು ವಿಷದ ಚೆಂಡಿನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ತೀರ್ಪುಗಾರರಾಗಿ ರಾಜೇಶ್ ಮತ್ತು ಹೇಮಂತ್ ಕಾರ್ಯನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಧನುಷ್ ನೀಡಿದರು.